ಸಾರಾಂಶ
ಕನ್ನಡಪ್ರಭ ವಾರ್ತೆ ಐಗಳಿ
ಪ್ರಾಮಾಣಿಕತೆಯಿಂದ ಗಳಿಸಿದ ಹಣದಲ್ಲಿ ಸ್ವಲ್ಪ ಭಾಗ ಒಳ್ಳೆಯ ಕಾರ್ಯಕ್ಕೆ ಸಹಾಯ ಮಾಡುವ ಮನೋಭಾವ ರೂಢಿಸಿಕೊಳ್ಳಿರಿ, ಎಷ್ಟೇ ಕಷ್ಟ ಬಂದರೂ ಧರ್ಮ ಬಿಡಬಾರದು ಎಂದು ಶ್ರೀಶೈಲ ಫೀಠದ ಜಗದ್ಗುರು ಡಾ.ಚನ್ನಸಿದ್ದರಾಯ್ಯ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.ಸ್ಥಳೀಯ ಆದರ್ಶ ಶಿಕ್ಷಕ ಮುರಿಗೆಪ್ಪ ಐಗಳಿ ದಂಪತಿ ತೋಟದ ಮನೆಯಲ್ಲಿ ಪಾದಪೂಜೆ ನೆರವೇರಿಸಿ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಮನುಷ್ಯ ಹಾಗೂ ಪ್ರಾಣಿಗೆ ವ್ಯತ್ಯಾಸ ಪ್ರಾಣಿಗಳು ನೀರು, ಗಾಳಿ, ಆಹಾರ ಸೇವನೆ ಮಾಡುತ್ತವೆ. ಮನುಷ್ಯನು ಇಷ್ಟೇ ಮಾಡಿದರೇ ನಾವು ಸಹ ಪ್ರಾಣಿಗಳಂತೆ ಆಗುತ್ತೇವೆ. ಮನುಷ್ಯ ಆಗಬೇಕೆಂದರೇ ಮೊದಲು ಧರ್ಮ ಪಾಲನೆ ಮಾಡಬೇಕು. ಪ್ರಾಮಾಣಿಕತೆ, ನೀತಿ, ಧರ್ಮ, ಧಾನ, ಪೂಜೆ ಇನ್ನೊಬ್ಬರಿಗೆ ಸಹಾಯ ಮಾಡುವುದು. ಇದು ನಿಜವಾಗಿ ಮನುಷ್ಯರಲ್ಲಿ ಇರಲೇ ಬೇಕಾದ ಅಂಶಗಳು. ಇನ್ನೊಬ್ಬರನ್ನು ಸದ್ಗುಣದಿಂದ ನೋಡಬೇಕು ಬಿದ್ದವರನ್ನು ಎಬ್ಬಿಸುವ ಕಾರ್ಯ ಮಾಡಬೇಕು. ತುಳಿದು ಬಾಳುವುದಕ್ಕಿಂತ ತಿಳಿದು ಬಾಳುವುದು ಲೇಸು. ಇವುಗಳನ್ನು ನಾವು ಮರೆತರೆ ಭೂಮಿಯ ಮೇಲೆ ಬಾರದ ಮನುಷ್ಯ ರೂಪದ ಪ್ರಾಣಿ ಇದ್ದಂತೆ ಮಾನವನ ಕುಲ ದೊಡ್ಡದು ಕಾಯಕದಿಂದ ದುಡಿದು ಅನ್ನದಾತರಾಗಬೇಕು. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದಲ್ಲಿ ದೇವರು ನಿಮ್ಮ ಕೈ ಎಂದೂ ಬಿಡುವುದಿಲ್ಲ. ಐಗಳಿ ಗ್ರಾಮಕ್ಕೆ ಪ್ರಥಮವಾಗಿ ಆಗಮಿಸಲು ಶಿಕ್ಷಕ ಎಂ.ಕೆ.ಐಗಳಿ ದಂಪತಿ ಸತತ ಪ್ರಯತ್ನದಿಂದ ಮತ್ತು ಶಿಕ್ಷಕ ಮಲ್ಲಪ್ಪ ಸಿಂಧೂರ ದಂಪತಿ ಇವರ ಆಸೆಯ ಮೇರೆಗೆ ಬರಲು ಸಾಧ್ಯವಾಯಿತು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು ಜತೆಗೆ ಸಂಸ್ಕಾರ ಕೊಟ್ಟು ಭಾರತದ ಪ್ರಜೆಯನ್ನಾಗಿ ಮಾಡಿರಿ ಎಂದರು.
