ಕುಡಿತದಿಂದ ಸಮಾಜದ ಸ್ವಾಸ್ಥ್ಯ ಹಾಳು: ಬಿ.ಜಿ.ಕುಮಾರ್

| Published : Oct 30 2025, 01:30 AM IST

ಕುಡಿತದಿಂದ ಸಮಾಜದ ಸ್ವಾಸ್ಥ್ಯ ಹಾಳು: ಬಿ.ಜಿ.ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕುಡಿತ ಎನ್ನುವುದು ಸಮಾಜದಲ್ಲಿ ಪಿಡುಗು ಇದ್ದಂತೆ. ಕುಡಿದು ವಾಹನ ಚಾಲನೆ ತಪ್ಪು ಎಂದಿದ್ದರೂ ಕೂಡ ಕುಡಿದೇ ವಾಹನ ಚಾಲನೆ ಮಾಡುವುದು, ಅದರಿಂದ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇಂತಹ ಪಿಡುಗು ದೂರವಾಗಲು ಜೀವನದಲ್ಲಿ ಕುಡಿತ ಬಿಟ್ಟು ಮುಕ್ತವಾಗಿ ಬದುಕುವುದನ್ನು ರೂಪಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕುಡಿತ ಸೇರಿದಂತೆ ಇತರೆ ದುಶ್ಚಟಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುವುದನ್ನು ತಪ್ಪಿಸಲು ಮದ್ಯವರ್ಜನ ಜಾಗೃತಿ ಶಿಬಿರಗಳು ನಡೆಯಬೇಕು ಎಂದು ನಗರ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ಹೇಳಿದರು.

ಪಟ್ಟಣದ ಮಹಾವೀರ ಆದಿನಾಥ ಭವನದಲ್ಲಿ ಶ್ರೀಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ 2000ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಕುಟುಂಬದಲ್ಲಿ ಕುಡಿತ ಮಾಡುವವರಿದ್ದರೆ ಮನೆಯಲ್ಲಿ ಕಲಹಗಳು ಹೆಚ್ಚುವ ಜೊತೆಗೆ ನೆಮ್ಮದಿ ಹಾಳಾಗಲಿದೆ ಎಂದರು.

ಕುಡಿತ ಎನ್ನುವುದು ಸಮಾಜದಲ್ಲಿ ಪಿಡುಗು ಇದ್ದಂತೆ. ಕುಡಿದು ವಾಹನ ಚಾಲನೆ ತಪ್ಪು ಎಂದಿದ್ದರೂ ಕೂಡ ಕುಡಿದೇ ವಾಹನ ಚಾಲನೆ ಮಾಡುವುದು, ಅದರಿಂದ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇಂತಹ ಪಿಡುಗು ದೂರವಾಗಲು ಜೀವನದಲ್ಲಿ ಕುಡಿತ ಬಿಟ್ಟು ಮುಕ್ತವಾಗಿ ಬದುಕುವುದನ್ನು ರೂಪಿಸಿಕೊಳ್ಳಬೇಕು ಎಂದರು.

ಈಗಾಗಲೇ ಧರ್ಮಸ್ಥಳ ಸಂಸ್ಥೆಯಿಂದ ರಾಜ್ಯಾಧ್ಯಂತ ಇಂತಹ ಮದ್ಯವರ್ಜನ ಕಾರ್ಯಕ್ರಮಗಳ ಮೂಲಕ ಶಿಬಿರಗಳ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ. ಮನೆಯಲ್ಲಿ ಮದ್ಯ ಸೇವನೆ ಮಾಡುವವರಿದ್ದರೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತಿಳಿಹೇಳಿ, ಮದ್ಯ ಸೇವನೆಯಂತಹ ದುಶ್ಚಟಗಳ ಬಿಟ್ಟು ಉತ್ತಮ ಕೆಲಸಗಳ ಕಡೆ ಮುಖ ಎಂದರು.

ಈ ವೇಳೆ ಪುರಸಭಾ ಪ್ರಭಾರ ಅಧ್ಯಕ್ಷ ಎಂ.ಎಲ್.ದಿನೇಶ್, ಡಾ.ಕೆ.ವೈ. ಶ್ರೀನಿವಾಸ್, ಕೆಆರ್ ನಗರದ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ಮಾಜಿ ಅಧ್ಯಕ್ಷೆ ಶೀಲಾ ನಂಜುಂಡಯ್ಯ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಗಣಪತಿಭಟ್, ಸದಸ್ಯ ಶಿವಣ್ಣ, ಪುರಸಭೆ ಸದಸ್ಯ ಕೃಷ್ಣಪ್ಪ, ಆಶಾಲತಾ ಪುಟ್ಟೇಗೌಡ, ಪುರಸಭಾ ಮಾಜಿ ಸದಸ್ಯರಾದ ಸಾಯಿಕುಮಾರ್, ನಳಿನಾ, ಎಸ್.ಎನ್.ಪ್ರಕಾಶ ಬಾಬು, ಗಂಜಾಂ ಅಭಿಷೇಕ್, ಹಿಂದು ಜಾಗರಣ ವೇದಿಕೆ ಚಂದನ್, ಭಾಗ್ಯಲಕ್ಷ್ಮಿ, ಎಸ್.ಎಲ್.ಮಂಜು ಕುಮಾರ್, ಮಹದೇವು, ಗಾಯತ್ರಿ, ಮದನ್, ಕೆ.ಎಚ್ ಜಗದೀಶ್ ಸೇರಿದಂತೆ ಇತರರು ಇದ್ದರು.