ಸಾರಾಂಶ
ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆ
ಕನ್ನಡಪ್ರಭ ವಾರ್ತೆ ಕಲಬುರಗಿಶಿಕ್ಷಣದ ಜೊತೆಗೆ ವಿವಿಧ ಕಲೆಗಳನ್ನು ಹೊರ ತೆಗಿಯುವ ಕೆಲಸ ಶಿಕ್ಷಕ ವೃಂದದವರಾಗಿರಬೇಕು, ಪ್ರತಿಭಾ ಕಾರಂಜಿಯು ಮಕ್ಕಳಲ್ಲಿನ ವಿಶೇಷ ಕಲೆಯನ್ನು ಹೊರಹಾಕಲು ಇದು ಒಂದು ಒಳ್ಳೆ ವೇದಿಕೆಯಾಗಿದೆ ಎಂದು ಶಾಸಕ ಅಲ್ಲಮ ಪ್ರಭು ಪಾಟೀಲ ಹೇಳಿದರು.
ಶಿಕ್ಷಣದ ಜೊತೆಗೆ ವಿವಿಧ ಕಲೆಗಳನ್ನು ಹೊರ ತೆಗಿಯುವ ಕೆಲಸ ಶಿಕ್ಷಕ ವೃಂದದವರಾಗಿರಬೇಕು, ಪ್ರತಿಭಾ ಕಾರಂಜಿಯು ಮಕ್ಕಳಲ್ಲಿನ ವಿಶೇಷ ಕಲೆಯನ್ನು ಹೊರಹಾಕಲು ಇದು ಒಂದು ಒಳ್ಳೆ ವೇದಿಕೆಯಾಗಿದೆ ಎಂದು ಶಾಸಕ ಅಲ್ಲಮ ಪ್ರಭು ಪಾಟೀಲ ಹೇಳಿದರು. ಕಲಬುರಗಿಯಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.ನಗರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕಲಬುರಗಿ ಹಾಗೂ ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಗರದ ಚರ್ಚೆ ರಸ್ತೆಯಲ್ಲಿರುವ ಸೇಂಟ್ ಮೇರಿ ಇಂಗ್ಲಿಷ್ ಮಾಧ್ಯಮ ಶಾಲೆಯ ಆವರಣದಲ್ಲಿ 2024-25ನೇ ಸಾಲಿನ ಪ್ರಾಥಮಿಕ. ಪ್ರೌಢ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಸಸಿಗೆ ನೀರೆರೆಯುವ ಮೂಲಕ ಉದ್ಫಾಟಿಸಿ ಮಾತನಾಡಿದರು.
ಇದೇ ರೀತಿ ಮಕ್ಕಳಿಗೆ ಇದು ಕೂಡ ಒಂದು ಒಳ್ಳೆ ಕಲೆಯನ್ನು ಹುಟ್ಟಿ ಹಾಕುತ್ತದೆ. ಇದರಿಂದ ಮಕ್ಕಳಿಗೆ ಪಠ್ಯದ ಜೊತೆಗೆ ತಮ್ಮ ಪ್ರತಿಭೆಗಳನ್ನು ಗುರುತಿಸಲು ಸಾಧ್ಯ ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತ್ ಸದಸ್ಯರಾದ ಶಶೀಲ್ ನಮೋಶಿ ಜಿ ನಮೋಶಿ ಅವರು ಮಾತನಾಡಿ, ಶಿಕ್ಷಣ ಎಂದರೆ ಮಕ್ಕಳ ಸರ್ವಾಂಗಣ ಅಭಿವೃದ್ಧಿಯನ್ನು ಹೊರ ಹಾಕುವುದು, ಎಲ್ಲಾ ಕಲೆಗಳ ಮುಖಾಂತರ ಪ್ರತಿಭೆಯನ್ನು ಹೊರ ತರಬೇಕು ಇಂತಹ ಕಾರ್ಯಗಳು ಮಾಡುವುದೆ ನಮ್ಮೆಲ್ಲರ ಕರ್ತವ್ಯ ಇದೆ ಎಂದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಹಿರಿಯ ಶಾಸಕ ಎಂ.ವೈ. ಪಾಟೀಲ ಅವರು ಮಾತನಾಡಿ, ಮಕ್ಕಳಲ್ಲಿ ಕಲೆಯನ್ನು ಗುರುತಿಸುವುದು ಬಹಳಷ್ಟು ಮಹತ್ವ ಇದೆ.ಶಿಕ್ಷಣ ಪ್ರಗತಿಯಾದರೆ ಮಾತ್ರ ನಾವು ಪ್ರಗತಿಯನ್ನು ಹೊಂದುತ್ತಿವೆ, ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ತುಂಬುವ ಕಾರ್ಯಕ್ರಮಗಳು ಪ್ರತಿಭೆಯನ್ನು ವೇದಿಕೆಯಾಗಿದೆ, ನಮ್ಮ ವಿದ್ಯಾರ್ಥಿಗಳು ರಾಜ್ಯ ಮಟ್ಟ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕಲೆಯನ್ನು ತೊರುತ್ತಿದ್ದಾರೆ ಅದಕ್ಕೆ ನಮಗೆ ಹೆಮ್ಮೆಯ ವಿಷಯವಾಗಿದೆ, ಇದೆ ರೀತಿಯಲ್ಲಿ ಮುಂದೆ ಹೋಗುಬೇಕು ಎಂದರು.
ಪ್ರತಿಭಾ ಕಾರಂಜಿಯಲ್ಲಿ ಭಾಷಣ ಸ್ಪರ್ಧೆ, ಪ್ರಭಂದ ಸ್ಪರ್ಧೆ, ಜನಪದ ನೃತ್ಯ, ಮೀಮಿಕ್ರಿ, ಕವ್ವಾಲಿ ನೃತ್ಯಗಳಿಗೆ ಹೆಜ್ಜೆ ಹಾಕಲು ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಶಿಕ್ಷಕರೊಂದಿಗೆ ಆಗಮಿಸಿ ಭಾಗವಹಿಸಿದರು.ಸೆಂಟ್ ಮೇರಿ ಸ್ಕೂಲ್ ಸಂಸ್ಥೆಯ ಗುರುಗಳಾದ ಫಾದರ್ ಪ್ರವೀಣ ಜೋಸೆಫ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶ ಸೂರ್ಯಕಾಂತ ಮದಾನೆ, ನೋಡಲ್ ಅಧಿಕಾರಿ ಕರಿಬಸಯ್ಯ ಮಠ ಸೇರಿದಂತೆ ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಬಸವರಾಜ ಬಳೊಂಡಗಿ, ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.