ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಭಕ್ತಿ, ಶ್ರದ್ಧೆ, ನಿಷ್ಠೆಗಳಿಂದ ತಲೆಬಾಗಿ ನಮಸ್ಕರಿಸಿ ಸೇವೆಗೆ ಮುಂದಾಗುವುದು ಅನುಗ್ರಹಕ್ಕೆ ಪಾತ್ರರಾಗುವ ಮಹಾಕಾರ್ಯವಾಗಿದೆ ಎಂದು ಕಣ್ವಮಠ ಮೂಲ ಸಂಸ್ಥಾನ ಮಠದ ವಿದ್ಯಾಕಣ್ವವಿರಾಜ ತೀರ್ಥ ಶ್ರೀಗಳು ಹೇಳಿದರು.

ಪಟ್ಟಣದ ಮಾರುತಿ ನಗರದಲ್ಲಿರುವ ಶಿವಚಿದಂಬರೇಶ್ವರ ದೇವಸ್ಥಾನದಲ್ಲಿ ಶನಿವಾರ ಸಂಸ್ಥಾನ ಪೂಜೆ ನಂತರ ಭಕ್ತ ಸಮೂಹಕ್ಕೆ ಆಶೀರ್ವಚನ ನೀಡಿದ ಶ್ರೀಗಳು, ಗುರುಗಳ ದರ್ಶನ, ಪಾದಪೂಜೆ ಹಾಗೂ ಪಾದೋದಕ ಹಾಗೂ ಪಾದಧೂಳಗಳಿಂದ ದೇಹ ಶುದ್ಧಿಗೊಳ್ಳುವುದು. ಇಂತಹ ವೈಭವೋತ್ಸವ 45 ದಿನಗಳಲ್ಲಿ ನಡೆಯುವುದನ್ನು ನೋಡಲು ಎರಡು ಕಣ್ಣುಗಳು ಸಾಲದು. ಈ ಮಹಾ ಸ್ಥಳವೇ ಇಂದ್ರಲೋಕದಂತೆ ಕಂಗೊಳಿಸುತ್ತದೆ ಎಂಬುದರ ಕುರಿತು ಬಹುಮಾರ್ಮಿಕವಾಗಿ ವಿವರಿಸಿದ ಶ್ರೀಗಳು, ಶ್ರೀ ಸತ್ಯಾತ್ಮರು ಕಲಿಯುಗವನ್ನು ಧರ್ಮಯುಗವನ್ನಾಗಿ ಪರಿವರ್ತಿಸಲು ಮಹಾ ಮಹಿಮರಾಗಿದ್ದಾರೆ. ಭಕ್ತಿ ಜ್ಞಾನ ಶ್ರದ್ಧೆ, ಜಪ-ತಪ, ಶುದ್ಧಿ, ಉಪವಾಸಗಳ ಸಾಗರ, ವೈರಾಗ್ಯಮೂರ್ತಿ, ಭಕ್ತರ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಸನ್ಮಾರ್ಗಕ್ಕೆ ಕೊಂಡ್ಯೊಯ್ದುದ್ದರ ಕುರಿತು ವಿವರಿಸಿದರು. ಚಾತುರ್ಮಾಸ್ಯ ಆಚರಣೆ ಮಾಡುವುದರಿಂದ ದೊರೆಯುವ ಲಾಭದ ಕುರಿತು ವಿವರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ವಿದ್ಯಾಕಣ್ವವಿರಾಜ ತೀರ್ಥ ಶ್ರೀಗಳಿಂದ ಸಂಸ್ಥಾನ ಪೂಜೆ ನಡೆಯಿತು. ಮುಖ್ಯಮಂತ್ರಿ ಆಪ್ತವಲಯದ ಅಧಿಕಾರಿ ಕೃಷ್ಣಕುಮಾರ, ಪುರುಷೋತ್ತಮ, ವಿನಯಕುಮಾರ ಅವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 45 ದಿನಗಳ ಕಾಲ ವ್ಯವಸ್ಥಿತವಾಗಿ ನಡೆಯಲಿರುವ ಈ ಚಾತುರ್ಮಾಸ್ಯ ಕಾರ್ಯಕ್ರಮ ಪ್ರತಿಯೊಂದು ಕಾರ್ಯಗಳಿಗೆ ತಾವೂ ಕೂಡ ತನುಮನಧನದಿಂದ ಸಹಾಯಹಸ್ತ ಮಾಡುವುದಾಗಿ ತಿಳಿಸಿ, ಮಕ್ಕಳಿಗಾಗಿ ಸರ್ಕಾರದಿಂದ ಬೇಕಾದ ಸೌಲಭ್ಯಗಳ ಕುರಿತು ಗಮನಕ್ಕೆ ತಂದರೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.


