ಧರ್ಮದ ಬಗ್ಗೆ ಅರಿವು ಮೂಡಿಸುವ ಹೊಣೆ ಧರ್ಮಗುರುಗಳದ್ದು: ಸಯ್ಯಿದ್‌ ತಂಙಳ್

| Published : Feb 01 2025, 12:02 AM IST

ಧರ್ಮದ ಬಗ್ಗೆ ಅರಿವು ಮೂಡಿಸುವ ಹೊಣೆ ಧರ್ಮಗುರುಗಳದ್ದು: ಸಯ್ಯಿದ್‌ ತಂಙಳ್
Share this Article
  • FB
  • TW
  • Linkdin
  • Email

ಸಾರಾಂಶ

ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್, ಸಾದಾತ್ ತಂಙಳ್,ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಾರ್ಮಾಡಿ ಹಸನಬ್ಬ, ಪಿಡಿಒ ಮೋಹನ್ ಬಂಗೇರ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಧರ್ಮ ಮತ್ತು ಆಧ್ಯಾತ್ಮಿಕತೆ ಒಳಗೊಂಡಿರುವ ಬದುಕು ಸೌಹಾರ್ದತೆಯ ನಾಡಿಗೆ ಪ್ರೇರಣೆ. ಹಿಂದೂ ಕ್ರೈಸ್ತ ಮುಸಲ್ಮಾನ ಜೈನ್ ಬೌದ್ಧ ಯಾವುದೇ ಧರ್ಮವಿರಲಿ ಅದರ ಆಚಾರ್ಯರು, ಮುನಿಗಳು ಮತ ಪಂಡಿತರು ಕಲಿಸಿಕೊಡುವ ಮೂಲತತ್ವ ಕಲಿಯದೆ ಸ್ವತಂತ್ರವಾಗಿ ಬದುಕಲು ಆರಂಭಿಸಿದ್ದರಿಂದಲೇ ಸಂಘರ್ಷಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಧರ್ಮದ ತಿರುಳನ್ನು, ಧರ್ಮ ವಿಜ್ಞಾನವನ್ನು ತಮ್ಮ ಅನುಯಾಯಿಗಳಿಗೆ ಕಲಿಸಿಕೊಡಬೇಕಾದುದು ಧರ್ಮಶ್ರೇಷ್ಠರುಗಳ ಜವಾಬ್ದಾರಿಯಾಗಿದೆ. ಹಾಗಿದ್ದರೆ ಮಾತ್ರ ಸುಂದರ ಭಾರತ ನೋಡಲು ಸಾಧ್ಯ ಎಂದು ಸಯ್ಯಿದ್ ಕಾಜೂರು ತಂಙಳ್ ಹೇಳಿದರು.

ಕಾಜೂರು ಮಖಾಂ ಶರೀಫ್‌ನಲ್ಲಿ ಆರಂಭಗೊಂಡ 2025ನೇ ಉರೂಸ್ ಉದ್ಘಾಟಿಸಿ ಆಶೀರ್ವಚನ ನೀಡಿದರು.

ತಾಜುಲ್ ಉಲಮಾ ಅವರ ಪುತ್ರ ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಅಧ್ಯಕ್ಷತೆ ವಹಿಸಿದ್ದು ದುಆ ನೆರವೇರಿಸಿದರು.

