ಸಾರಾಂಶ
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟ ಬುಧವಾರ ೨೮ನೇ ದಿನಕ್ಕೆ ಕಾಲಿರಿಸಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟ ಬುಧವಾರ ೨೮ನೇ ದಿನಕ್ಕೆ ಕಾಲಿರಿಸಿದೆ.ಇಷ್ಟು ದಿನ ಮುಷ್ಕರ ನಡೆಸಿದರೂ ಸ್ಪಂದಿಸದ ರಾಜ್ಯ ಸರಕಾರದ ನೀತಿಯನ್ನು ಖಂಡಿಸಿ ಉಪನ್ಯಾಸಕರು ಸಾರ್ವಜನಿಕರ ಬೂಟ್ ಪಾಲಿಶ್ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಉಪನ್ಯಾಸಕರಾದ ಶ್ರೀಧರ ಇರಸೂರ, ಶ್ರೀಶೈಲ ಹಡಪದ ಹಾಗೂ ಆರ್.ಬಿ. ಮುದ್ದೇಬಿಹಾಳ ಜನರ ಬೂಟ್ ಪಾಲಿಶ್ ಮಾಡಿದರು. ಮುಷ್ಕರ ನಿರತ ಸ್ಥಳಕ್ಕೆ ಕಾಂಗ್ರೆಸ್ ಪಕ್ಷದ ಧುರೀಣ ಸಂಗಮೇಶ ಬಬಲೇಶ್ವರ ಭೇಟಿ ನೀಡಿ ಮಾತನಾಡಿ, ಸರಕಾರದ ಗಮನಕ್ಕೆ ತಂದು ನಿಮ್ಮ ಹೋರಾಟಕ್ಕೆ ನ್ಯಾಯಯುತ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಮುಷ್ಕರದಲ್ಲಿ ಪೂರ್ವಿ ಲೋಣಿ, ಶೋಭ ತಳಜಣ್ಣವರ, ರೂಪಾ ಹೂಗಾರ, ಸಾನಿಯಾ ಜಿಡ್ಡಿ, ಅಶ್ವಿನಿ ಅಂಗಡಿ, ರಾಜೇಶ್ವರಿ ಅರವತ್ತು. ಶ್ರೇತಾ ಗಜಕೋಶ, ಮಂಜುಳಾ ಭಾವಿಕಟ್ಟಿ, ಸುರೇಖಾ ಹದನೂರ, ಡಾ. ರೇಣುಕಾ ಹೆಬ್ಬಾಳ, ಸುರೇಖಾ ಪಾಟೀಲ, ಭಾರತಿ ಇನಾಮದಾರ, ಡಾ. ವೀಣಾ ಕಡಕೋಳ, ಡಾ. ಭಾರತಿ ಹಿರೇಮಠ, ಲೀಲಾ ವಿ.ಟಿ. ಗೀತಾ ಬೆಳ್ಳುಂಡಿಗ, ಡಾ. ರಾಜೇಶ್ವರಿ ಮುಳಗುಂದ, ದೀಪಾ ಆರ್. ಮಹಾಲಲಕ್ಷ್ಮಿ ಪಾಟೀಲ ಐಶ್ವರ್ಯ ಪಾನಶೆಟ್ಟಿ, ವಿಜಯಲಕ್ಷ್ಮಿ ಪಾಟೀಲ, ಸರಿತಾ ಹಿಪ್ಪರಗಿ, ಸುಮಂಗಲಾ ಪೂಜಾರಿ, ಡಾ. ಆನಂದ ಕುಲಕರ್ಣಿ, ಸುರೇಶ ಡಬ್ಬಿ, ರಾಜು ಚವ್ಹಾಣ, ಡಾ. ಎಸ್.ಐ. ಯಂಭತ್ನಾಳ, ಎನ್.ಸಿ. ಮುದ್ದೇಬಿಹಾಳ, ರಮೇಶ ತೇಲಿ ಮುಂತಾದವರು ಉಪಸ್ಥಿತರಿದ್ದರು.