ರಾಘವೇಂದ್ರ ಆಲಗೂರ(ಕಣ್ವಮಠಾದ್ಯಕ್ಷರು), ಗುಂಡಭಟ್ಟ ಜೋಶಿ, ಶಂಕರಭಟ್ಟ ಜೋಶಿ, ವೆಂಕಟೇಶಾಚಾರ್ಯ ಗ್ರಾಮಪುರೋಹಿತ(ತಾಳಿಕೋಟಿ), ವಿನಾಯಕರಾವ ಕುಲಕರ್ಣಿ, ಅನೀಲ್ ಕುಲಕರ್ಣಿ, ಗುಂಡಭಟ್ಟ ಜೋಶಿ (ಕಾಳಗಿ), ಬಾಪುರಾವ ದೇಸಾಯಿ(ಹಡಗಲಿ), ಕೃಷ್ಣಾಜಿ ಕುಲಕರ್ಣಿ(ಬಳಬಟ್ಟಿ), ಪುಟ್ಟು ಕುಲಕರ್ಣಿ, ಪ್ರಕಾಶ ಸರಾಫ್, ಮುರಹರಿ ದೇಶಪಾಂಡೆ, ರಾಘವೇಂದ್ರ ಕುಲಕರ್ಣಿ(ಆಲೂರ), ಶೇಷಗಿರಿರಾವ್ ದೇಸಾಯಿ, ಅರವಿಂದ ದೇಶಪಾಂಡೆ, ಅಣ್ಣಾರಾವ್ ದೇಶಪಾಂಡೆ, ರಾಘವೇಂದ್ರ ಕುಲಕರ್ಣಿ(ರೂಢಗಿ), ಮುರಹರಿ ದೇಶಪಾಂಡೆ, ಅರವಿಂದ ದೇಶಪಾಂಡೆ, ಅಣ್ಣಾರಾವ್ ದೇಶಪಾಂಡೆ, ರಂಗೋತ್ತಮ ಪಾಟೀಲ, ಕೆ.ಬಿ. ದೇಶಪಾಂಡೆ, ಅನಂತ ಕುಲಕರ್ಣಿ, ನಾಗರಾಜ ಕುಲಕರ್ಣಿ, ವಿನಾಯಕರಾವ್ ಕುಲಕರ್ಣಿ, ಸುಭಾಸ ಕುಲಕರ್ಣಿ, ಸುರೇಶ ಕುಲಕರ್ಣಿ, ಬಸವಂತ್ರಾಯ ಕುಲಕರ್ಣಿ, ನಾರಾಯಣ ಕುಲಕರ್ಣಿ, ಭೀಮರಾವ ದೇಸಾಯಿ, ಬಾಗ್ಯಶ್ರೀ ಕುಲಕರ್ಣಿ, ಸುಮಾ ಕುಲಕರ್ಣಿ, ಗೀತಾ ಜಾಗೀರದಾರ, ಲಕ್ಷ್ಮೀ ಕುಲಕರ್ಣಿ, ಸವಿತಾ ಕುಲಕರ್ಣಿ, ಕವಿತಾ, ನಂದು ಕುಲಕರ್ಣಿ(ಸರಪೂರ) ಸೇರಿದಂತೆ ಚಾತುರ್ಮಾಸ್ಯ ಸೇವಾ ಕಾರ್ಯಕಾರಿ ಮಂಡಳಿ, ಗೌರವಾನ್ವಿತ ಮಾರ್ಗದರ್ಶಕರು, ಹಾಗೂ ಯುವಕ ಮಂಡಳಿಯವರು ಉಪಸ್ಥಿತರಿದ್ದರು.