ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ಭರ್ತಿಗೆ ಆಗ್ರಹ

| Published : Nov 13 2025, 04:15 AM IST

ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ಭರ್ತಿಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮೀಸಲಾತಿ ಗೊಂದಲವನ್ನು ಆದಷ್ಟು ಬೇಗ ನಿವಾರಿಸಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿವಿರುವ ಸರ್ಕಾರಿ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡುವ ಹಾಗೂ ವಯೋಮಿತಿ ಸಡಿಲಿಸಬೇಕು ಎಂದು ಆಲ್‌ ಕರ್ನಾಟಕ ಸ್ಟೇಟ್‌ ಸ್ಟೂಡೆಂಟ್‌ ಅಸೋಸಿಯೇಷನ್‌ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮೀಸಲಾತಿ ಗೊಂದಲವನ್ನು ಆದಷ್ಟು ಬೇಗ ನಿವಾರಿಸಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿವಿರುವ ಸರ್ಕಾರಿ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡುವ ಹಾಗೂ ವಯೋಮಿತಿ ಸಡಿಲಿಸಬೇಕು ಎಂದು ಆಲ್‌ ಕರ್ನಾಟಕ ಸ್ಟೇಟ್‌ ಸ್ಟೂಡೆಂಟ್‌ ಅಸೋಸಿಯೇಷನ್‌ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ರಾಜ್ಯದ ಗ್ರಾಮೀಣ ಭಾಗದ ಬಡ ನಿರುದ್ಯೋಗಿ ಯುವಕರು/ಯುವತಿಯರು ಸರ್ಕಾರಿ ನೌಕರಿ ಪಡೆದುಕೊಳ್ಳಬೇಕೆಂಬ ಮಹದಾಸೆಯೊಂದಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಸ್ವಂತ ಊರು, ವಯಸ್ಸಾದ ತಂದೆ-ತಾಯಿ ಹಾಗೂ ಕುಟುಂಬ, ವರ್ಗದವರನ್ನು ಬಿಟ್ಟು ದೂರದ ಬೆಂಗಳೂರು, ಧಾರವಾಡ ಹಾಗೂ ವಿಜಯಪುರದಂತಹ ನಗರಗಳಲ್ಲಿ ಸಾಲ ಶೂಲ ಮಾಡಿ ಸುಮಾರು 5-6 ವರ್ಷಗಳಿಂದ ಬಾಡಿಗೆ ಮನೆ, ಪಿಜಿಗಳಲ್ಲಿ ಕಷ್ಟ ಪಟ್ಟು ಹಗಲಿರುಳು ಓದುತ್ತಿದ್ದಾರೆ. ಅಲ್ಲದೆ ಕಳೆದೆರಡು ವರ್ಷಗಳಿಂದ ಒಳ ಮೀಸಲಾತಿ ಜಾರಿ ವಿಳಂಬದಿಂದಾಗಿ ಎಲ್ಲ ನೇಮಕಾತಿ ಅಧಿಸೂಚನೆಗಳನ್ನು ತಡೆ ಹಿಡಿದಿರುವುದರಿಂದ ಪಿಜಿ ರೂಮ್‌ಗಳ ಬಾಡಿಗೆಯನ್ನು ಕಟ್ಟಲೂ ಆಗದೇ ಊಟ ಮಾಡುವುದಕ್ಕೂ ಪರದಾಡೋ ಪರಿಸ್ಥಿತಿ ನಿರ್ಮಾಣವಾಗಿದ್ದು ಹೊಸ ನೇಮಕಾತಿಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇದರಿಂದಾಗಿ ಲಕ್ಷಾಂತರ ಯುವಕರು ತಮ್ಮ ಬದುಕಿನ ಬಗ್ಗೆ ಭರವಸೆಗಳನ್ನು ಕಳೆದುಕೊಳ್ಳುವಂತಾಗಿದೆ. ವಯೋಮಿತಿ ಮೀರಿ ಸರ್ಕಾರಿ ನೌಕರಿಯಿಂದ ವಂಚಿತರಾಗಿ ಮಾನಸಿಕವಾಗಿ ಕುಗ್ಗುವಂತಾಗಿದೆ. ಅಲ್ಲದೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಧಾರವಾಡದಲ್ಲಿ 