ಪ್ರಯಾಣಿಕರ ಕೊರತೆ: ರೈಲು ಸಂಚಾರ ಭಾಗಶಃ ರದ್ದು

| Published : Mar 20 2024, 01:19 AM IST

ಪ್ರಯಾಣಿಕರ ಕೊರತೆ: ರೈಲು ಸಂಚಾರ ಭಾಗಶಃ ರದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಯಾಣಿಕರ ಸಂಖ್ಯೆಯ ಕೊರತೆಯಿಂದಾಗಿ ರೈಲುಗಳ ಸಂಖ್ಯೆ 17347/17348 ಎಸ್.ಎಸ್.ಎಸ್. ಹುಬ್ಬಳ್ಳಿ ಮತ್ತು ಚಿತ್ರದುರ್ಗ ನಿಲ್ದಾಣಗಳ ನಡುವೆ ಚಲಿಸುವ ಡೆಮು ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಚಿತ್ರದುರ್ಗ ಮತ್ತು ಚಿಕ್ಕಜಾಜೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.

ಹುಬ್ಬಳ್ಳಿ:

ಈ ರೈಲುಗಳನ್ನು ಈ ಮೊದಲು ಮಾ. 31ರ ವರೆಗೆ ಭಾಗಶಃ ರದ್ದುಗೊಳಿಸಲು ಸೂಚಿಸಲಾಗಿತ್ತು. ಈಗ ಸೆ. 30ರ ವರೆಗೆ ವಿಸ್ತರಿಸಲಾಗಿದೆ. ರೈಲು ಸಂಖ್ಯೆ 17347 ಎಸ್ಎಸ್ಎಸ್ ಹುಬ್ಬಳ್ಳಿ-ಚಿತ್ರದುರ್ಗ ಡೆಮು ಎಕ್ಸ್ ಪ್ರೆಸ್ ರೈಲು ಚಿತ್ರದುರ್ಗದ ಬದಲು ಚಿಕ್ಕಜಾಜೂರ ನಿಲ್ದಾಣದ ವರೆಗೆ ಸಂಚರಿಸಲಿದೆ. ಈ ರೈಲು ಚಿಕ್ಕಜಾಜೂರು ಮತ್ತು ಚಿತ್ರದುರ್ಗ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.

ರೈಲು ಸಂಖ್ಯೆ 17348 ಚಿತ್ರದುರ್ಗ-ಎಸ್ಎಸ್ಎಸ್ ಹುಬ್ಬಳ್ಳಿ ಡೆಮು ಎಕ್ಸ್ ಪ್ರೆಸ್ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರ ವರೆಗೆ ಚಿತ್ರದುರ್ಗ ನಿಲ್ದಾಣದ ಬದಲು ಚಿಕ್ಕಜಾಜೂರಿನಿಂದ ಪ್ರಾರಂಭವಾಗಲಿದೆ. ಈ ರೈಲು ಚಿತ್ರದುರ್ಗ ಮತ್ತು ಚಿಕ್ಕಜಾಜೂರ್ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.