ಯಾರೂ ಯೋಚಿಸದ ರೀತಿಯಲ್ಲಿ ಉತ್ತರ ನೀಡಲಿರುವ ನಮ್ಮ ಸೈನಿಕರು

| Published : Apr 28 2025, 12:50 AM IST

ಯಾರೂ ಯೋಚಿಸದ ರೀತಿಯಲ್ಲಿ ಉತ್ತರ ನೀಡಲಿರುವ ನಮ್ಮ ಸೈನಿಕರು
Share this Article
  • FB
  • TW
  • Linkdin
  • Email

ಸಾರಾಂಶ

ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಅಮಾಯಕ‌ ಪ್ರವಾಸಿಗರನ್ನು ಕಗ್ಗೊಲೆ ಮಾಡಿರುವ ಪಾಕಿಸ್ತಾನ ಪ್ರೇರಿತ ಉಗ್ರಗಾಮಿಗಳನ್ನು ಮಟ್ಟಾಶ ಮಾಡಿ ಪಾಕಿಸ್ತಾನದ ನಿರ್ಣಾಮಕ್ಕೆ ಯುದ್ಧ ಸಾರಿದರೇ ಮಾಜಿ ಸೈನಿಕರು ಮತ್ತೆ ಸೈನ್ಯಕ್ಕೆ ಸೆರಲು ಸನ್ನದ್ಧರಾಗಿದ್ದಾರೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಅಮಾಯಕ‌ ಪ್ರವಾಸಿಗರನ್ನು ಕಗ್ಗೊಲೆ ಮಾಡಿರುವ ಪಾಕಿಸ್ತಾನ ಪ್ರೇರಿತ ಉಗ್ರಗಾಮಿಗಳನ್ನು ಮಟ್ಟಾಶ ಮಾಡಿ ಪಾಕಿಸ್ತಾನದ ನಿರ್ಣಾಮಕ್ಕೆ ಯುದ್ಧ ಸಾರಿದರೇ ಮಾಜಿ ಸೈನಿಕರು ಮತ್ತೆ ಸೈನ್ಯಕ್ಕೆ ಸೆರಲು ಸನ್ನದ್ಧರಾಗಿದ್ದಾರೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.

