ಹಿರಯೂರು ನಗರದ ಸಂತೆಪೇಟೆ ಆವರಣದಲ್ಲಿ ತಾಲೂಕು ಹಿಂದೂ ಸಂಗಮ ಸಮಾಜೋತ್ಸವ ಸಮಿತಿ ವತಿಯಿಂದ ಹಿಂದೂ ಸಂಗಮ ಶೋಭಾಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಹಿರಿಯೂರು
ಹಿಂದೂತ್ವ ಎಂಬುದು ಒಂದು ಜಾತಿಯಲ್ಲ. ಅದು ಒಂದು ಜೀವನ ಪದ್ಧತಿ ಎಂದು ಪ್ರಾಂತ ಘೋಷ್ ಪ್ರಮುಖ್ ಗಿರೀಶ್ ಅಭಿಪ್ರಾಯಪಟ್ಟರು.ನಗರದ ಸಂತೆ ಪೇಟೆ ಆವರಣದಲ್ಲಿ ತಾಲೂಕು ಹಿಂದೂ ಸಂಗಮ ಸಮಾಜೋತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಹಿಂದೂಗಳು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗುತ್ತದೆ. ಜಾತಿಗಳನ್ನು ಬಿಟ್ಟು ನಾವೆಲ್ಲ ಒಂದೇ ನಾವೆಲ್ಲ ಹಿಂದೂಗಳು ಎಂದಾಗ ಮಾತ್ರ ಹಿಂದುತ್ವ ಉಳಿಯಲು ಸಾಧ್ಯ ಎಂದರು.ಡಾ.ಕೇಶವ್ ಪ್ರಸಾದ್ ನೆಡಿಗೆಯವರು 1925ರಲ್ಲಿ ಹಿಂದುತ್ವವನ್ನು ಸ್ಥಾಪಿಸಿದರು. 2025ಕ್ಕೆ ನೂರುವರ್ಷ ತುಂಬಿದ ಈ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹಿಂದೂ ಸಂಗಮ ಸಮಾಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಿಂದುತ್ವ ಉಳಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸ್ವಾಮಿ ವಿವೇಕಾನಂದರು, ಕಿತ್ತೂರು ರಾಣಿ ಚೆನ್ನಮ್ಮ, ಛತ್ರಪತಿ ಶಿವಾಜಿ, ಓಬವ್ವನಂತಹ ವೀರರು ಹಿಂದುತ್ವಕ್ಕಾಗಿ ಹೋರಾಡಿದ್ದಾರೆ. ಇವರ ಆದರ್ಶಗಳನ್ನು ರೂಪಿಸಿಕೊಂಡು ಮುಂದಿನ ದಿನಗಳಲ್ಲಿ ಹಿಂದುತ್ವ ಗಟ್ಟಿಗೊಳಿಸಬೇಕು. ಭಾರತ ದೇಶದ್ದು ಸನಾತನ ಧರ್ಮವಾಗಿದ್ದು ಇದಕ್ಕೆ ಆರಂಭವೂ ಇಲ್ಲ ಅಂತ್ಯವೂ ಇಲ್ಲ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಭಾರತಾಂಬೆಯ ಭಾವಚಿತ್ರದ ಜೊತೆಗೆ ಕುಂಭಮೇಳ ಮೆರವಣಿಗೆ ನಡೆಸಲಾಯಿತು.ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜನೆ ಸಮಿತಿ ಅಧ್ಯಕ್ಷ ಸುಕುಮಾರ್, ಯಾಜ್ಞವಲ್ಕ್ಯ ಶಾಲೆ ಮುಖ್ಯಸ್ಥ ಸುರೇಶ್, ರಾಬಿನ್ ಸಿಂಗ್, ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ್, ಮುಖಂಡರಾದ ಎಂ ಎಸ್. ರಾಘವೇಂದ್ರ, ವಿಶ್ವನಾಥ್, ರಾಜಣ್ಣ ರಾಘವೇಂದ್ರ, ,ಹರ್ಷವರ್ಧನ್, ಸುರೇಶ್,ಪ್ರಭಾಕರ್, ಜಯರಾಮ್, ಪ್ರಭಾಕರ್, ಶ್ರೀನಿವಾಸ್, ಚಂದ್ರಹಾಸ್, ಮುರಳೀಧರ,ಗೀತಾ ರಾಧಾಕೃಷ್ಣ, ಸುಗುಣ ದೀಕ್ಷಿತ್, ರಾಣಿ ಪಾರ್ಥಸಾರಥಿ,
ಶಶಿಕಲಾ ರವಿಶಂಕರ್, ನಾಗಸುಂದರಮ್ಮ, ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.