ಸಾರಾಂಶ
- ಸರ್ಕಾರ ವಕ್ಪ್ ಕಾಯ್ದೆ ರದ್ದುಪಡಿಸಬೇಕು: ಮಾಡಾಳು ಮಲ್ಲಿಕಾರ್ಜುನ ಒತ್ತಾಯ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಸೇರಿಕೊಂಡು ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ರೈತರ ದಾಖಲೆಗಳಲ್ಲಿ ವಕ್ಫ್ ಭೂಮಿ ಎಂದು ನಮೂದಿಸಿ, ಗೊಂದಲ ಸೃಷ್ಟಿಸಲಾಗುತ್ತಿದೆ. ಈ ಹಿನ್ನೆಲೆ ವಕ್ಪ್ ಎಂಬ ಕಾಯ್ದೆಯನ್ನು ಸರ್ಕಾರ ರದ್ದುಪಡಿಸಬೇಕು ಎಂದು ದಾವಣರೆಗೆ ವಿ.ವಿ.ಯ ಮಾಜಿ ಸಿಂಡಿಕೇಟ್ ಸದಸ್ಯ ಹಾಗೂ ಚನ್ನಗಿರಿ ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಹೇಳಿದರು.ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ಸೋಮಲಾಪುರದಲ್ಲಿ 8.34 ಎಕರೆ ಜಮೀನು ಮತ್ತು ಚನ್ನಗಿರಿ ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಪಕ್ಕದಲ್ಲಿರುವ ಜಾಗವನ್ನು ಸಹ ಸುಳ್ಳು ದಾಖಲೆಗಳ ಸೃಷ್ಟಿಸಿ, ವಕ್ಫ್‌ಗೆ ಸೇರಿಸಿದ್ದಾರೆ. ಈ ಎರಡು ಭೂ ಪ್ರದೇಶಗಳು ಸಾರ್ವಜನಿಕವಾದ ಆಸ್ತಿಯಾಗಿದ್ದು, ಯಾವುದೇ ಕಾರಣಕ್ಕೂ ವಕ್ಫ್‌ಗೆ ವಹಿಸದೇ ರದ್ದುಪಡಿಸಬೇಕು. ಈ ಹುನ್ನಾರಗಳನ್ನು ಕೈ ಬಿಡಲು ಆಗ್ರಹಿಸಿ, ನ.4ರಂದು ಪಟ್ಟಣದಲ್ಲಿ ತಾಲೂಕಿನ ಎಲ್ಲ ದೇಶಭಕ್ತರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದರು.
ಮೆರವಣಿಗೆಯು ಪಟ್ಟಣದ ಮಹಾತ್ಮ ಗಾಂಧಿ ವೃತ್ತದಿಂದ ಪ್ರಾರಂಭಗೊಂಡು ಬಸ್ ನಿಲ್ದಾಣ, ಹಳೇ ತಾಲೂಕು ಕಚೇರಿ ರಸ್ತೆ ಮೂಲಕ ತಾಲೂಕು ಕಚೇರಿಗೆ ತಲುಪಲಿದೆ. ಬಳಿಕ ಸೂಕ್ತ ಕ್ರಮಕ್ಕೆ ಆಗ್ರಹಿಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು. ವಕ್ಫ್ ಕಾಯ್ದೆ ರದ್ದುಪಡಿಸುವಂತೆ ಒತ್ತಾಯಿಸಿ ತಾಲೂಕಿನ ದೇಶಭಕ್ತರು ಪ್ರಧಾನಮಂತ್ರಿ ಅವರಿಗೆ ಪತ್ರ ಬರೆಯಲಿದ್ದಾರೆ ಎಂದರು.ತಾಲೂಕು ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ತಿಪ್ಪಗೊಂಡನಹಳ್ಳಿ ಮಲ್ಲಿಕಾರ್ಜುನ್, ಪುರಸಭೆಯ ಮಾಜಿ ಅಧ್ಯಕ್ಷ ಬಿ.ಎಂ. ಕುಬೇಂದ್ರೋಜಿ ರಾವ್, ಸದಸ್ಯ ಪಟ್ಲಿ ನಾಗರಾಜ್, ಮಚನಾಯ್ಕನಹಳ್ಳಿ ಜಯಣ್ಣ ಉಪಸ್ಥಿತರಿದ್ದರು.
- - -ಟಾಪ್ ಕೋಟ್
ಸೋಮಲಾಪುರದಲ್ಲಿ 8.34 ಎಕರೆ ಜಮೀನು ಮತ್ತು ಚನ್ನಗಿರಿ ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಪಕ್ಕದಲ್ಲಿರುವ ಜಾಗವನ್ನು ಸಹ ಸುಳ್ಳು ದಾಖಲೆಗಳ ಸೃಷ್ಟಿಸಿ, ವಕ್ಫ್‌ಗೆ ಸೇರಿಸಿದ್ದಾರೆ. ಈ ಎರಡು ಭೂ ಪ್ರದೇಶಗಳು ಸಾರ್ವಜನಿಕವಾದ ಆಸ್ತಿಯಾಗಿದ್ದು, ಯಾವುದೇ ಕಾರಣಕ್ಕೂ ವಕ್ಫ್‌ಗೆ ವಹಿಸದೇ ರದ್ದುಪಡಿಸಬೇಕು- ಮಾಡಾಳು ಮಲ್ಲಿಕಾರ್ಜುನ, ಬಿಜೆಪಿ ಮುಖಡ, ಚನ್ನಗಿರಿ
- - - -3ಕೆಸಿಎನ್‌ಜಿ1: ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿದರು.