ಮಹಿಳೆ ಸ್ವಾವಲಂಬಿಯಾದಾಗ ದೌರ್ಜನ್ಯದಿಂದ ರಕ್ಷಣೆ

| Published : Jun 23 2025, 11:47 PM IST

ಸಾರಾಂಶ

ಮಹಿಳೆ ಸ್ವಾವಲಂಬಿಯಾದಾಗ ಕೌಟುಂಬಿಕ ದೌರ್ಜನ್ಯದಿಂದಲೂ ರಕ್ಷಣೆ ಪಡೆದುಕೊಳ್ಳುತ್ತಾಳೆ

ಭಟ್ಕಳ: ಮಹಿಳೆ ಸ್ವಾವಲಂಬಿಯಾದಾಗ ಕೌಟುಂಬಿಕ ದೌರ್ಜನ್ಯದಿಂದಲೂ ರಕ್ಷಣೆ ಪಡೆದುಕೊಳ್ಳುತ್ತಾಳೆ ಎಂದು ಭಟ್ಕಳ ಎಜ್ಯುಕೇಶನ್ ಟ್ರಸಿನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ ಹೇಳಿದರು.

ಅವರು ಮಣಿಪಾಲ ಟೆಕ್ನೊಲೋಜಿಸ್ ಮತ್ತು ಭಾರತೀಯ ವಿಕಾಸ ಟ್ರಸ್ಟ್‌ ಮಣಿಪಾಲ, ಭಟ್ಕಳ ಎಜ್ಯುಕೇಷನ್‌ ಟ್ರಸ್ಟಿನ ರೋಟರಿ ವೋಕೇಶನಲ್ ಟ್ರೇನಿಂಗ್‌ ಸೆಂಟರ್ ಸಹಯೋಗದಲ್ಲಿ ನಡೆದ ಏಳು ದಿನಗಳ ಕ್ರೋಸ್ ಸೀರೆ ಕುಚ್ಚು ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾರತೀಯ ವಿಕಾಸ ಟ್ರಸ್ಟ್‌ ಮಣಿಪಾಲದ ರಾಘವೇಂದ್ರ ಆಚಾರ್ಯ, ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ವೀರೇಂದ್ರ ವಿ. ಶ್ಯಾನಭಾಗ, ನ್ಯೂ ಇಂಗ್ಲೀಷ್ ಶಾಲೆಯ ಮುಖ್ಯಾಧ್ಯಾಪಕ ಗಣಪತಿ ಶಿರೂರು, ಟೇಲರಿಂಗ್ ತರಬೇತುದಾರೆ ರೇಷ್ಮಾ, ಸೀರೆ ಕುಚ್ಚು ತರಬೇತಿದಾರೆ ನಿಶ್ಮಿತಾ ತೆಕ್ಕಟ್ಟೆ ಉಪಸ್ಥಿತರಿದ್ದರು.

ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಡಾ.ಸುರೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿಗಳಾದ ನಯನಾ, ಸವಿತಾ, ತುಳಸಿ, ಮಂಗಲಾ, ನಾಗವೇಣಿ ಮತ್ತು ರೇಖಾ ತರಬೇತಿಯ ಅನಿಸಿಕೆಗಳನ್ನು ಹಂಚಿಕೊಂಡರು. ಶಿಬಿರಾರ್ಥಿಗಳಾದ ಸುವರ್ಣಾ ಪ್ರಾರ್ಥಿಸಿದರು, ನಾಗವೇಣಿ ಸ್ವಾಗತಿಸಿದರು. ಮಮತಾ ವಂದಿಸಿದರು ಮತ್ತು ಕೀರ್ತಿ ನಿರೂಪಿಸಿದರು. ಶಿಬಿರದಲ್ಲಿ ಪಾಲ್ಗೊಂಡ ೪೦ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಭಟ್ಕಳದಲ್ಲಿ 7 ದಿನಗಳ ಸೀರೆ ಕುಚ್ಚು ತರಬೇತಿ ಸಂಪನ್ನಗೊಂಡಿರುವುದು.