5-6 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದ ಬಡ ಯುವ ಸ್ಪರ್ಧಾಕಾಂಕ್ಷಿಯೊಬ್ಬರು ಮಾನಸಿಕವಾಗಿ ನೊಂದು ಹೃದಯಾಘಾತದಿಂದಾಗಿ ಮೃತಪಟ್ಟಿದ್ದು ಅವರ ಪೋಷಕರಿಗೆ ದಿಕ್ಕೇ ತೋಚದಂತಾಗಿ ಚಿಂತಾ ಜನಕವಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.ಶೇ.56 ಮೀಸಲಾತಿ ಹಾಗೂ ರೋಸ್ಟರ್ ಬಿಂದು ವಿಚಾರಕ್ಕೆ ಸಂಬಂಧಿಸಿದಂತ ಪ್ರಕರಣವು ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣ ಎಲ್ಲ ನೇಮಕಾತಿಗಳು ನೆನೆಗುದಿಗೆ ಬಿದ್ದು ವಿಳಂಬವಾಗುತ್ತಿದ್ದು. ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿಯ ಕೊರತೆಯಿಂದಾಗಿ ಇದರ ನೇರ ಪರಿಣಾಮ ಸರ್ಕಾರದ ಆಡಳಿತದ ಮೇಲೂ ಬೀರುತ್ತಿದೆ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಲಕ್ಷಾಂತರ ನಿರುದ್ಯೋಗಿ ಸ್ಪರ್ಧಾರ್ಥಿಗಳು ಕಳೆದ ಸೆಪ್ಟೆಂಬರ್‌ನಲ್ಲಿ ರಾಜ್ಯದ ವಿದ್ಯಾಕಾಶಿ ಧಾರವಾಡದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಅದರ ಮುಂದುವರೆದ ಭಾಗವಾಗಿ ಇದೇ ನ.12ರಂದು ವಿಜಯಪುರ ಜಿಲ್ಲೆಯಲ್ಲಿ ಮತ್ತೊಮ್ಮೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಈ ಪ್ರತಿಭಟನೆಯನ್ನು ಗಂಭಿರವಾಗಿ ಪರಿಗಣಿಸದಿದ್ದರೆ ಯುವಕರ ಪ್ರತಿಭಟನೆ ಕಾವು ವಿಕೋಪಕ್ಕೆ ಹೋಗುವ ಸಾಧ್ಯತೆಯಿದ್ದು, ಸರ್ಕಾರವೇ ಅದರ ಸಂಪೂರ್ಣ ಜವಾಬ್ದಾರಿ ಹೊರಬೇಕಾಗುವುದರಿಂದ ಅಂತಹದಕ್ಕೆ ದಯಮಾಡಿ ಅವಕಾಶ ನೀಡದೇ ಅದಕ್ಕೂ ಮುಂಚೆಯೇ ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಈ ಮೂಲಕ ನಮ್ಮ ಕೆಳಕಂಡ ಬೇಡಿಕೆಗಳನ್ನು ಈ ಕೂಡಲೇ ಈಡೀರಿಸಬೇಕು.ಕರ್ನಾಟಕ ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಎಲ್ಲ ನೇಮಕಾತಿಗಳನ್ನು ಒಳಮೀಸಲಾತಿ ಒಳಗೊಂಡಂತೆ ತ್ವರಿತವಾಗಿ ಪ್ರಾರಂಭ ಮಾಡಬೇಕು ಎಂದು ಆಗ್ರಹಿಸಿದರು. ಈ ಕೂಡಲೇ ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಆದಷ್ಟು ಬೇಗ ನಮ್ಮಲ್ಲ ಬೇಡಿಕೆಗಳ್ಳನ್ನು ಈಡೇರಿಸಿ ಈ ಕೂಡಲೇ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದರ ಜೊತೆಗೆ ಅವರ ಬದುಕಿನ ಆಶಾಕಿರಣ ತಾವಾಗಬೇಕು ಎಂದು ಒತ್ತಾಯಿಸಿದರು.-ಒಳ ಮೀಸಲಾತಿ ಮತ್ತು ಒಳ ಮೀಸಲಾತಿ ಒಳಗೊಂಡಂತೆ ಎಲ್ಲ ನೇಮಕಾತಿ ಪ್ರಕ್ರಿಯೆ ಕೂಡಲೇ ಪ್ರಾರಂಭಿಸಬೇಕು

-ಪೊಲೀಸ್ ಕಾನ್ಸ್‌ಟೆಬಲ್‌ SC,ST,OBC ಗೆ 33 ವರ್ಷ ಮತ್ತು GM ಗೆ ಕಾಯಂ ಗೊಳಿಸಲೇಬೇಕು.

-545 PSI ಪರೀಕ್ಷೆ ಮತ್ತು 402 PSI ಪರೀಕ್ಷೆಗೆ ಅರ್ಹತೆ ಪಡೆದವರಿಗೆ ಮತ್ತೊಂದು ಅವಕಾಶ ಕೊಡಲೇಬೇಕು ಹಾಗೂ ಪೊಲೀಸ್ ಇಲಾಖೆಯ ಎಲ್ಲ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.

-PSTR,GPSTR,HSTR, ದೈಹಿಕ ಶಿಕ್ಷಕರು, PU ಉಪನ್ಯಾಸಕರು, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಕೂಡಲೇ ಪ್ರಾರಂಭಿಸಬೇಕು.

-ಭ್ರಷ್ಟಾಚಾರ ಮುಕ್ತ ನೇಮಕಾತಿ

-ಗ್ರಂಥಪಾಲಕ ಹಾಗೂ ಸಹಾಯಕ ಗ್ರಂಥಪಾಲಕ ನೇಮಕಾತಿ ಪ್ರಕ್ರಿಯೆಯನ್ನು ಆರಂಭ ಮಾಡಬೇಕು.

-ಪ್ರತಿ ವರ್ಷ ಎಲ್ಲ ಇಲಾಖೆಗಳಿಂದ ಎಲ್ಲ ಹುದ್ದೆಗಳ ನೇಮಕಾತಿ ಮಾಡಲೇಬೇಕು.

-5 ವರ್ಷ ಎಲ್ಲ ಇಲಾಖೆಯಿಂದ ಶಾಶ್ವತ ವಯೋಮಿತಿ ಕಾಯಂಗೊಳಿಸಿ.

-ಕೇಂದ್ರ ಲೋಕಸೇವಾ ಆಯೋಗ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಪರೀಕ್ಷಾ ಶುಲ್ಕ ಅನ್ವಯಿಸಲೇಬೇಕು.

-AO, AAO, Land surveyor, veterinary officer ಕೂಡಲೇ ನೇಮಕಾತಿ ಆರಂಭಿಸಲೇಬೇಕು.

-3A, 3B category ಅಭ್ಯರ್ಥಿಗಳಿಗೆ ನ್ಯಾಯತವಾಗಿ ಪೋಸ್ಟರ್ ಬಿಂದುವನ್ನು ನೇಮಕಾತಿಯಲ್ಲಿ ಕೂಡಲೇ ಅಳವಡಿಸಬೇಕು.-ಆರೋಗ್ಯ ಇಲಾಖೆಯಲ್ಲಿರುವ ಗ್ರೂಪ್ A, ಗ್ರೂಪ್ B, ಗ್ರೂಪ್ C ಹಾಗೂ ನರ್ಸಿಂಗ್ ಸ್ಟಾಪ್ ಕೂಡಲೇ ನೇಮಕಾತಿ ಆರಂಭಿಸಬೇಕು.-ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಯುಜಿಸಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ ಕೌನ್ಸಿಲಿಂಗ್ ಪ್ರಕ್ರಿಯೆ ಶುರು ಮಾಡಬೇಕು.