ಎಂಡಿಎ, ಪಾಲಿಕೆ ಅಧಿಕಾರಿಗಳಿಗೆ ಜನರ ಮಾಡಿಕೊಡಲು ಸೂಚಿಸಿ

| Published : Sep 04 2024, 01:53 AM IST

ಎಂಡಿಎ, ಪಾಲಿಕೆ ಅಧಿಕಾರಿಗಳಿಗೆ ಜನರ ಮಾಡಿಕೊಡಲು ಸೂಚಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರ ಕೆಲಸ ಮಾಡಿಕೊಡುವಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಎಂಡಿಎ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಜನಸಾಮ್ಯಾನರ ದೈನಂದಿನ ಕೆಲಸಗಳನ್ನು ಮಾಡಿಕೊಡುವಂತೆ ಸೂಚಿಸುವಂತೆ ಹಾಗೂ ವಿವಾದಿತ ನಿವೇಶನಗಳ ಮಾಹಿತಿ ಪ್ರಕಟಿಸುವಂತೆ ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ.ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಸಾರ್ವಜನಿಕರ ಕೆಲಸ ಮಾಡಿಕೊಡುವಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಆದ್ದರಿಂದ ತಾವು ಕೂಡಲೇ ಅಧಿಕಾರಿಗಳಿಗೆ ಕೆಲಸಗಳನ್ನು ಮಾಡಿಕೊಡುವಂತೆ ಸೂಚಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೋರಿದ್ದಾರೆ.ಎಂಡಿಎ ಹಗರಣಗಳು ಬೆಳಕಿಗೆ ಬಂದು ನ್ಯಾಯಾಂಗ ತನಿಖೆಗೆ ವಹಿಸಿದ ನಂತರ, ಎಂಡಿಎ ಹಾಗೂ ಪಾಲಿಕೆಯಲ್ಲಿ ನಿವೇಶನ ಹಾಗೂ ಮನೆಗಳಿಗೆ ಸಂಬಂಧಿಸಿದಂತೆ ಯಾವುದೇ ಕೆಲಸ ಕಾರ್ಯಗಳು ನಡೆಯದೆ ಸ್ಥಗಿತವಾಗಿರುವುದರಿಂದ ಜನರಿಗೆ ತುಂಬ ತೊಂದರೆ ಉಂಟಾಗಿದೆ ಎಂದು ತಿಳಿಸಿದ್ದಾರೆ.ನಗರದ ಅನಧಿಕೃತ ಬಡಾವಣೆಗಳನ್ನು ಹೊರತು ಪಡಿಸಿ ಬಹುತೇಕ ಬಡಾವಣೆಗಳು ಎಂಡಿಎಯಿಂದ ನಿರ್ಮಾಣವಾಗಿದ್ದು, ಸುಮಾರು 40 ರಿಂದ 50 ಸಾವಿರ ನಿವೇಶನಗಳಿವೆ. ಖಾಸಗಿ ಬಡಾವಣೆಯ ಲಕ್ಷಾಂತರ ನಿವೇಶನಗಳಿವೆ. ಈ ಬಡಾವಣೆಗಳಿಗೆ ಸಂಬಂಧಿಸಿದ ನಾಗರೀಕರು ಪ್ರತಿದಿನ ಎಂಡಿಎ ಹಾಗೂ ಪಾಲಿಕೆಗೆ ತೆರಳಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಆದರೆ, ಎಂಡಿಎ ಹಗರಣದ ನಂತರ ಸಾರ್ವಜನಿಕರ ಕೆಲಸ ಕಾರ್ಯಗಳು ಸ್ಥಗಿತವಾಗಿದೆ. ಪ್ರತಿದಿನ ಜನರು ಈ ಎರಡು ಇಲಾಖೆಗಳಿಗೆ ಬಂದು ಅಲೆಯುವಂತಾಗಿದೆ. ಮೊದಲೆ ನಿಗದಿತವಾಗಿ ಜನರ ಕೆಲಸ ಮಾಡಿಕೊಡದ ಕೆಲವು ಸಂಬಂಧಿಸಿದ ಅಧಿಕಾರಿಗಳಿಗೆ ವಿಳಂಬ ಧೋರಣೆ ಅನುಸರಿಸಲು ಹಾಗೂ ಮಾಮೂಲಿ ವಸೂಲಿ ಮಾಡಲು ಇದೊಂದು ನೆಪವಾಗಿದೆ ಎಂದು ಅವರು ಆರೋಪಿಸಿದ್ದಾರೆ.ವಿವಾದಿತ ನಿವೇಶನಗಳ ಮಾಹಿತಿ ಪ್ರಕಟಿಸಿ2018-19 ರಿಂದ ಈಗಿನವರೆಗೆ 50:50 ಯೋಜನೆಯಡಿ ಮಂಜೂರು ಮಾಡಿರುವ ಎಲ್ಲಾ ವಿವಾದಿತ ನಿವೇಶನಗಳ ಮಾಹಿತಿಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಬೇಕು. ಹಾಗೂ ಅಂತಹ ವಿವಾದಿತ ನಿವೇಶನಗಳನ್ನು ಹೊರತು ಪಡಿಸಿ, ನಿಯಮ ಬದ್ಧವಾಗಿ ಎಂಡಿಎಯಿಂದ ನಿವೇಶನ ಪಡೆದಿರುವ ಸಾರ್ವಜನಿಕರ ಹಾಗೂ ಖಾಸಗಿ ಬಡಾವಣೆಗಳ ನಿರ್ಮಾಣಕಾರರ ಮತ್ತು ನಿವಾಸಿಗಳ ಕೆಲಸಗಳನ್ನು ಎಂದಿನಂತೆ ಮಾಡಿಕೊಡಲು ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಿನ ಸೂಚನೆ ನೀಡಬೇಕು ಎಂದು ಅವರು ಕೋರಿದ್ದಾರೆ.--ಬಾಕ್ಸ್‌------ ಘಟನೋತ್ತರ ಮಂಜೂರಾತಿ ಎಂದರೇನು?--ಎಂಡಿಎಗೆ ಅಧ್ಯಕ್ಷರ ನೇಮಕವಾಗದೆ ಈ ಹಿಂದೆ ವರ್ಷಾನುಗಟ್ಟಲೆಯಿಂದ ಆಡಳಿತ ಮಂಡಳಿ ಸಭೆ ನಡೆದಿರಲಿಲ್ಲ. ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಅನುಮತಿ, ನಕ್ಷೆ ಅನುಮತಿ, ಖಾತೆ ವರ್ಗಾವಣೆ ಈ ಮುಂತಾದ ಕೆಲಸಗಳು ಸ್ಥಗಿತವಾಗಿವೆ. ಇದೀಗ ಆಯೋಗದ ತನಿಖೆ ನೆಪದಲ್ಲಿ ಎಂದಿನ ಕೆಲಸ ಕಾರ್ಯಗಳು ಮತ್ತಷ್ಟು ವಿಳಂಬವಾಗುತ್ತಿವೆ. ಆದರೂ ಕೆಲವು ಕಡತಗಳನ್ನು ಮಾತ್ರ ಘಟನೋತ್ತರ ಮಂಜೂರಾತಿ ಹೆಸರಿನಲ್ಲಿ ಅಧಿಕಾರಿಗಳು ಅನುಮೋದನೆ ನೀಡುತ್ತಿರುವುದು ಕಂಡು ಬಂದಿದೆ. ಘಟನೋತ್ತರ ಅನುಮತಿ ಹೆಸರಿನಲ್ಲಿಯೂ ಅಕ್ರಮ ಎಸಗುತ್ತಿದ್ದಾರೆಯೇ ಎಂಬುವ ಅನುಮಾನ ಕಾಡುತ್ತಿದೆ ಎಂದು ಅವರು ದೂರಿದ್ದಾರೆ.