ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಇರಾನ್-ಅಮೇರಿಕಾ-ಇಸ್ರೇಲ್ ನಡುವಿನ ಯುದ್ಧ ನೋವಿನ ಸಂಗತಿ. ಬಾಂಬ್ ದಾಳಿಗೆ 70 ಜನ ಶಾಲಾ ಮಕ್ಕಳು, ಒಬ್ಬ ಮಂತ್ರಿ ಸಹ ಮೃತಪಟ್ಟಿದ್ದಾರೆ. ಪಕ್ಕದ ಅರಬ್ ದೇಶದಿಂದಲೂ ಯಾರೂ ಹೊರ ದೇಶಕ್ಕೆ ಹೋಗುತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ಇರಾನ್-ಅಮೇರಿಕಾ-ಇಸ್ರೇಲ್ ಮಧ್ಯೆಯುದ್ಧದಿಂದ ಅರ್ಧ ಪ್ರಪಂಚದಲ್ಲಿ ಯಾರೂ ಪ್ರಯಾಣಿಸಲು ಆಗುತ್ತಿಲ್ಲ. ಕಳೆದ 2-3 ದಿನಗಳ ಹಿಂದೆ ಸೂಚನೆ ಕೊಡಲಾಗಿತ್ತು. ಇಲ್ಲಿ ಶಾಂತಿ ಮೂಡಿಸಬೇಕು. ನಾವೆಲ್ಲ ಶಾಂತಿಗಾಗಿ ಪಠಣ ಮಾಡಬೇಕಿದೆ. ಶಾಂತಿಯಿಂದಲೇ ನಮ್ಮ ಜನರನ್ನು ಉಳಿಸಿಕೊಳ್ಳಬೇಕಿದೆ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ರಂಭಾಪುರಿ ಅಜ್ಜಯ್ಯನವರು ಯಾವಾಗಲೂ ಹೇಳುತ್ತಿದ್ದರು ಎಂದು ಸುದ್ದಿಗಾರರಿಗೆ ಹೇಳಿದರು.ಯುದ್ಧದ ಸಂದರ್ಭದಲ್ಲಿ ಯಾರ ಆಸ್ತಿ ಪಾಸ್ತಿಗೂ ನೋವಾಗಬಾರದೆಂಬುದು ನಮ್ಮ ಉದ್ದೇಶ. ಕೇಂದ್ರ ಸರ್ಕಾರಕ್ಕೂ ಒತ್ತಾಯಿಸಿದ್ದು, ಕನ್ನಡಿಗರು ಮಾತ್ರವಲ್ಲ, ನಮ್ಮ ದೇಶದ ಪ್ರಜೆಗಳಿಗೆ ಒಳ್ಳೆಯದಾಗಬೇಕು. ಇಂದು ಏನಾದರೂ ಸೌದಿ ಅರೇಬಿಯಾ ಬದುಕುತ್ತಿದೆ ಎಂದರೆ ನಮ್ಮ ದೇಶದ ಅದರಲ್ಲೂ ದಕ್ಷಿಣ ಭಾರತದವರು ಹೆಚ್ಚು ಅಲ್ಲಿ ವೃತ್ತಿ ಮಾಡಿಕೊಂಡಿದ್ದು, ಆ ದೇಶವನ್ನೂ ಬೆಳೆಸುತ್ತಿದ್ದಾರೆ. ಕೇರಳ ಭಾಗದ ಒಂದು ಕುಟುಂಬದಿಂದ ಕನಿಷ್ಟ ಒಬ್ಬರು ಸೌದಿ ಅರೇಬಿಯಾದಲ್ಲಿ ಇದ್ದಾರೆ.ನಾವು ಪರಸ್ಪರ ಆ ದೇಶಕ್ಕೆ ಸಂದೇಶ ಕಳುಹಿಸುತ್ತಿದ್ದು, ಅಲ್ಲಿ ಸಿಲುಕಿರುವವರ ಬಗ್ಗೆ ಸರ್ಕಾರ ಈಗಾಗಲೇ ಮಾರ್ಗದರ್ಶನ ನೀಡಿದೆ. ನಾವೆಲ್ಲರೂ ಇಂದು ಅಲ್ಲಿರುವವರಿಗೆ ಗಾಬರಿಯಾಗಬೇಡಿ ಎಂದು ಮನವಿ ಮಾಡೋಣ. ಭಾರತಕ್ಕೆ ಇದರಿಂದ ಒಂದು ದೊಡ್ಡ ಗಂಡಾಂತರ ಬಂದಿದೆ. ಕೇಂದ್ರ ಸರ್ಕಾರ ಬೇರೆ ದೇಶ ಹಾಗೂ ಅಮೇರಿಕಾಕ್ಕೂ ಈ ಬಗ್ಗೆ ಕಟ್ಟುನಿಟ್ಟಿನ ಸಂದೇಶ ತಲುಪಬೇಕಿದೆ. ಅಮೇರಿಕಾ ಈ ಯುದ್ಧ ನಿಲ್ಲಿಸಿ, ಶಾಂತಿ ಮಾತುಕತೆ ಮಾಡಬೇಕಿದೆ ಎಂದರು.(ಬಾಕ್ಸ್)
