ಸಾರಾಂಶ
ಗುರುಮಠಕಲ್ ತಾಲೂಕಿನ ಬೋರಬಂಡಾ ಗ್ರಾಮದಲ್ಲಿ ನಡೆದ ಮತಕ್ಷೇತ್ರದ ಸಿಂದಗಿ-ಕೊಡಂಗಲ್ ರಸ್ತೆ ಕಾಮಗಾರಿಗೆ ಅಡಿಗಲ್ಲು ಸಮಾರಂಭಕ್ಕೆ ಶಾಸಕ ಶರಣಗೌಡ ಕಂದಕೂರು ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಮತಕ್ಷೇತ್ರದಲ್ಲಿ ಉತ್ತಮ ಹಾಗೂ ಗುಣಮಟ್ಟ ರಸ್ತೆ ನಿರ್ಮಾಣ, ದುರಸ್ತಿ ಮತ್ತು ಸುಧಾರಣೆಗಾಗಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲು ಮುಂದಾಗಿದ್ದು, ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆ ಅನುಷ್ಠಾನ ತರುತ್ತಿರುವುದು ನನಗೆ ತೃಪ್ತಿಯಾಗುತ್ತಿದೆ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು.ತಾಲೂಕಿನ ಬೋರಬಂಡಾ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆದ 2023-24ನೇ ಸಾಲಿನ ಲೆಕ್ಕ ಶೀರ್ಷಿಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮೈಕ್ರೋ ಯೋಜನೆ ಅಡಿಯಲ್ಲಿ ಸಿಂದಗಿ-ಕೊಡಂಗಲ್ ರಸ್ತೆ 130 ಕಿ.ಮೀ., 132 ಕಿ.ಮೀ. ಮತ್ತು 144 ರಿಂದ 155.60 ಕಿ.ಮೀ. ವರೆಗೆ ಡಾಂಬರೀಕರಣ ಕಾಮಗಾರಿಗೆ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಮತಕ್ಷೇತ್ರದ ಬೊರಬಂಡಾ ಗ್ರಾಮದಿಂದ ಗುರುಮಠಕಲ್ ಪಟ್ಟಣದ ಯಾನಗುಂದಿ ಮಾರ್ಗದ ಪೆಟ್ರೋಲ್ ಬಂಕ್ ವರೆಗೆ ಅಂದಾಜು ವೆಚ್ಚ ₹10 ಕೋಟಿ, ಮುಷ್ಟೂರ ಗೇಟ್ ದಿಂದ ಕೌಳೂರ-ಲಿಂಗೇರಿ-ಹೆಗ್ಗಣಗೇರಾವರೆಗೆ ಅಂದಾಜು ವೆಚ್ಚ ₹5 ಕೋಟಿ, ಹಿರೆನೂರ-ಚಿಗಾನೂರ-ಬೆಳಗುಂದಿವರೆಗೆ ಅಂದಾಜು ವೆಚ್ಚ ₹5 ಕೋಟಿ, ಚಿಂತನಹಳ್ಳಿ-ಚಿಂತನಹಳ್ಳಿ ತಾಂಡದ ಮಧ್ಯ ಬ್ರಿಡ್ಜ್ ನಿರ್ಮಾಣ ಅಂದಾಜು ವೆಚ್ಚ ₹3.50 ಕೋಟಿ, ಜಿ.ಬಿ. ತಾಂಡದಿಂದ-ಆಶಾಪೂರ ತಾಂಡ, ಆರ್.ಹೊಸಳ್ಳಿ ರಸ್ತೆವರೆಗೆ ₹3.50 ಕೋಟಿ, ಇಡ್ಲೂರ್ ದಿಂದ ಶಂಕರ ಲಿಂಗೇಶ್ವರ ದೇವಸ್ಥಾನದವರೆಗೆ ₹2 ಕೋಟಿ, ಅಜಲಾಪೂರದಿಂದ ತೆಲಂಗಾಣದ ನೆರಡಗಂ ಬಾರ್ಡರ್ ವರೆಗೆ ₹2 ಕೋಟಿ, ಅಲಿಪೂರ ಮುಖ್ಯ ರಸ್ತೆಯಿಂದ ಹೊರುಂಬಾವರೆಗೆ ₹2 ಕೋಟಿ, ಕೂಡ್ಲೂರ್ ದಿಂದ ಗೌಡಗೇರಾವರೆಗೆ ₹1.60 ಕೋಟಿ, ಕರಣಗಿ-ನಂದೇಪಲ್ಲಿವರೆಗೆ ರಸ್ತೆ ಸುಧಾರಣೆ ₹1 ಕೋಟಿ, ಕರಿಬೆಟ್ಟದಿಂದ ತೆಲಂಗಾಣ ಬಾರ್ಡರ್ ರವರೆಗೆ ₹10 ಕೋಟಿ, ಚಾಮನಹಳ್ಳಿ ಕ್ರಾಸ್ ದಿಂದ ಬಂದಳ್ಳಿ-ಯಡಳ್ಳಿ-ಹತ್ತಿಕುಣಿ -ಸೌದಾಗರ ತಾಂಡದ ಕ್ರಾಸ್‌ವರೆಗೆ ₹6 ಕೋಟಿ ಒಟ್ಟು ₹51.60 ಕೋಟಿ ವರೆಗೆ ಚಾಲನೆ ನೀಡಿ ಮತಕ್ಷೇತ್ರದ ರಸ್ತೆ ಸುಧಾರಣೆಗೆ ಆದ್ಯತೆ ನೀಡುತ್ತಿದ್ದೇನೆ ಎಂದರು.ಪಿಡಬ್ಲ್ಯಡಿ ಎಇಇ ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಹಣಮಂತು, ಪಿಡಿಒ ಮಲ್ಲರೆಡ್ಡಿ, ಜೆಡಿಎಸ್ ಯಾದಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಅವುಂಟಿ, ಬ್ಲಾಕ್ ಜೆಡಿಎಸ್ ಅಧ್ಯಕ್ಷ ಪ್ರಕಾಶ ನೀರೇಟಿ, ಹಿರಿಯ ಮುಖಂಡ ಜಿ. ತಮ್ಮಣ್ಣ, ಪಾಪಣ್ಣ ಮನ್ನೆ, ಕಿಷ್ಟರೆಡ್ಡಿ ಪೊಲೀಸ್ ಪಾಟೀಲ್, ಗುರು ತಲಾರಿ, ಈಶ್ವರ ರಾಠೋಡ್, ಮಲ್ಲಿಕಾರ್ಜುನ ಅರುಣಿ, ಸಂಗಮೇಶ ಪೂಜಾರಿ, ದೀಪಾಕ ಬೆಳ್ಳಿ, ಅನಂತಯ್ಯ ಕಲಾಲ್, ಅಶೋಕ ಕಲಾಲ, ಕಾಶಿನಾಥ, ರಮೇಶ ಪಾವರ್, ಬಾಲಪ್ಪ ದಾಸರಿ, ಆಶನ್ನ ಬುದ್ದ ಇತರರಿದ್ದರು.
ಈಗಾಗಲೇ ಎಲ್ಲಾ ತಾಂಡಗಳ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಬೋರಬಂಡಾ ತಾಂಡಕ್ಕು 10 ಲಕ್ಷ ರು.ಗಳ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಹಾಗೂ 12 ಲಕ್ಷ ರು.ಗಳ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು.- ಶರಣಗೌಡ ಕಂದಕೂರು, ಶಾಸಕರು ಗುರುಮಠಕಲ್.