ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಾಡಗೀತೆ ರಚನೆ ಮಾಡಿ, ೧೦೦ ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಅದರ್ಶ ಶಾಲೆಯ ಮಕ್ಕಳು ಸಾಮೂಹಿಕವಾಗಿ ನಾಡಗೀತೆಯನ್ನು ಹಾಡಲಿದ್ದಾರೆ. ಈ ಎಲ್ಲಾ ಮಕ್ಕಳ ಕೈಯಲ್ಲಿ ನಾಡ ಧ್ವಜ ಇರಬೇಕೆಂಬ ಉದ್ದೇಶದಿಂದ ಜಿಲ್ಲಾ ಕನ್ನಡ ಸಂಘದಿಂದ ೨೫೦ ಕನ್ನಡ ಧ್ವಜಗಳನ್ನು ಕೊಡುಗೆಯಾಗಿ ನೀಡಲಾಯಿತು.ಜಿಲ್ಲಾ ಕನ್ನಡ ಸಂಘದ ಅಧ್ಯಕ್ಷ ಸಿ.ಎ. ಮಹದೇವಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಭೇಟಿ ಮಾಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ನಾಡಗೀತೆ ಹಾಡುವ ನಗರದ ಸಮೀಪದ ಮಲ್ಲಯ್ಯನಪುರ ಅದರ್ಶ ಶಾಲೆಯ ವಿದ್ಯಾರ್ಥಿಗಳಿಗೆ ಈ ನಾಡ ಧ್ವಜವನ್ನು ನೀಡುವಂತೆ ಮಾಡಿದರು.
ನವೆಂಬರ್ ೧ ರಂದು ಜಿಲ್ಲಾಡಳಿತದಿಂದ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ. ರಾಷ್ಟ್ರಕವಿ ಕುವೆಂಪು ಅವು ೧೯೨೫ರದಲ್ಲಿ ನಾಡಗೀತೆಯನ್ನು ರಚನೆ ಮಾಡಿದ್ದರು. ಇದರ ಸವಿನೆನಪಿವಾಗಿ ನೂರು ವರ್ಷಗಳ ನಾಡಗೀತೆಯನ್ನು ೨೫೦ಕ್ಕು ಹೆಚ್ಚು ಮಕ್ಕಳು ಸಾಮೂಹಿಕವಾಗಿ ಹಾಡಲು ತಯಾರಿ ಮಾಡಲಿಕೊಳ್ಳಲಾಗಿದೆ. ಹೀಗಾಗಿ . ಈ ಮಕ್ಕಳ ಕೈಯಲ್ಲಿ ನಾಡ ಧ್ವಜ ಇರಬೇಕೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ನಾಡಧ್ವಜವನ್ನು ಕೊಡುಗೆಗೆ ನೀಡುವಂತೆ ಜಿಲ್ಲಾ ಕನ್ನಡ ಸಂಘವನ್ನು ಕೋರಿದ್ದರು. ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಂಘದ ಅಧ್ಯಕ್ಷ ಸಿ.ಎ. ಮಹದೇವಶೆಟ್ಟಿ ಹಸ್ತಾಂತರ ಮಾಡಿದರು.ಬಳಿಕ ಮಾತನಾಡಿದ ಜಿಲ್ಲಾ ಕನ್ನಡ ಸಂಘದ ಅಧ್ಯಕ್ಷ ಸಿ.ಎ. ಮಹದೇವಶೆಟ್ಟಿ, ಜಿಲ್ಲಾಡಳಿತ ನಾಡ ಹಬ್ಬ ಕನ್ನಡರಾಜ್ಯೋತ್ಸವನ್ನು ವಿಜೃಂಭನೆಯನ್ನು ಆಚರಣೆ ಮಾಡುತ್ತಿದೆ. ರಾಷ್ಟ್ರಕವಿ ಕುವೆಂಪುರ ಅವರು ನಾಡಗೀತೆಯನ್ನು ರಚನೆ ಮಾಡಿ ಇಂದಿಗೆ ೧೦೦ ವರ್ಷಗಳು ತುಂಬಿರುವ ಸವಿನೆನಪಿಗಾಗಿ ಸಾಮೂಹಿಕವಾಗಿ ನಾಡ ಗೀತೆಯನ್ನು ಹಾಡುವ ವಿದ್ಯಾರ್ಥಿಗಳಿಗೆ ೧ ಅಡಿ ಉದ್ದ ೧.೫ ಅಡಿ ಅಗಲವುಳ್ಳ ಕನ್ನಡ ಬಾವುಟ ನೀಡುತ್ತಿದ್ದೇವೆ. ನಾಡು, ನುಡಿ, ಜಲ, ಕನ್ನಡಿಗರ ವಿಚಾರದಲ್ಲಿ ಸಹಾಯ ಮಾಡಲು ನಮ್ಮ ಸಂಘಟನೆ ಸದಾ ಮುಂದು. ಕೋರೋನಾ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂಘದಿಂದ ೨೫ ಸಾವಿರ ರೂ. ನೀಡಿ, ಕೊರೋನಾ ಜಿಲ್ಲೆಗೆ ವ್ಯಾಪಿಸದಂತೆ ಮುನ್ನಚ್ಚರಿಕೆಯನ್ನು ಸಂಘಟನೆ ವಹಿಸಿಕೊಂಡಿತ್ತು ಎಂದರು.
ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯತೆವಾಗಿದೆ. ಎಲ್ಲರು ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸವಂತೆ ಜಿಲ್ಲಾಧಿಕಾರಿ ಶಿಲ್ಪ ನಾಗ್ ಅವರು ಮನವಿ ಮಾಡಿದರು.ಈ ಸಂದರ್ಭದಲ್ಲಿ ಡಿಡಿಪಿಐ ಚಂದ್ರಕಾಂತ್‌ಪಾಟೀಲ್, ಬಿಇಓ ಹನುಮಶೆಟ್ಟಿ, ಕನ್ನಡ ಸಂಘದ ಉಪಾಧ್ಯಕ್ಷ ರಾದ ಚಂದ್ರಶೇಖರ್, ವೆಂಕಟರಮಣನಾಯಕ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ, ಸಹ ಕಾರ್ಯದರ್ಶಿ ಮಲ್ಲೇಶ್ ಎಲ್‌ಐಸಿ, ನಗರಸಭಾ ಸದಸ್ಯ ಮನೋಜ್ ಪಟೇಲ್, ಆರ್.ವಿ. ಮಹದೇವಪ್ಪ, ಶ್ರೀ ಚಾಮರಾಜೇಶ್ವರ ಸ್ವಾಮಿ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಘು, ಕೃಷ್ಣ, ರಾಜು ಇತರರು ಇದ್ದರು.
;Resize=(128,128))
;Resize=(128,128))