ಧಾರವಾಡ:

ವಿದ್ಯಾರ್ಥಿಗಳಲ್ಲಿ ಶ್ರಮ ಸಂಸ್ಕೃತಿ ಮತ್ತು ಸಮಾಜಮುಖಿ ಚಿಂತನೆ ಬೆಳೆಸುವಲ್ಲಿ ಎನ್ನೆಸ್ಸೆಸ್ಸ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಕವಿವಿ ಸಿಂಡಿಕೇಟ್ ಸದಸ್ಯ ಪ್ರೊ. ಎಸ್.ವಿ. ವಸ್ತ್ರದ ಹೇಳಿದರು.

ಕವಿವಿ ಎನ್ನೆಎಸ್ಸೆಸ್‌ ಕೋಶವು ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ 7 ದಿನಗಳ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವ ತರಬೇತಿ ಶಿಬಿರ ಉದ್ಘಾಟಿಸಿದ ಅವರು, ಸ್ವಾತಂತ್ರ್ಯ ನಂತರ ದೇಶ ಹೇಗೆ ನಡೆಯಬೇಕು ಎಂಬುವುದರ ಕುರಿತು ಸ್ಪಷ್ಟ ದೂರದೃಷ್ಟಿಯನ್ನು ಆಗಿನ ದೇಶದ ನಾಯಕರು ಹೊಂದಿದ್ದರು. ಶ್ರಮ ಸಂಸ್ಕೃತಿಯನ್ನು ಯುವಕರಲ್ಲಿ ‌ಮೂಡಿಸಲು ಎನ್ನೆಸ್ಸೆಸ್‌ ಪ್ರಾರಂಭಿಸಲಾಯಿತು. ಈ ಯೋಜನೆ ಯುವಕರಲ್ಲಿ ಸಮಾಜಮುಖಿ ಚಿಂತನೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.

ವಿದ್ಯಾರ್ಥಿಗಳು ಪ್ರಸಕ್ತ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಅರಿವು ಹೊಂದುವುದು ಅವಶ್ಯಕ ಎಂದ ಅವರು, ನಾಯಕತ್ವದ ಗುಣದಿಂದ ವ್ಯಕ್ತಿತ್ವ ಬೆಳವಣಿಗೆ ಆಗುತ್ತದೆ ಎಂದು ಹೇಳಿದರು.ಕವಿವಿ‌ ಎನ್ನೆಸ್ಸೆಸ್‌ ಕೋಶದ ಸಂಯೋಜಕ ಡಾ. ಎಂ.ಬಿ. ದಳಪತಿ ಮಾತನಾಡಿ, ಕವಿವಿ ವ್ಯಾಪ್ತಿಯ 193 ಕಾಲೇಜುಗಳಿಂದ 21 ಸಾವಿರ ಎನ್ನೆಸ್ಸೆಸ್‌ ಸೇವಕರಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ನಾಗರಾಜ ತಳವಾರ, ಡಾ. ಜಯಾನಂದ ಹಟ್ಟಿ, ಡಾ. ತೇಜಸ್ವಿನಿ ಅರಳಿಕಟ್ಟೆ, ಡಾ. ಪ್ರಭಾಕರ ಕಾಂಬಳೆ, ಪ್ರೊ. ಈರಪ್ಪ ಪೂಜಾರ, ಪ್ರೊ. ಶಿವಯೋಗಿ ಹಾವೇರಿ, ಡಾ. ನಾಗರಾಜ ಸೇರಿದಂತೆ ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಯ ಕಾಲೇಜುಗಳ 150 ಎನ್ನೆಸ್ಸೆಸ್‌ ಸ್ವಯಂ ಸೇವಕರಿದ್ದರು.