ಭಾರತದ ದಾಳಿಗೆ ಉಗ್ರರ ಪೋಷಕ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ-ಶಾಸಕ ಲಮಾಣಿ

| Published : May 10 2025, 01:10 AM IST

ಸಾರಾಂಶ

ಭಾರತದ ಸೈನಿಕರ ದಾಳಿಗೆ ಪಾಕಿಸ್ತಾನ ವಿಲವಿಲ ಎನ್ನುತ್ತಿದೆ. ಉಗ್ರರನ್ನು ಸಾಕುತ್ತಿರುವ ಪಾಕಿಸ್ತಾನ ತಕ್ಕ ಶಾಸ್ತಿಯಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಲಕ್ಷ್ಮೇಶ್ವರ:ಭಾರತದ ಸೈನಿಕರ ದಾಳಿಗೆ ಪಾಕಿಸ್ತಾನ ವಿಲವಿಲ ಎನ್ನುತ್ತಿದೆ. ಉಗ್ರರನ್ನು ಸಾಕುತ್ತಿರುವ ಪಾಕಿಸ್ತಾನ ತಕ್ಕ ಶಾಸ್ತಿಯಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು. ಶುಕ್ರವಾರ ಪಟ್ಟಣದ ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ಪಾಕಿಸ್ತಾನದ ಉಗ್ರರ ನೆಲೆ ಮೇಲೆ ದಾಳಿ ನಡೆಸಿರುವ ಭಾರತದ ಸೈನಿಕರ ಒಳಿತಿಗಾಗಿ ದೇಶದ ಸೈನಿಕರಿಗೆ ನೈತಿಕ ಧೈರ್ಯ ತುಂಬಲು ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಗೆದುಕೊಳ್ಳುತ್ತಿರುವ ದಿಟ್ಟ ನಿರ್ಧಾರದಿಂದ ಈಗಾಗಲೇ ಭಾರತದ ಸೈನಿಕರು ಪಾಕಿಸ್ತಾನದ ಕೆಲವು ಕಡೆ ದಾಳಿ ಮಾಡಿ ಅನೇಕ ಉಗ್ರರನ್ನು ಕೊಂದು ಹಾಕಿದ್ದಾರೆ. ಪಾಕಿಸ್ತಾನದ ಸಂಸದ ಸದಸ್ಯರು ಕಣ್ಣೀರು ಹಾಕ್ತಾ ಇದ್ದಾರೆ, ಭಾರತ ಶಾಂತಿಪ್ರಿಯವಾಗಿದ್ದು ಆದರೆ ಹಲವು ದಶಕಗಳಿಂದ ಶತ್ರು ದೇಶ ಪಾಕಿಸ್ತಾನ ಕಿರಿಕಿರಿ ಕೊಡ್ತಾ ಬಂದಿದೆ. ಪಹಲ್ಗಾಮದಲ್ಲಿ ಭಯೋತ್ಪಾದಕರ ದಾಳಿಯಿಂದ ಜನರು ಹತರಾಗಿದ್ದು, ಈ ಘಟನೆ ಭಾರತಿಯರು ಎಂದು ಮರೆಲಾಗದ ಘಟನೆ ಎಂದು ಹೇಳಿದರು.

ಶಿರಹಟ್ಟಿ ಮಂಡಳದ ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಹಾಗೂ ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ ಮಾತನಾಡಿ, ಆಪರೇಷನ್ ಸಿಂದೂರ ಮೂಲಕ ಕಾರ್ಯಾಚರಣೆ ಮಾಡಿ ಪಾಕಿಸ್ತಾನದಲ್ಲಿ ಇರುವ ಉಗ್ರರಿಗೆ ನಮ್ಮ ದೇಶದ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.

ವೇಳೆ ಭಾರತ ಮಾತಾ ಕಿ ಜೈ ಎಂಬ ಘೋಷಣೆಯನ್ನು ಕಾರ್ಯಕರ್ತರು ಕೂಗಿದರು.ಈ ವೇಳೆ ಬಿಜೆಪಿ ಶಿರಹಟ್ಟಿ ಮಂಡಳಿ ಪ್ರ,ಕಾರ್ಯದರ್ಶಿ ಅನೀಲ ಮುಳಗುಂದ, ಪುರಸಭೆ ಸದಸ್ಯ ಮಹಾದೇವಪ್ಪ ಅಣ್ಣಿಗೇರಿ, ಮಂಜುಳಾ ಗುಂಜಳ, ಎಂ.ಆರ್. ಪಾಟೀಲ, ನೀಲಪ್ಪ ಹತ್ತಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರ.ಕಾರ್ಯದರ್ಶಿ ಶಕ್ತಿ ಕತ್ತಿ, ಶಿರಹಟ್ಟಿ ಮಂಡಳ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಚಕ್ರಸಾಲಿ, ಗಂಗಾಧರ ಮೆಣಸಿನಕಾಯಿ, ದುಂಡೆಶ ಕೋಟಗಿ, ಚನ್ನಪ್ಪ ಕರಿಯತ್ತಿನ, ಪ್ರವೀಣ ಬೋಮಲೆ, ವಿಜಯ ಕುಂಬಾರ, ರಮೇಶ ಹಾಳದೋಟದ, ಜಾನು ಲಮಾಣಿ, ನವೀನ ಹಿರೇಮಠ, ವಿಜಯ ಮೆಕ್ಕಿ, ರಾಮು ಪೂಜಾರ, ರುದ್ರಪ್ಪ ಉಮಚಗಿ, ವೀರೇಶ ಸಾಸಲವಾಡ, ಗಣೇಶ ಲಮಾಣಿ, ಸಂತೋಷ ಜಾವೂರ, ಕಿರಣ ಲಮಾಣಿ, ವಿಶಾಲ ಬಟಗುರ್ಕಿ, ಜಾಹೀರ್ ಮೊಮೀನ, ಸತೀಶ ಕಾಡಣ್ಣವರ ಬಿಜೆಪಿ ಕಾರ್ಯಕರ್ತರು ಇದ್ದರು.