ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಆದೇಶ

| Published : Sep 27 2025, 12:00 AM IST

ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ವಿವಿಧ ನಿಗಮ-ಮಂಡಳಿಗಳಿಗೆ ಮಾಜಿ ಶಾಸಕ ಎನ್‌.ಸಂಪಂಗಿ, ಶಾಸಕ ವಿನಯ್‌ ಕುಲಕರ್ಣಿ ಪತ್ನಿ ಶಿವಲೀಲಾ ವಿನಯ್‌ ಕುಲಕರ್ಣ ಸೇರಿ 34 ಮಂದಿ ಅಧ್ಯಕ್ಷರು ಹಾಗೂ 11 ಮಂದಿ ಉಪಾಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ವಿವಿಧ ನಿಗಮ-ಮಂಡಳಿಗಳಿಗೆ ಮಾಜಿ ಶಾಸಕ ಎನ್‌.ಸಂಪಂಗಿ, ಶಾಸಕ ವಿನಯ್‌ ಕುಲಕರ್ಣಿ ಪತ್ನಿ ಶಿವಲೀಲಾ ವಿನಯ್‌ ಕುಲಕರ್ಣ ಸೇರಿ 34 ಮಂದಿ ಅಧ್ಯಕ್ಷರು ಹಾಗೂ 11 ಮಂದಿ ಉಪಾಧ್ಯಕ್ಷರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 34 ಮಂದಿ ಅಧ್ಯಕ್ಷರು, 11 ಉಪಾಧ್ಯಕ್ಷರ ನೇಮಕ ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ಗುರುವಾರ ಟಿಪ್ಪಣಿ ಕಳುಹಿಸಿದ್ದರು.

ಇದರ ಆಧಾರದ ಮೇಲೆ ಶುಕ್ರವಾರ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದಿರುವ ಶಾಲಿನಿ ರಜನೀಶ್‌ ಅವರು, ನಿಮ್ಮ ಇಲಾಖೆಗಳಿಗೆ ಸಂಬಂಧಪಟ್ಟ ನಿಗಮ-ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ಮಾಡಿ ಇಂದೇ ಆದೇಶ ಹೊರಡಿಸಬೇಕು. ಆ ಕುರಿತು ಮುಖ್ಯಮಂತ್ರಿಗಳ ಕಚೇರಿ ಹಾಗೂ ಮುಖ್ಯಕಾರ್ಯದರ್ಶಿಗಳ ಕಚೇರಿಗೆ ಮಾಹಿತಿ ಒದಗಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದರು. ಅದರಂತೆ 34 ಮಂದಿ ಅಧ್ಯಕ್ಷರು ಹಾಗೂ 11 ಮಂದಿ ಉಪಾಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ನಿಗಮ ಮಂಡಳಿ ಹಾಗೂ ಅಧ್ಯಕ್ಷರ ವಿವರ:

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ: ಪಿ.ರಘು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ: ಶಿವಲೀಲಾ ವಿನಯ್‌ ಕುಲಕರ್ಣಿ, ಕರ್ನಾಟಕ ಜೀವವೈವಿಧ್ಯ ಮಂಡಳಿ: ವಡ್ನಾಳ್‌ ಜಗದೀಶ್, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ- ಮುರಳಿ ಅಶೋಕ್‌ ಸಾಲಪ್ಪ, ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ: ಡಾ.ಮೂರ್ತಿ, ಮಾಜಿ ಸೈನಿಕರ ಕಲ್ಯಾಣ ಮಂಡಳಿ: ಕರ್ನಲ್‌ ಟಿ. ಮಲ್ಲಿಕಾರ್ಜುನ್‌, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ: ಡಾ.ಬಿ.ಸಿ.ಮುದ್ದು ಗಂಗಾಧರ್,

ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ: ಶಾಲೆಟ್‌ ಲವೀನಾ ಪಿಂಟೋ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮ: ಜಿ.ಎಚ್.ಮರಿಯೋಜಿ ರಾವ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ: ಎಂ.ಎ.ಗಫೂರ್‌, ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ: ಕೆ.ಹರೀಶ್ ಕುಮಾರ್, ಕರ್ನಾಟಕ ರಾಜ್ಯ ಉಗ್ರಾಣ ನಿಗಮ: ಎನ್.ಸಂಪಂಗಿ,

ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಲಿಮಿಟೆಡ್: ವೈ.ಸಯೀದ್‌ ಅಹಮದ್‌, ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ : ಎಂ.ಮಹೇಶ್‌, ಬಯಲುಸೀಮೆ ಅಭಿವೃದ್ದಿ ನಿಗಮ: ಎಚ್.ಬಿ.ಮಂಜಪ್ಪ, ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮ: ಭರಮಣ್ಣ ಉಪ್ಪಾರ, ಕೇಂದ್ರ ಪರಿಹಾರ ಸಮಿತಿ: ಅಗಾ ಸುಲ್ತಾನ್‌, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ದಿ ನಿಗಮ: ಎಸ್‌.ಜಿ.ನಂಜಯ್ಯನ ಮಠ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ: ಅರುಣ್‌ಕುಮಾರ್‌ ಪಾಟೀಲ್‌,

