ಮಾತೃಭಾಷೆ ಬಳಕೆ, ಉಡುಗೆ ತೊಡುಗೆ, ಸರಳ ಜೀವನ, ಧರ್ಮ ಮನಸ್ಸಿನಲ್ಲಿ ಬರಬೇಕು. ಹಿಂದೂ ಧರ್ಮದ ಅಶಯಗಳನ್ನು ಅರ್ಥ ಮಾಡಿಕೊಂಡು ಮನಸ್ಸಿನಲ್ಲಿ ಧರ್ಮವನ್ನು ತುಂಬಿಕೊಳ್ಳಬೇಕು ಎಂದು ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಹೇಳಿದರು. ನಡೆನುಡಿ ಆಚಾರ ವಿಚಾರಗಳಲ್ಲಿ ಧರ್ಮವನ್ನು ಅನುಸರಿಸಿದರೇ ಮಾತ್ರ ಹಿಂದೂ ಧರ್ಮ ಉಳಿಯುತ್ತದೆ ಎಂದರು. ಹಿಂದೂ ಸಮಾಜೋತ್ಸವದ ಗೌರವ ಮಾರ್ಗದರ್ಶಕರು ಆದ ಶ್ರೀ ಸ್ವಪ್ರಭಾನಂದ ಸ್ವಾಮೀಜಿಯವರು ಮಾತನಾಡಿ, ಸನಾತನ ಹಿಂದೂ ಧರ್ಮದ ಪದ್ಧತಿಯನ್ನು ಅನುಸರಿಸದೇ ನಮಲ್ಲಿ ಒಳಜಗಳ ಮಾಡಿಕೊಂಡು ಬಂದರೆ ಅಪಾಯ ಕಟ್ಟಿಟ್ಟಬುತ್ತಿ. ಆದುದರಿಂದ ಹಿಂದೂಗಳು ಒಗ್ಗಟ್ಟಾಗಿರಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡಪ್ರಭ ವಾರ್ತೆ ರಾಮನಾಥಪುರ
ಮಾತೃಭಾಷೆ ಬಳಕೆ, ಉಡುಗೆ ತೊಡುಗೆ, ಸರಳ ಜೀವನ, ಧರ್ಮ ಮನಸ್ಸಿನಲ್ಲಿ ಬರಬೇಕು. ಹಿಂದೂ ಧರ್ಮದ ಅಶಯಗಳನ್ನು ಅರ್ಥ ಮಾಡಿಕೊಂಡು ಮನಸ್ಸಿನಲ್ಲಿ ಧರ್ಮವನ್ನು ತುಂಬಿಕೊಳ್ಳಬೇಕು ಎಂದು ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಹೇಳಿದರು.ರಾಮನಾಥಪುರದಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ಹಾಗೂ ಶೋಭಯಾತ್ರೆ ಕಾರ್ಯಕ್ರಮ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಪಟ್ಟಾಭಿರಾಮ ಶಾಲಾ ಆವರಣದಲ್ಲಿ ರಾಮನಾಥಪುರ ಶ್ರೀ ರಾಮೇಶ್ವರ ದೇವಾಲಯದಿಂದ ಮಧ್ಯಾಹ್ನ ಹೊರಟ ಶೋಭಯಾತ್ರೆ ಮತ್ತು ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೂ ಸಮಾಜೋತ್ಸವದ ಸಮಿತಿ ಗೌರವ ಮಾರ್ಗದರ್ಶಕರು ಆದ ಮುದ್ದಿನಕಂತೆ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ನಡೆನುಡಿ ಆಚಾರ ವಿಚಾರಗಳಲ್ಲಿ ಧರ್ಮವನ್ನು ಅನುಸರಿಸಿದರೇ ಮಾತ್ರ ಹಿಂದೂ ಧರ್ಮ ಉಳಿಯುತ್ತದೆ ಎಂದರು. ಹಿಂದೂ ಸಮಾಜೋತ್ಸವದ ಗೌರವ ಮಾರ್ಗದರ್ಶಕರು ಆದ ಶ್ರೀ ಸ್ವಪ್ರಭಾನಂದ ಸ್ವಾಮೀಜಿಯವರು ಮಾತನಾಡಿ, ಸನಾತನ ಹಿಂದೂ ಧರ್ಮದ ಪದ್ಧತಿಯನ್ನು ಅನುಸರಿಸದೇ ನಮಲ್ಲಿ ಒಳಜಗಳ ಮಾಡಿಕೊಂಡು ಬಂದರೆ ಅಪಾಯ ಕಟ್ಟಿಟ್ಟಬುತ್ತಿ. ಆದುದರಿಂದ ಹಿಂದೂಗಳು ಒಗ್ಗಟ್ಟಾಗಿರಬೇಕು ಎಂದು ಕಿವಿಮಾತು ಹೇಳಿದರು. ಹಿಂದೂ ಸಮಾಜೋತ್ಸವದ ಹಿರಿಯರು ಬಸವರಾಜು ಮಾತನಾಡಿ, ಇಂದು ನಾವು ಯಾವುದೇ ಭಯ ಅತಂಕ ಇಲ್ಲದೇ ಬದುಕು ಸಾಗುತ್ತಿದ್ದರೆ ಅದು ಈ ದೇಶವನ್ನು ಕಾಯುವ ಸೈನಿಕರು ಹಾಗೂ ಸ್ವಯಂ ಸೇವಕರಿಂದ ಮಾತ್ರ. ಹಾಗಾಗಿ ಇಂದಿನ ಪೀಳಿಗೆಯ ಮಕ್ಕಳು ಅದರೊಟ್ಟಿಗೆ ಬೆಸೆದಾಗ ಮಾತ್ರ ಈ ದೇಶ ಗಟ್ಟಿಯಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಶರಣರಾದ ಸೋಮಶೇಖರ್, ಗೌತಮ್, ತಿಪ್ಪೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್. ಎಸ್. ನರಸಿಂಹಮೂರ್ತಿ, ಮಲ್ಲಿನಾಥಪುರ, ಜವರೇಗೌಡರು, ರಾಜೇಗೌಡರು ಕಾಳಬೋಯಿ, ವಿರೂಪಾಷ, ಆರ್. ಕೆ. ಶ್ರೀನಿವಾಸ್, ದಿಲೀಪ್, ಸಿದ್ದರಾಜು, ಸಂತೋಷ, ಕುಮಾರಸ್ವಾಮಿ, ಪಿಎಸ್‌ಐ ಮರಿಯಪ್ಪ ಆರ್. ಬ್ಯಾಳಿ ಮುಂತಾದವರು ಇದ್ದರು.