ಪಿಎಲ್ ಡಿ ಬ್ಯಾಂಕ್ ಚುನಾವಣೆ: 14 ಕ್ಷೇತ್ರಗಳಿಗೆ 49 ನಾಮಪತ್ರ ಸಲ್ಲಿಕೆ

| Published : Feb 01 2025, 12:02 AM IST

ಸಾರಾಂಶ

ಪಿಎಲ್‌ಡಿ ಬ್ಯಾಂಕ್ ನ 14 ಕ್ಷೇತ್ರಗಳ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಫೆ.8ರಂದು ಚುನಾವಣೆ ನಿಗದಿಯಾಗಿದೆ. ಬ್ಯಾಂಕ್ ನಲ್ಲಿ 14 ಕ್ಷೇತ್ರಗಳ ಪೈಕಿ 13 ಸಾಲಗಾರರ ಕ್ಷೇತ್ರ, 1 ಸಾಲಗಾರರಲ್ಲದ ಕ್ಷೇತ್ರವಾಗಿದೆ. 7 ಸಾಮಾನ್ಯ ಕ್ಷೇತ್ರ, ಪರಿಶಿಷ್ಟ ಕ್ಷೇತ್ರ-1 , ಪರಿಶಿಷ್ಟ ಪಂಗಡ-1 , ಮಹಿಳಾ ಕ್ಷೇತ್ರ-2 , ಹಿಂದುಳಿದ ವರ್ಗ ಎ -1, ಹಿಂದುಳಿದ ವರ್ಗ ಬಿ- 1, ಮೀಸಲು ನಿಗದಿಯಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಎಲ್ ಡಿ)ಬ್ಯಾಂಕ್ ನ ಆಡಳಿತ ಮಂಡಳಿಯ 14 ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ಒಟ್ಟು 49 ನಾಮಪತ್ರಗಳು ಸಲ್ಲಿಕೆಯಾಗಿವೆ.

ಪಿಎಲ್‌ಡಿ ಬ್ಯಾಂಕ್ ನ 14 ಕ್ಷೇತ್ರಗಳ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಫೆ.8ರಂದು ಚುನಾವಣೆ ನಿಗದಿಯಾಗಿದೆ. ಬ್ಯಾಂಕ್ ನಲ್ಲಿ 14 ಕ್ಷೇತ್ರಗಳ ಪೈಕಿ 13 ಸಾಲಗಾರರ ಕ್ಷೇತ್ರ, 1 ಸಾಲಗಾರರಲ್ಲದ ಕ್ಷೇತ್ರವಾಗಿದೆ. 7 ಸಾಮಾನ್ಯ ಕ್ಷೇತ್ರ, ಪರಿಶಿಷ್ಟ ಕ್ಷೇತ್ರ-1 , ಪರಿಶಿಷ್ಟ ಪಂಗಡ-1 , ಮಹಿಳಾ ಕ್ಷೇತ್ರ-2 , ಹಿಂದುಳಿದ ವರ್ಗ ಎ -1, ಹಿಂದುಳಿದ ವರ್ಗ ಬಿ- 1, ಮೀಸಲು ನಿಗದಿಯಾಗಿದೆ.

ಚುನಾವಣೆಗೆ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆ ದಿನವಾದ ಹಿನ್ನೆಲೆಯಲ್ಲಿ ಆಕಾಂಕ್ಷಿತ ಹಲವಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು

