ಸಾರಾಂಶ
ಪರಿಸರದ ಸಂರಕ್ಷಣೆಯ ಉಪಯೋಗಗಳ ಬಗ್ಗೆ ಮಕ್ಕಳಿಗೆ ಸೂಕ್ತವಾದ ಮಾಹಿತಿಯನ್ನು ತಿಳಿಸುವುದರ ಜೊತೆಗೆ ಪೋಷಕರಿಗೂ ಕೂಡ ತಿಳಿಸಿ ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಶಾಲೆಯ ಮುಖ್ಯಗುರು ಮಂಜುನಾಥ ರಾಠೋಡ್ ಹೇಳಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಪರಿಸರದ ಕಾಳಜಿ ಹಾಗೂ ಪರಿಸರದ ಸಂರಕ್ಷಣೆಯ ಉಪಯೋಗಗಳ ಬಗ್ಗೆ ಮಕ್ಕಳಿಗೆ ಸೂಕ್ತವಾದ ಮಾಹಿತಿಯನ್ನು ತಿಳಿಸುವುದರ ಜೊತೆಗೆ ಪೋಷಕರಿಗೂ ಕೂಡ ತಿಳಿಸಿ ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಶಾಲೆಯ ಮುಖ್ಯಗುರು ಮಂಜುನಾಥ ರಾಠೋಡ್ ಹೇಳಿದರು.ವಡಗೇರಾ ತಾಲೂಕಿನ ಹಾಲಗೇರಾ ಪ್ರೌಢಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯ್ತಿ ಹಾಗೂ ಫಿರಮಲ್ ಫೌಂಡೇಶನ್ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಪರಿಸರದ ಕುರಿತು ಪ್ರಬಂಧ ಮತ್ತು ಚಿತ್ರಕಲಾ ಮತ್ತು ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ಬಹುಮಾನಗಳನ್ನು ನೀಡಲಾಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಶಾಲಾವರಣದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.
ಫಿರಾಮಲ್ ಫೌಂಡೇಶನ್ ಪ್ರೋಗ್ರಾಮ್ ಲೀಡ್ ಸಂಚಾಲಕ ಅನಿಲ್ ಕುಮಾರ್ ರೆಡ್ಡಿ ಮಾತನಾಡಿ, ಪರಿಸರದ ಕಾಳಜಿ ಬಗ್ಗೆ ತಿಳಿಸುವುದರ ಜೊತೆಗೆ ಗ್ರಾಮೀಣ ಭಾಗದ ಮಕ್ಕಳು ಆದಷ್ಟು ಗೈರು ಹಾಜರಾಗದಂತೆ ನೋಡಿಕೊಳ್ಳಬೇಕು. ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಬೇಕು ಎಂದು ಕರೆ ನೀಡಿದರು.ಫಿರಾಮಲ್ ಫೌಂಡೇಶನ್ ಗಾಂಧಿ ಫೆಲ್ಲೋಗಳಾದ ಮನೋಜ್, ಶಾಹಿದ್, ರಾಹುಲ್, ಸತ್ಯನಾರಾಯಣ ಅವರು ಮಕ್ಕಳಿಗೆ ಪ್ರಬಂಧ, ಚಿತ್ರಕಲಾ ಮತ್ತು ಚರ್ಚಾ ಸ್ಪರ್ಧೆಗಳನ್ನು ನಡೆಸಿಕೊಟ್ಟರು.
ಹಾಲಗೇರಾ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರಾಜ್, ಯಾದಗಿರಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಬಿ. ಬಂಡಿ, ಶಾಲೆ ಸಹ ಶಿಕ್ಷಕರಾದ ಸುಮಾ ಕಂಬಾರ, ಮಡಿವಾಳಪ್ಪ ಗುಡ್ಲರ್, ವಿಶ್ವನಾಥ, ಚಂದ್ರಾಯಗೌಡ, ಪ್ರೇಮಾ ಇತರರಿದ್ದರು.