ಶುಭ ನುಡಿಗಳನ್ನಾಡಿದ ಸಯ್ಯಿದ್ ಸಾದಾತ್ ತಂಙಳ್, ವೈಜ್ಞಾನಿಕ ನೆಲೆಗಟ್ಟಿನಲ್ಲಿ ಶೈಕ್ಷಣಿಕ ಪ್ರಗತಿಯ ಮೂಲಕ ಪರಿವರ್ತನೆಗೊಳ್ಳುತ್ತಿರುವ ಕಾಜೂರನ್ನು ನೋಡಲು ಹೆಮ್ಮೆಯಾಗುತ್ತಿದೆ. ಪೂರ್ವ ವಿದ್ವಾಂಸರು ತೋರಿದ ಆದರ್ಶವನ್ನು ಪಾಲಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ ಎಂದರು.ಸಯ್ಯಿದ್ ಕಾಜೂರು‌ ತಂಙಳ್‌ ವಕ್ಫ್‌ ಜಿಲ್ಲಾ ಉಪಾಧ್ಯಕ್ಷ ಫಕೀರಬ್ಬ ಮರೋಡಿ, ಜಿಲ್ಲಾಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ, ಪಿಡಿಒ ಮೋಹನ ಬಂಗೇರ, ಅನಿವಾಸಿ ಭಾರತೀಯರ ಅಂತಾರಾಷ್ಟ್ರೀಯ ಸಂಘಟನೆ ಕೆಸಿಎಫ್‌ನ ಇಹ್ಸಾನ್ ವಿಭಾಗದ ಚೇರ್ಮೆನ್ ಕೆ.ಎಂ. ಇಕ್ಬಾಲ್ ಕಾಜೂರು, ಖ್ಯಾತ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ, ಕೋಶಾಧಿಕಾರಿ‌ ಕೆ.ಎಂ. ಕಮಾಲ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್, ಕಾಜೂರು ಉಪಾಧ್ಯಕ್ಷ ಬದ್ರುದ್ದೀನ್, ಕಿಲ್ಲೂರು‌ ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆಮನೆ, ರಾಜ್ಯ ಉಲಮಾ ಒಕ್ಕೂಟದ ಸದಸ್ಯ ಕೆ.ಯು. ಉಮರ್ ಸಖಾಫಿ, ಕಾಜೂರು‌ ಮಾಜಿ ಅಧ್ಯಕ್ಷರಾದ ಕೆ. ಶೇಖಬ್ಬ ಕುಕ್ಕಾವು, ಬಿ.ಎ. ಯೂಸುಫ್ ಶರೀಫ್, ಹಾಜಿ ಇಬ್ರಾಹಿಂ ಮದನಿ, ಮಿತ್ತಬಾಗಿಲು ಗ್ರಾ.ಪಂ. ಸದಸ್ಯರಾದ ಚಂದ್ರಶೇಖರ, ಅಹ್ಮದ್ ಕಬೀರ್ ಕಾಜೂರು ಮತ್ತು ಶಾಹುಲ್ ಹಮೀದ್, ಮಲವಂತಿಗೆ ಗ್ರಾ.ಪಂ. ಸದಸ್ಯ ಕೆ.ಯು. ಮುಹಮ್ಮದ್, ಪ್ರಮುಖರಾದ ಶಶಿಧರ ಗೌಡ ಬೆಡಿಗುತ್ತು, ಕಿಲ್ಲೂರು ಮಾಜಿ ಅಧ್ಯಕ್ಷ‌ ಎಂ.ಎ. ಕಾಸಿಂ ಮಲ್ಲಿಗೆಮನೆ, ಪ್ರಮುಖರಾದ ಅಬ್ದುಲ್ ಬಶೀರ್ ನೆಕ್ಕರೆ ಮುಂಡಾಜೆ, ಬಶೀರ್ ಮಾಹಿನ್, ಸಿರಾಜುದ್ದೀನ್ ಸಖಾಫಿ ಪಿಚಲಾರು, ಅಬ್ಬೋನು ಮದ್ದಡ್ಕ, ಅಶ್ರಫ್ ಬಿ. ನೆರಿಯ, ಸುಲೈಮಾನ್ ಚಾರ್ಮಾಡಿ, ಕರೀಂ ಹಾಜಿ ಲಾಯಿಲ, ಡಿ.ಡಿ‌. ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಮುಹಮ್ಮದ್ ರಫಿ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.

ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್, ಸಾದಾತ್ ತಂಙಳ್,ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಾರ್ಮಾಡಿ ಹಸನಬ್ಬ, ಪಿಡಿಒ ಮೋಹನ್ ಬಂಗೇರ ಅವರನ್ನು ಸನ್ಮಾನಿಸಲಾಯಿತು.

ಉರೂಸ್ ಸಮಿತಿ ಹಾಗೂ ಕಾಜೂರು ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜೆ.ಎಚ್. ಅಬೂಬಕ್ಕರ್ ಸಿದ್ದೀಕ್ ಕಾಜೂರು ವಂದಿಸಿದರು.