ನವೆಂಬರ್ ನಲ್ಲಿ ಯಾವ ಕ್ರಾಂತಿಯೂ ನಡೆಯಲ್ಲ: ಶಾಸಕ ಶ್ರೀನಿವಾಸ್

| Published : Nov 14 2025, 01:15 AM IST

ನವೆಂಬರ್ ನಲ್ಲಿ ಯಾವ ಕ್ರಾಂತಿಯೂ ನಡೆಯಲ್ಲ: ಶಾಸಕ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಬಿಹಾರ್ ಎಲೆಕ್ಷನ್ ಗೂ ದೆಹಲಿ ಬಾಂಬ್ ಬ್ಲಾಸ್ಟ್ ಗೂ ಯಾವುದೇ ಸಂಬಂಧ ಇಲ್ಲ ಎಂದ ಅವರು, ಬಿಹಾರ ಚುನಾವಣೆ ಸಮೀಕ್ಷೆಯಲ್ಲಿ ಎನ್‌ಡಿಎಗೆ ಗೆಲವು ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕೆಲವು ಕಡೆ ಸಮೀಕ್ಷೆಗಳು ನಿಜವಾಗಿದೆ. ಕೆಲವು ಕಡೆ ಸುಳ್ಳಾಗಿವೆ. ಫಲಿತಾಂಶ ಬಂದ ಮೇಲೆ ಗೊತ್ತಾಗುತ್ತದೆ. ನಾನು ಫಲಿತಾಂಶವನ್ನು ಊಹೆ ಮಾಡುವುದಿಲ್ಲ .

ಕನ್ನಡಪ್ರಭ ವಾರ್ತೆ ತುಮಕೂರು

ಪೂಜೆ ಮಾಡಿದ ತಕ್ಷಣ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರಾ ಎಂದು ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಪ್ರಶ್ನಿಸಿದ್ದಾರೆ.

ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೈಕಮಾಂಡ್ ಏನು ನಿರ್ಧಾರ ಮಾಡುತ್ತಾರೆಯೋ ಅದಕ್ಕೆ ನಾವು ಬದ್ಧರಾಗಿರಬೇಕು. ಇದೆಲ್ಲಾ ತೋರ್ಪಡಿಕೆಗಾಗಿ ಮಾಡುತ್ತಿರುವುದು ಎಂದರು.

ಡಿಕೆಶಿ ಅವರು ದೆಹಲಿಗೆ ಹೋಗುವುದರ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದ ಅವರು, ಯಾವುದೇ ಕ್ರಾಂತಿ ಇಲ್ಲ, ಏನೂ ಇಲ್ಲ, ಕ್ರಾಂತಿ ಎಂದು ಯಾರು ಹೇಳುತ್ತಾರೋ ಅವರನ್ನೇ ಕೇಳಬೇಕು ಎಂದರು.

ದೆಹಲಿಯಲ್ಲಿ ಸ್ಫೋಟ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕೇಂದ್ರ ಸರ್ಕಾರ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದ ಶ್ರೀನಿವಾಸ್, ತನಿಖಾ ಸಂಸ್ಥೆಗಳು ತುಂಬಾ ಜನರನ್ನು ಈಗಾಗಲೇ ಬಂಧಿಸಿದ್ದಾರೆ. ಅವರನ್ನು ಹಿಡಿದು ಮಟ್ಟ ಹಾಕಬೇಕು ಎಂದರು.

ಕೆಲವು ವ್ಯಕ್ತಿಗಳು ಉಗ್ರ ಕೃತ್ಯ ಮಾಡುವುದರಿಂದ ಮುಸ್ಲಿಂ ಸಮಾಜಕ್ಕೂ ಕೆಟ್ಟ ಹೆಸರು. ಆದರೆ ಹಳ್ಳಿಗಾಡುಗಳಲ್ಲಿ ಇಂದಿಗೂ ಕೂಡ ಹಿಂದೂ - ಮುಸ್ಲಿಮರು ಸೌಹಾರ್ಧಯುತವಾಗಿ ಬಾಳುತ್ತಿದ್ದಾರೆ ಎಂದರು.

ಭದ್ರತಾ ವೈಫಲ್ಯ ಎಂದು ಹೇಳಲಿಕ್ಕೆ ಆಗುವುದಿಲ್ಲ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ಉಗ್ರ ಕಸಬ್ ಅನ್ನು ಯಾಕಷ್ಟು ವರ್ಷ ಇಟ್ಟುಕೊಳ್ಳಬೇಕಾಗಿತ್ತು. ಅವನು ಪಾಕಿಸ್ತಾನದಿಂದ ಬಂದಿದ್ದಾನೆ ಎಂದು ಗೊತ್ತಿದ್ದರೂ, ಅವನನ್ನು ಇಟ್ಕೊಂಡು ಅವನಿಗೆ ಭದ್ರತೆ, ಆಹಾರ ಅಂತ ಎಷ್ಟು ಖರ್ಚು ಮಾಡಿದರು ಎಂದು ಪ್ರಶ್ನಿಸಿದರು.

ಬಿಹಾರ್ ಎಲೆಕ್ಷನ್ ಗೂ ದೆಹಲಿ ಬಾಂಬ್ ಬ್ಲಾಸ್ಟ್ ಗೂ ಯಾವುದೇ ಸಂಬಂಧ ಇಲ್ಲ ಎಂದ ಅವರು, ಬಿಹಾರ ಚುನಾವಣೆ ಸಮೀಕ್ಷೆಯಲ್ಲಿ ಎನ್‌ಡಿಎಗೆ ಗೆಲವು ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕೆಲವು ಕಡೆ ಸಮೀಕ್ಷೆಗಳು ನಿಜವಾಗಿದೆ. ಕೆಲವು ಕಡೆ ಸುಳ್ಳಾಗಿವೆ. ಫಲಿತಾಂಶ ಬಂದ ಮೇಲೆ ಗೊತ್ತಾಗುತ್ತದೆ. ನಾನು ಫಲಿತಾಂಶವನ್ನು ಊಹೆ ಮಾಡುವುದಿಲ್ಲ ಎಂದರು.

ಈಗ ಇರುವ ಸಿಎಂ ಮುಂದುವರಿಯುತ್ತಾರೆ ಎಂಬ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಮುಂದುವರಿಯಬಹುದು ಅಂದುಕೊಂಡಿದ್ದೇವೆ.

ಒಳಗಡೆ ಏನು ನಡೆದಿರುತ್ತೋ ನಮಗೆ ಹೇಗೆ ಗೊತ್ತಿರುತ್ತದೆ ಎಂದರು.

ಹೈಕಮಾಂಡ್ ಒಪ್ಪಿದರೆ ನಾನು ಐದು ವರ್ಷ ಸಿಎಂ ಎಂದು ಹಿಂದೆ ಕೂಡ ಸಿದ್ದರಾಮಯ್ಯ ಹೇಳಿದ್ದರು. ಮೂರು ತಿಂಗಳಿಂದ ನನಗೆ ಕಾಲಿನ ಸಮಸ್ಯೆ ಇದೆ. ಹಾಗಾಗಿ ನಾನು ಈಚೆಗೆ ಬಂದಿರಲಿಲ್ಲ ಎಂದರು.