ನಿಮ್ಮ ಪರಿಶ್ರಮಕ್ಕೆ ಫಲ ಸಿಗ್ಗುತ್ತಾ? ಪ್ರಶ್ನೆಗೆ ಡಿಕೆಶಿ ಮಾರ್ಮಿಕ ಉತ್ತರರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸರ್ ನಿಮ್ಮ ಪರಿಶ್ರಮಕ್ಕೆ ಫಲ ಸಿಗುತ್ತಾ ಎಂಬ ಪ್ರಶ್ನೆಕೇಳಿದರು. ಇದಕ್ಕೆ ನಗುತ್ತ ಉತ್ತರಿಸಿದ ಡಿಕೆಶಿ ಏನು ಪರಿಶ್ರಮ ಎಂದು ನಗುತ್ತಾ, ನಾನು ಇಲ್ಲಿಗೆ ಬಂದಿದ್ದೇನೆ ಅಲ್ವಾ, ಮುಂದೆ ಮಾತನಾಡೋಣ ಎಂದು ನಗುತ್ತಾ ತೆರಳಿದರು.(ಬಾಕ್ಸ್)ಹೆಲಿಪ್ಯಾಡ್‌ನಲ್ಲಿ ಹೆಚ್ಚಿದ ಜನ: ಡಿಕೆಶಿ ಗರಂ ರಂಭಾಪುರಿ ಪೀಠಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಹೆಲಿಕ್ಯಾಪ್ಟರ್‌ನಿಂದ ಕೆಳಗಿಳಿದು ಬಂದವರೆ ಹೆಚ್ಚಿನ ಸಂಖ್ಯೆಯಲ್ಲಿ ಸುತ್ತುವರಿದಿದ್ದ ಮಾಧ್ಯಮ ಸಿಬ್ಬಂದಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಕಂಡು ಸಿಟ್ಟಾದ ಪ್ರಸಂಗ ನಡೆಯಿತು. ಜನರ ದಂಡು ಕಂಡು ನಿಮಗೇನಾದರೂ ಮಾನ-ಮರ್ಯಾದೆ ಇದೆಯೇನ್ರಿ? ಎಂದು ಗದರಿಸಿ ಹತ್ತಿರದಲ್ಲಿದ್ದ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ಅವರಿಗೆ ಹೆಲಿಕಾಪ್ಟರ್ ಫ್ಯಾನ್ ಇನ್ನೂ ತಿರುಗುತ್ತಾ ಇದೆ. ಆದರೂ ಇಷ್ಟೊಂದು ಜನರನ್ನು ಹತ್ತಿರ ಬಿಟ್ಟಿ ದ್ದೀರಾ? ಸ್ವಲ್ಪ ಸಿಬ್ಬಂದಿ ಹಾಕಲು ಆಗಲ್ವ ಎಂದು ಗುಡುಗಿದರು. ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ? ಇದಕ್ಕೆ ಯಾರು ಜವಾಬ್ದಾರಿ ಹೊರುತ್ತೀರಿ ಎಂದು ಪೊಲೀಸರನ್ನು ಪ್ರಶ್ನಿಸಿದರು.(ಬಾಕ್ಸ್)
ಮುಂದಿನ ಮುಖ್ಯಮಂತ್ರಿ ಡಿಕೆ ಘೋಷಣೆ ಡಿ.ಕೆ.ಶಿವಕುಮಾರ್ ರಂಭಾಪುರಿ ಪೀಠಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದು ಇಳಿಯುವ ಮುನ್ನವೇ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯ ಕರ್ತರು ಡಿಕೆ, ಡಿಕೆ, ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಘೋಷಣೆ ಕೂಗಿದರು. ಅವರು ಹೆಲಿಕಾಪ್ಟರ್‌ನಿಂದ ಹೊರಬಂದ ಬಳಿಕವೂ ಘೋಷಣೆ ಮುಂದುವರಿಸಿದ್ದರು.೦೩ಬಿಹೆಚ್‌ಆರ್ ೨:
ಬಾಳೆಹೊನ್ನೂರು ರಂಭಾಪುರಿ ಪೀಠದ ಕಾರ್ಯಕ್ರಮಕ್ಕೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಹೆಜ್ಜೆ ಹಾಕಿದರು.