ಮುರಗೆಪ್ಪ.ಕ.ಐಗಳಿ(ಶಿಕ್ಷಕ) ದಂಪತಿ ಜಗದ್ಗುರು ಪಾದಪೂಜೆ ಮಾಡಿದರು. ಆರ್.ಆರ್.ಅಲಕುಂಟೆ, ಸಂಗೀತ ಹಾಗೂ ಶಾಲಾ ಮಕ್ಕಳಿಂದ ಸ್ವಾಗತ ಗೀತೆ ಜರುಗಿತು. ಮುತ್ತೂರ ಮಹಾಲಕ್ಷ್ಮೀ ದೇವಾಲಯದಿಂದ ಜಗದ್ಗುರುಗಳನ್ನು ಪಾದಯಾತ್ರಾ ಮೂಲಕ ವಿವಿಧ ವಾಧ್ಯಗಳ ಮೂಲಕ ಭವ್ಯ ಸ್ವಾಗತದಲ್ಲಿ ಗ್ರಾಮದ ಗಣ್ಯರು ಯುವಕರು ಮಹಿಳೆಯರು ಜೈಕಾರ ಮೂಲಕ ಶಿಕ್ಷಕನ ಮನೆಗೆ ತಲುಪಿದರು.ಈ ವೇಳೆ ಕಾಜೀಬೀಳಗಿಯ ಚಿನ್ಮಯಾನಂದ ಸ್ವಾಮೀಜಿ, ಮಾತೋಶ್ರೀ ಉಮಾಮಹೇಶ್ವರ ತಾಯಿ ಇದ್ದರು. ಗ್ರಾಮದ ಹಿರಿಯರಾದ ಕೆ.ಎ.ಎಸ್ ಅಧಿಕಾರಿ ಮಲಗೌಡ ಝರೆ, ಹಿರಿಯ ಪತ್ರಕರ್ತ ಮಲಗೌಡ ಪಾಟೀಲ ದಂಪತಿ, ವಿಜಯಪುರದ ದ್ರೋಣಾಸ್ ಅಕಾಡೆಮಿ ಮುಖ್ಯಸ್ಥ ಕಲ್ಮೇಶ ಆಸಂಗಿ, ಅಪ್ಪಾಸಾಬ ಪಾಟೀಲ, ಸೈದಪ್ಪ ಮಾದರ, ಆಕಾಶ ಮಾದರ, ಕರವೇ ಉಪಾಧ್ಯಕ್ಷರು, ಪ್ರಲ್ಹಾದ ಪಾಟೀಲ, ರುದ್ರಗೌಡ ಪಾಟೀಲ ದಂಪತಿಗಳು, ಅಡಹಳಟ್ಟಿ ದಾನಮ್ಮಾ ಮಹಿಳಾ ಮಂಡಳ ಸದಸ್ಯರನ್ನು ಜಗದ್ಗುರುಗಳಿಂದ ಸತ್ಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಸಿದ್ರಾಮ ಸಿಂಧೂರ, ನಿಂಗನಗೌಡ ಪಾಟೀಲ, ಎ.ಎಸ್.ನಾಯಿಕ, ಆರ್.ಆರ್.ತೆಲಸಂಗ, ಶಿವಾನಂದ ಸಿಂಧೂರ, ಶಿವನಿಂಗ ಅರಟಾಳ, ಮಲ್ಲಿಕಾರ್ಜುನ ಹಿಪ್ಪಿರಗಿ, ಸುರೇಶ ಮಾಕಾಣಿ, ಡಾ.ರವಿ ಮುದಗೌಡರ, ರವೀಂದ್ರ ಹಾಲಳ್ಳಿ, ಸೋಮನಿಂಗ ಝರೆ ಸೇರಿದಂತೆ ಅನೇಕರು ಇದ್ದರು. ಪ್ರಾರಂಭದಲ್ಲಿ ಶಿಕ್ಷಕ ಮುರಿಗೆಪ್ಪ ಐಗಳಿ ಸ್ವಾಗತಿಸಿದರು. ರಾಜಶ್ರೀ ನೇಮಗೌಡ ಹಾಗೂ ಪ್ರಕಾಶ ಬಿರಾದಾರ ನಿರೂಪಿಸಿದರು. ಮಲ್ಲಪ್ಪ ಸಿಂಧೂರ ವಂದಿಸಿದರು.೧೨ ಐಗಳಿ ೦೧
ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ.ಚನ್ನಸಿದ್ದರಾಯ್ಯ ಪಂಡಿತಾರಾದ್ಯ ಮಹಾಸ್ವಾಮಿಗಳು ಐಗಳಿ ಗ್ರಾಮಕ್ಕೆ ಆಗಮಿಸಿದಾಗ ಭವ್ಯ ಸ್ವಾಗತವನ್ನು ಭಕ್ತರು ಮಾಡಿಕೊಂಡರು.