ಮಾಜಿ ಸೈನಿಕರ ಸಮನ್ವಯ ಸಮಿತಿ ಹಾಗೂ ಪುಣ್ಯಕೋಟಿ ಸಂಘಟನೆಯ ಆಶ್ರಯದಲ್ಲಿ ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ವೃತ್ತದಿಂದ ಸಂಗೋಳ್ಳಿ ರಾಯಣ್ಣನ ವೃತ್ತದವರೆಗೆ ಬೈಕ್ ರೈಡ್ ನಡೆಸಿ ರಾಯಣ್ಣನ‌ ವೃತ್ತದಲ್ಲಿ ಮೊಂಬತ್ತಿ ಹಚ್ಚಿ ಅಗಲಿದ 26 ಜನ ನಾಗರಿಕರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರವಾಗಿದ್ದು, 370ನೇ ವಿಧಿ ರದ್ಧತಿಯಿಂದ ಕಣಿವೆ ರಾಜ್ಯದಲ್ಲಿ ಶಾಂತಿ ನೆಲಸಿ ಭಾರತದ ಮೂಲೆ ಮೂಲೆಯಿಂದ‌ ಕೋಟ್ಯಂತರ ಜನ ಭೂಮಿಯ ಮೇಲಿನ ಸ್ವರ್ಗದ ಅನುಭವವನ್ನು ಅಸ್ವಾಧಿಸಲು ಕಾಶ್ಮೀರ ಪ್ರವಾಸ ಕೈಗೊಂಡು ಪುಳಕಿತರಾಗಿದ್ದರು.‌ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರಿಂದ ಕಣಿವೆ ರಾಜ್ಯದ ಜನತೆ ಆರ್ಥಿಕವಾಗಿ ಸಬಲರಾಗುತಿದ್ದ ಸಂದರ್ಭದಲ್ಲಿ ಅಮಾಯಕ ಹಿಂದೂ ಪ್ರವಾಸಿಗರ ಮೇಲೆ‌ ಧರ್ಮಾಂಧರು ಮಾಡಿರುವ ಈ ಕಗ್ಗೋಲೆಗೆ ಕಾರಣರಾದವರನ್ನು ಹುಡುಕಿ ಯಾರೂ ಯೋಚಿಸದ ರೀತಿಯಲ್ಲಿ ಉತ್ತರವನ್ನು ನಮ್ಮ ಸೈನಿಕರು ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ಚಂದ್ರಶೇಖರ್ ‌ನೇಸರಗಿ, ರಾಜಕುಮಾರ ಸವಟಗಿ, ಚಂದ್ರು ಗೌಡರ, ಡಿ.ಎಂ.ಶಿರಗಾಂವಿ, ಯಲ್ಲಪ್ಪ ಗಡದವರ, ಬಸವರಾಜ ಗುರುವಣ್ಣವರ, ಗಂಗಪ್ಪ ಗುಗ್ಗರಿ, ಮಹಾಂತೇಶ ಕುಸಲಾಪೂರ, ಮಹಾದೇವ ತುರಮರಿ, ಶೇಖರ ನವಲಗಟ್ಟಿ, ಉಳವಪ್ಪ ದೇಗಾಂವಿ, ಈರಪ್ಪ ಗಾಳಿ, ಸಂಗಯ್ಯ ವಸ್ತ್ರದ, ಮಲ್ಲಿಕಾರ್ಜುನ ಅಂಬೋಜಿ, ಗಂಗಪ್ಪ ಛಬ್ಬಿ, ಮಲ್ಲಿಕಾರ್ಜುನ ಹರಸನ್ನವರ, ಬಿ.ಎಸ್.ಹೊಂಗಲ, ಎಂ.ಜಿ.ಗೋದಿ, ಶಂಕರ ಬೇವಿನ, ಬಾಬು ವಾಲಿಕಾರ, ಗುರುಸಿದ್ದಪ್ಪ ಸಾಧೂನವರ, ಗಂಗಾಧರ ತಿಗಡಿ, ಬಸವರಾಜ ಕಿತ್ತೂರ, ಬಿ.ಎಸ್.ತಲ್ಲೂರ, ಮಲ್ಲವ್ವ ಕಾಡಣ್ಣವರ, ಗೀತಾ ಗರಗದ, ಮಾಲಾ ಸಂಗಣ್ಣವರ ಸೇರಿದಂತೆ ನೂರಾರೂ ಮಾಜಿ ಸೈನಿಕರು ಹಾಗೂ ವೀರನಾರಿಯರು ಇದ್ದರು.ಕಾರ್ಗಿಲ್, ಬಾಂಗ್ಲಾ‌ ವಿಮೋಚನೆ ಲಡಾಕ್‌ದಲ್ಲಿ ಎಷ್ಟೋ ಮೋಸ ಮಾಡಿದರೂ ಗೆಲ್ಲಲಾಗದ ಪಾಕಿಸ್ತಾನ ಮತ್ತೆ ಯುದ್ದಕ್ಕೆ ಕೈ ಹಾಕಿದರೇ ಈ ಬಾರಿ ಪಾಕಿಸ್ತಾನದ ಕುರುಹು ಉಳಿಯದಂತೆ ನಾಮಶೇಷ ಮಾಡಲು ಸೈನಿಕರು ಸಿದ್ಧರಾಗಿದ್ದು, ಸರ್ಕಾರದಿಂದ‌ ಮಾಜಿ ಸೈನಿಕರಿಗೆ ಬುಲಾವ್ ಬಂದರೆ ಯುದ್ಧಕ್ಕೆ ನಾವು ಸನ್ನದ್ಧ.

-ಬಿ.ಬಿ‌.ಬೊಗೂರ,

ಮಾಜಿ ಸೈನಿಕರ ಸಂಘದ ಅಧ್ಯಕ್ಷರು.