ಕನ್ನಡಪ್ರಭ ವಾರ್ತೆ ಗುಬ್ಬಿ

ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಸಾವಯುವ ರೈತ ಚಂಗಾವಿ ಪ್ರಕಾಶ್ ಹೇಳಿದರು. ತಾಲೂಕಿನ ಸಿ.ಸಿಂಗಾವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೋಟ್ ಬುಕ್ ವಿತರಣೆ ಮಾಡಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತ ಬಂದಿದೆ. ಕಳೆದ ವರ್ಷ ನೂತನ ಕಟ್ಟಡವನ್ನು ನಿರ್ಮಾಣ ಮಾಡಿಕೊಟ್ಟು, ಬೇರೆ ಹಳ್ಳಿಗಳಿಂದ ಬರುವಂತಹ ಮಕ್ಕಳಿಗೆ ಆಟೋ ವ್ಯವಸ್ಥೆ ಸೇರಿದಂತೆ ಹಲವು ರೀತಿಯ ಸೌಲಭ್ಯಗಳನ್ನ ನಾವು ನಮ್ಮ ಗ್ರಾಮದಲ್ಲಿ ನೀಡುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಮುಂದಿನ ದಿನದಲ್ಲಿ ಸೌಲಭ್ಯಗಳನ್ನು ಹೆಚ್ಚಿಸಿ ಗುಣಮಟ್ಟದ ಶಿಕ್ಷಣವನ್ನು ನೀಡುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎಸ್ ನಟರಾಜು ಮಾತನಾಡಿ ಸರ್ಕಾರಿ ಶಾಲೆಗಳ ಬಗ್ಗೆ ಇತ್ತೀಚಿಗೆ ಎಲ್ಲರಿಗೂ ಸಹ ತಿಳಿಯುತ್ತಿದ್ದು , ಇಲ್ಲಿರುವಂತಹ ಗುಣಮಟ್ಟವನ್ನು ಖಂಡಿತವಾಗಿ ಕಾನ್ವೆಂಟ್ ಶಾಲೆಗಳಲ್ಲಿ ಪಡೆಯಲು ಸಾಧ್ಯವೇ ಇಲ್ಲ. ಪೋಷಕರು ಕೇವಲ ದೊಡ್ಡ ಬಿಲ್ಡಿಂಗ್ ಆಕರ್ಷಣೆಗೆ ಮತ್ಯಾವುದೋ ಕಾರಣಕ್ಕೆ ಆಕರ್ಷಿತರಾಗದೆ ಸ್ಥಳೀಯವಾಗಿ ಇರುವಂತಹ ಸರ್ಕಾರಿ ಶಾಲೆಗಳನ್ನ ಉಳಿಸುವಂತಹ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಕೊಡುಗೆ ನೀಡಿದ ಹೆಬ್ಬೂರು ಬೋರೇಗೌಡರು ಹಾಗೂ ಮುಖಂಡರಾದ ಕೃಷ್ಣಪ್ಪ ಕುಮಾರ್ ಶಿವಣ್ಣ ಗಂಗಾಧರ್ ಶಿಕ್ಷಕಿ ನಳಿನ ಸೇರಿದಂತೆ ಇನ್ನಿತರರು ಹಾಜರಿದ್ದರು.