ಬೆಳ್ತಂಗಡಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯ ಮಂತ್ರಿ ಮಾತ್ರ ಬದಲಾಗಿದ್ದಾರೆಯೇ ಹೊರತು ಅವರ ದೋಚುವ ಸಿದ್ದಾಂತ ಬದಲಾಗಿಲ್ಲ. ಅವರಿಗೆ ಮುಂದೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಗೊತ್ತಾಗಿದ್ದು ಅದಕ್ಕಾಗಿ ಹಣ ದೋಚಲು ಪಳಗಿದ ಸಚಿವರನ್ನು ಖಾತೆ ಕೊಟ್ಟು ಮಂತ್ರಿ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಲೇವಡಿ ಮಾಡಿದ್ದಾರೆ.

ಅವರು ಮಂಗಳವಾರ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ವಠಾರದಲ್ಲಿ ನಡೆದ ವಾಲ್ಮೀಕಿ ನಿಗಮದ ಲೂಟಿಯ ರೂವಾರಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಭ್ರಷ್ಟ ಹಾಗೂ ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಬೆಳ್ತಂಗಡಿ ಬಿಜೆಪಿ ಮಂಡಲದಿಂದ ನಡೆದ ಪ್ರತಿಭಟನಾ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.. ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿ ಜಯಾನಂದ, ಪ್ರಶಾಂತ್ ಪಾರೆಂಕಿ, ಬಿಜೆಪಿ ನಾಯಕರಾದ ಜಯಂತ್ ಕೋಟ್ಯಾನ್, ಜಯಾನಂದ ಕಲ್ಲಾಪು, ಸುಂದರ್ ಹೆಗ್ಡೆ ಬಿ., ಜಯಂತ್ ಗೌಡ, ಕೊರಗಪ್ಪ ಗೌಡ, ವಿದ್ಯಾ ಶ್ರೀನಿವಾಸ್, ಶರತ್, ಗಣೇಶ್ ಲಾಯಿಲ, ಪ್ರಮೋದ್ ದಿಡುಪೆ, ಚೆನ್ನಕೇಶವ ಮುಂಡಾಜೆ, ಸೀತಾರಾಮ್ ಬೆಳಾಲು, ಸೀತಾರಾಮ್ ಬೈರ, ಲಕ್ಷ್ಮಣ, ಆಶಾ ಸಲ್ದಾನ, ವಿಜಯ್ ಗೌಡ, ಗಣೇಶ್ ನಾವೂರು, ಶಶಿಧರ್ ಕಲ್ಮಂಜ, ಉಮೇಶ್ ಕುಲಾಲ್, ಶಶಿರಾಜ್ ಶೆಟ್ಟಿ, ಶಶಿಧರ್ ಶೆಟ್ಟಿ, ಬಾಬು ಗೌಡ ನೆರಿಯ, ಸಂತೋಷ್ ಜೈನ್ ಪಡಂಗಡಿ, ರಾಜೇಶ್ ಪ್ರಭು, ವಸಂತಿ, ರಂಜಿನಿ ಮುಂಡಾಜೆ, ಪ್ರದೀಪ್ ಕುವೆಟ್ಟು, ಚಂದ್ರಕಾಂತ್ ನಿಡ್ಡಾಜೆ, ಸಹಿತ ಮೊದಲಾದವರು ಭಾಗವಹಿಸಿದ್ದರು. ವಿಜಯ ಗೌಡ ಸ್ವಾಗತಿಸಿ, ಪದ್ಮ ಕುಲಾಲ್ ನಿರೂಪಿಸಿದರು. ತಾಲೂಕಿನ ಎಲ್ಲ ಶಕ್ತಿ ಕೇಂದ್ರದಿಂದ ಬೆಳಗ್ಗಿನಿಂದ ಸಂಜೆಯವರೆಗೆ ಪ್ರತಿಭಟನೆ ನಡೆಯಿತು. ಸುಮಾರು 2 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದರು.