ಸಾರಾಂಶ
ಮಣ್ಣಿನ ಸೇವೆಗಾಗಿ ಶ್ರಮಿಸುವುದಾಗಿ ಭರವಸೆ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯ ರೈತ ಕಲ್ಯಾಣ ಸಂಘದ ಮಣ್ಣಿನ ರಕ್ಷಣೆ ಹಾಗೂ ಮನುಕುಲದ ಆರೋಗ್ಯದ ಸಂರಕ್ಷಣೆಯ ಸಂಕಲ್ಪ ಮತ್ತು ವಿಚಾರಧಾರೆಗಳನ್ನು ಒಪ್ಪಿಕೊಂಡು ರಾಜಧಾನಿ ಬೆಂಗಳೂರಿನ ಮಹಿಳಾ ಉದ್ಯಮಿಗಳು ಸಂಘಕ್ಕೆ ಸೇರ್ಪಡೆಯಾದರು.ಶುಕ್ರವಾರ ಸಂಘದ ಪ್ರಧಾನ ಕಚೇರಿಗೆ ಆಗಮಿಸಿದ ಬೆಂಗಳೂರು ಮೂಲದ ಪಲ್ಲವಿ ಉಲ್ಲಾಸ್ ಹಾಗೂ ವನಿತಾ ಅವರು ಸಂಸ್ಥಾಪಕ ರಾಜ್ಯಾಧ್ಯಕ್ಷ ಸಿ. ಚಂದನ್ ಗೌಡರ ಸಮ್ಮುಖದಲ್ಲಿ ಸಂಘಕ್ಕೆ ಸೇರ್ಪಡೆಗೊಂಡು ಮಣ್ಣಿನ ಸೇವೆಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಪಲ್ಲವಿ ಉಲ್ಲಾಸ್ ಅವರನ್ನು ರೈತ ಕಲ್ಯಾಣದ ಬೆಂಗಳೂರು ನಗರ ಮಹಿಳಾ ಅಧ್ಯಕ್ಷರಾಗಿ ಮತ್ತು ವನಿತಾ ಅವರನ್ನು ಗ್ರಾಮಾಂತರ ಮಹಿಳಾ ಅಧ್ಯಕ್ಷರಾಗಿ ನೇಮಿಸಲಾಯಿತು.