ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಮತಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳ ಮುಖ್ಯ ರಸ್ತೆ ಹಾಗೂ ಬಡಾವಣೆ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ, ಅಗತ್ಯ ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ಸೋಮವಾರ ಹಿಟ್ನಳ್ಳಿ ತಾಂಡಾ ರಸ್ತೆ ಹಾಗೂ 2024-25ನೇ ಸಾಲಿನ ಪ್ರಗತಿ ಕಾಲೋನಿ ಯೋಜನೆಯಡಿಯಲ್ಲಿ ಸಿ.ಸಿ ರಸ್ತೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮತಕ್ಷೇತ್ರದ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ರಸ್ತೆ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಅಭಿವೃದ್ಧಿಯಾಗಿಲ್ಲದ ಮತ್ತು ವಾಹನ, ಸಾರ್ವಜನಿಕ ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಗಳ ಮಾಹಿತಿ ಪಡೆದುಕೊಂಡಿದ್ದು, ಶೀಘ್ರದಲ್ಲೇ ಹಂತ ಹಂತವಾಗಿ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುವಂತೆ ಸರ್ಕಾರಕ್ಕೆ ಒತ್ತಡ ತಂದಿದ್ದೇನೆ. ರಸ್ತೆಗಳು ಬಹುದಿನಗಳ ಕಾಲ ಉಳಿಯಬೇಕೆಂಬ ದಷ್ಟಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದು, ವಿವಿಧ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸುತ್ತ ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಹಂತ ಹಂತವಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಮೂಲಕ ಅಭಿವೃದ್ದಿಗೆ ಮತ್ತಷ್ಟು ಶ್ರಮಿಸಲಾಗುವುದು. ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು. ಹಾಗೇ ಗ್ರಾಮಸ್ಥರೂ ಕಾಮಗಾರಿಗಳು ಕಳಪೆಯಾಗದಂತೆ ಗಮನಹರಿಸಬೇಕೆಂದು ಹೇಳಿದರು.ಜೆಡಿಎಸ್ ತಾಲೂಕ ಘಟಕದ ಅಧ್ಯಕ್ಷರಾದ ಸಾಯಿಬಣ್ಣ ಬಾಗೇವಾಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸಿಗುತ್ತಿಲ್ಲ. ಆದರೆ, ಶಾಸಕರಾದ ರಾಜುಗೌಡ ಪಾಟೀಲ ಅವರು ತಮ್ಮ ಚಾಣಾಕ್ಷತೆಯಿಂದ ಅನುದಾನ ಮಂಜೂರು ಮಾಡಿಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಸಹಕಾರ ನೀಡೋಣ ಎಂದು ಹೇಳಿದರು.
ಪಿಡಬ್ಲ್ಯೂಡಿ ಎಇಇ ಅರುಣಕುಮಾರ ವಡಿಗೇರಿ ಹಾಗೂ ಲ್ಯಾಂಡ ಆರ್ಮಿ ಎಇಇ ರಾಜಶೇಖರ ಮಾತನಾಡಿ, ಕಾಮಗಾರಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರಿಗೆ ತಿಳಿಸಿದರು.ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಸಿದ್ಧಗೊಂಡಪ್ಪಗೌಡ ಪಾಟೀಲ, ಮಾಜಿ ಅಧ್ಯಕ್ಷರಾದ ಗುಂಡಪ್ಪಗೌಡ ಬಿರಾದಾರ, ರಾಜು ಚಂಡಕಿ, ಸದಸ್ಯರಾದ ಶಶಿಕಾಂತ ಚಂಡಕಿ, ಕುಮಾರಗೌಡ ಬಿರಾದಾರ, ಹಣಮಂತಗೌಡ ಬಿರಾದಾರ, ಸಂಜೀವ ಚಂಡಕಿ, ಸಲೀಂ ಕೆಂಗನಾಳ, ಜೇಟ್ಟೆಪ್ಪ ಹಿರೇರೋಗಿ, ಮುದುಕಪ್ಪ ಡಬ್ಬಿಗಾರ, ದಾದಾಗೌಡ ಬಿರಾದಾರ(ಗಂಗನಳ್ಳಿ), ಈರಣ್ಣ ಶಾಸ್ತ್ರಿ ಬಿರಾದಾರ, ರಮೇಶ ಈಶ್ವರಪ್ಪಗೋಳ, ಮಾಂತಯ್ಯ ಹಿರೇಮಠ, ದೇವಾನಂದ ಕಣಿ, ಗಂಗಾಧರ ಕಲ್ಯಾಣಿ, ಕೇಶುರಾಯ ಡಬ್ಬಿಗಾರ, ಸಂಗು ಹೊನ್ನಳ್ಳಿ, ಸಂತೋಷ್ ಸಿಂದಗಿ, ಎಸ್.ಎಂ.ಆನಂದಿ, ದೇವುಗೌಡ ಬಿರಾದಾರ, ಶಿವಪ್ಪ ಸಾವಕಾರ ಬಾಗಲಕೋಟ, ರಫೀಕ್ ಮಡ್ನಳ್ಳಿ, ರವಿ ಚವ್ಹಾಣ, ಗುತ್ತಿಗೆದಾರ ಪ್ರಕಾಶ ಅಂಗಡಿ ಸೇರಿದಂತೆ ಗ್ರಾಮದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.