ಬುಡಕಟ್ಟು ಅಭಿವೃದ್ಧಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆ (ಕಾಡಾ): ಬಾಬು ಹೊನ್ನನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ (ಕಾಡಾ): ಯುವರಾಜ್‌ ಕದಂ, ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ: ಪ್ರವೀಣ್‌ ಕುಮಾರ ಪಾಟೀಲ್‌, ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮ: ಮಂಜುನಾಥ ಪೂಜಾರಿ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ: ಎಂ.ಎಸ್‌. ಮುತ್ತುರಾಜ್‌, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ: ಸಿ. ನಂಜಪ್ಪ, ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ: ವಿಶ್ವಾಸ್‌ ಕುಮಾರ್‌ ದಾಸ್‌,

ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ: ಎಸ್.ಗಂಗಾಧರ್, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ: ಪಟೇಲ್‌ ಶಿವಣ್ಣ, ಕರ್ನಾಟಕ ಕುಂಬಾರ ಅಭಿವೃದ್ಧಿ ನಿಗಮ: ಡಾ. ಶ್ರೀನಿವಾಸನ್‌ ವೇಲು, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ: ಟಿ.ಎಂ. ಶಾಹೀದ್‌ ತೆಕ್ಕಿಲ್‌, ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ (ವಿದ್ಯುತ್ ಮಗ್ಗಗಳ) ಅಭಿವೃದ್ದಿ ನಿಗಮ: ಕೆ.ಚೇತನ್‌, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆ: ಲಾವಣ್ಯ ಬಲ್ಲಾಳ್‌ ಜೈನ್‌,

ಮೈಸೂರು ಪೇಯಿಂಟ್ಸ್‌ ಮತ್ತು ಮಾರ್ನಿಷ್‌ ಲಿಮಿಟೆಡ್‌: ಎಚ್.ಡಿ. ಗಣೇಶ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ: ಎಂ. ನಿಕೇತ್‌ ರಾಜ್‌.

11 ಮಂದಿ ಉಪಾಧ್ಯಕ್ಷರ ವಿವರ:

ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ: ವಿಶ್ವಾಸ್‌ ವಸಂತ ವೈದ್ಯ, ನ್ಯಾಷನಲ್‌ ಮಿಲಿಟರಿ ಮೆಮೋರಿಯಲ್‌ ಮ್ಯಾನೇಜ್‌ಮೆಂಟ್‌ ಟ್ರಸ್ಟ್‌: ಜಿ.ಸಿ.ಚಂದ್ರಶೇಖರ್‌, ಕರ್ನಾಟಕ ರಾಜ್ಯ ಕಾಂಪೋಸ್ಟ್‌ ಅಭಿವೃದ್ದಿ ನಿಗಮ: ಪ್ಯಾರಿಜಾನ್,

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ: ಸುನೀಲ್‌ ಜೆ.ಹನುಮಣ್ಣನವರ್‌, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ: ಎಸ್‌.ವಿ.ತಂಬಿದೊರೈ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ: ವಿ.ಎಸ್‌. ಆರಾಧ್ಯ,

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ: ಕುಮಾರಿ ಐಶ್ವರ್ಯಾ ಮಹದೇವ್, ಕರ್ನಾಟಕ ಕ್ರೀಡಾ ಪ್ರಾಧಿಕಾರ: ಸಿ.ಎಸ್‌.ಅರುಣ್‌ ಮಾಚಯ್ಯ, ಕರ್ನಾಟಕ ಸ್ಟೇಟ್‌ ಮಿನರಲ್ಸ್‌ ಕಾರ್ಪೊರೇಶನ್‌: ಎಚ್.ಲಕ್ಷ್ಮಣ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮ: ವಿಜಯಲಕ್ಷ್ಮೀ.

5 ಮಂದಿ ಸದಸ್ಯರ ನೇಮಕ:

ಇದೇ ವೇಳೆ ನ್ಯಾಷನಲ್‌ ಮಿಲಿಟರಿ ಮೆಮೋರಿಯಲ್‌ ಮ್ಯಾನೇಜ್‌ಮೆಂಟ್‌ ಟ್ರಸ್ಟ್‌ಗೆ ಐದು ಮಂದಿ ಸದಸ್ಯರನ್ನೂ ನೇಮಿಸಲಾಗಿದೆ. ಏರ್‌ವೈಸ್‌ ಮಾರ್ಷಲ್ ಅಜೀಜ್‌ ಜಾವೀದ್‌, ಲೆಫ್ಟಿನೆಂಟ್‌ ಜನರಲ್‌ ಬಿಎನ್‌ಬಿಎಂ ಪ್ರಸಾದ್‌, ಕರ್ನಲ್‌ ಟಿ ಮಲ್ಲಿಕಾರ್ಜುನ್‌, ನಿರುಪಾ ಮಾದಪ್ಪ, ರೀನಾ ಮುತ್ತಣ್ಣ ಅವರು ಸದಸ್ಯರಾಗಿ ನೇಮಕಗೊಂಡಿದ್ದಾರೆ.