ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಅವ್ಯವಸ್ಥೆ ಖಂಡಿಸಿ ಹಾಗೂ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳು ಹೋರಾಟ ಬೆಂಬಲಿಸಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ತಾಲೂಕು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ಪ್ರಕಾಶ ಗುಡಿಮನಿ, ಮುನೀರ್ ಅಹ್ಮದ್ ಮಳಖೇಡ, ರಾಜು ಮೆಟಗಾರ, ರಹೀಮಾನ ಕನಕಲ್, ಶಂಕರಲಿಂಗ ಜಮಾದಾರ, ಮಲಕು ಬಾಗೇವಾಡಿ ಸೇರಿ ಅನೇಕರ ಮುಖಂಡರು ಮಾತನಾಡಿ, ದೇಶದ ಯುವಜನರ ಭವಿಷ್ಯಕ್ಕೆ ಧಕ್ಕೆ ತರುತ್ತಿರುವ ದೇಶದ ಪರೀಕ್ಷಾ ಅವ್ಯವಸ್ಥೆ ಸರಿಪಡಿಸಬೇಕು. ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟ, ಅವಾಂತರಕ್ಕೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕು, ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ಘಟನೆಯಾಗಿದೆ ಎಂದರು.
ಮುಖಂಡರಾದ ವಿನಾಯಕ ಗುಣಸಾಗರ, ಅಶೋಕ ಚಲವಾದಿ, ರಾಜಕುಮಾರ ಸಿಂದಗೇರಿ, ಶರಣು ಸಿಂಧೆ, ಪರಶುರಾಮ ದಿಂಡವಾರ, ಲಕ್ಕಪ್ಪ ಬಡಿಗೇರ, ಬಸವರಾಜ ಇಂಗಳಗಿ, ನಾಜೀರಸಾಬ ಬೀಳಗಿ, ಯಮನಪ್ಪ ಭೂತಾಳಿ, ಪರಶುರಾಮ ಬಡಿಗೇರ, ಮಹಾಂತೇಶ ಚಲವಾದಿ, ಅಶೋಕ ಗುಡಿಸಲಮನಿ ಸೇರಿ ಹಲವಾರು ಜನ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.