ಸಾಲಗಾರ ಸಾಮಾನ್ಯ ಕ್ಷೇತ್ರಗಳಾದ ಜಕ್ಕನಹಳ್ಳಿ ಕ್ಷೇತ್ರದಿಂದ; ಕೆ.ಎನ್.ಕೃಷ್ಣೇಗೌಡ, ಕೆ.ಆರ್.ಸುರೇಶ್, ಸಿಂಗೇಗೌಡ, ಅಶ್ವತ್ಥ್ ಕುಮಾರೇಗೌಡ, ಕೆ.ಎನ್.ದಿನೇಶ್, ಕೆ.ಎಚ್.ಪುಟ್ಟಸ್ವಾಮೀಗೌಡ, ಗುರುರಾಜು ಕೆ.ಎಂ., ಹಳೇಬೀಡು ಕ್ಷೇತ್ರದಿಂದ: ಎಚ್.ಎನ್.ದಯಾನಂದ, ಎಚ್.ಕೆ.ಕುಳ್ಳೇಗೌಡ, ಚಿಕ್ಕಾಡೆ ಕ್ಷೇತ್ರ: ಎನ್.ಮುರುಳಿ, ಟಿ.ಎನ್.ಧರ್ಮ, ಕೆ.ಬೆಟ್ಟಹಳ್ಳಿ ಕ್ಷೇತ್ರ: ಬಿ.ನರೇಂದ್ರ ಬಾಬು, ಕೆ.ಎಂ.ನಾಗರಾಜು, ದಿನೇಶ್, ಬನ್ನಂಗಾಡಿ ಕ್ಷೇತ್ರ: ಡಿ.ಎನ್.ಸೋಮಶೇಖರ್, ಗಂಗಾಧರ್ ಬಿ., ನಂಜೇಗೌಡ.ಜಿ.ಡಿ., ಜಗದೀಶ್ ಡಿ.ಸಿ., ಚಿನಕುರಳಿ ಕ್ಷೇತ್ರ: ಸಿ.ಪ್ರಕಾಶ್, ಸಿ.ಎಂ.ಚಂದ್ರಶೇಖರ್, ನಾರಾಯಣಪುರ ಕ್ಷೇತ್ರ: ಕೆ.ಕುಮಾರ್, ವೆಂಕಟೇಶ್, ನಾಗೇಗೌಡ, ಹಿಂದುಳಿದ ವರ್ಗ ಎ ಮಾಣಿಕ್ಯಹಳ್ಳಿ ಕ್ಷೇತ್ರ: ಗಿರೀಶ್.ಟಿ., ನಾಗಶೆಟ್ಟಿ, ಮಹಿಳಾ ಮೀಸಲು ಮಹದೇಶ್ವರಪುರ ಕ್ಷೇತ್ರ: ಗೌರಮ್ಮ, ಎಸ್.ಯೋಗಲಕ್ಷ್ಮೀ , ಹಿಂದುಳಿದ ವರ್ಗ ಬಿ ಹಿರೇಮರಳಿ ಕ್ಷೇತ್ರ: ಚಲುವೇಗೌಡ(ಬಕೋಡಿ), ಸುನೀಲ್ ಕುಮಾರ್ ಬಿ., ಮಧು ಎಚ್.ಇ.,ಮಹಿಳಾ ಮೀಸಲು ಪಾಂಡವಪುರ ಕ್ಷೇತ್ರ: ಎಚ್.ಎಂ.ಆಶಾಲತ, ರತ್ನಮ್ಮ., ಪರಿಶಿಷ್ಟ ಪಂಗಡ ಮೀಸಲು ಹರವು ಕ್ಷೇತ್ರ: ಸುನಂದ, ಚಂದ್ರ, ಪರಿಶಿಷ್ಟ ಜಾತಿ ಮೀಸಲು ಸುಂಕಾತೊಣ್ಣೂರು ಕ್ಷೇತ್ರ: ನೀಲಯ್ಯ ಬಿ.ಎಸ್., ಚಿಕ್ಕಬೋರಯ್ಯ, ಶಂಕರಯ್ಯ, ಶಿವಣ್ಣ,

ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ: ಯಶವಂತ್ ಕುಮಾರ್, ಜಗದೀಶ್, ಅವಿನಾಶ್ ಡಿ.ಎಸ್ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಎಂ.ಲೋಕೇಶಮೂರ್ತಿ ತಿಳಿಸಿದರು.