ಕನ್ನಡಪ್ರಭ ವಾರ್ತೆ ಹುನಗುಂದ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕೆಂದು ಅಗ್ರಹಿಸಿ ಎನ್ಎಸ್.ಯುಐ ಘಟಕದ ವಿದ್ಯಾರ್ಥಿಗಳು ವಿ.ಮ. ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಪ್ರದೀಪಕುಮಾರ ಹಿರೇಮಠಗೆ ಶುಕ್ರವಾರ ಮನವಿ ಸಲ್ಲಿಸಿದರು.

ಎನ್.ಎಸ್.ಯು.ಐ ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಮೀರ ದೇಶಪಾಂಡೆ ಮಾತನಾಡಿ, ದೆಹಲಿಯ ಜಂತರ್ ಮಂತರ್ ಮೈದಾನಲ್ಲಿ ನಡೆಯುತ್ತಿರುವ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಮೇಲೆ ನಡೆದ ಪೋಲಿಸ್ ಹಲ್ಲೆಯನ್ನು ಎನ್.ಎಸ್.ಯು.ಐ ಘಟಕ ತೀವ್ರವಾಗಿ ಖಂಡಿಸುತ್ತಿದ್ದು, ನೀಟ್ ಪರೀಕ್ಷೆಯ 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಮೋದಿ ಇದುವರೆಗೆ ಸಾಂತ್ವನ ಹೇಳಿಲ್ಲ, ಪ್ರತಿಭಟನೆಯಲ್ಲಿ ಕುಳಿತ ವಿದ್ಯಾರ್ಥಿಗಳಿಗೆ ಸುತ್ತಮುತ್ತಲಿನ ಊಟ, ನೀರಿನ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಆರೋಪಿಸಿದರು. ದೇಶದ ಶೈಕ್ಷಣಿಕ ಇತಿಹಾಸಲ್ಲಿಯೇ ಕಪ್ಪು ಚುಕ್ಕೆಯಾಗಿರುವ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೆಂಗಳೂರ, ದೆಹಲಿಗೆ ತೆರಳಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ವಿದ್ಯಾರ್ಥಿನಿ ಭಾಗ್ಯಶ್ರೀ ನಿಡಸನೂರ ಮಾತನಾಡಿ, ನೀಟ್ ಪರೀಕ್ಷೆ ಆಕ್ರಮ ಹಾಗೂ ಪ್ರತಿಭಟನೆಕಾರರ ಮೇಲೆ ಪೋಲಿಸ್ ದೌರ್ಜನ್ಯ ಮಾಡಿಸಿರುವುದು ಸರಿಯಲ್ಲ ಬಡವರ ಮಕ್ಕಳು ಕಷ್ಟ ಪಟ್ಟು ಓದಿ ನೀಟ್ ಪರೀಕ್ಷೆಯನ್ನು ಬರೆಯುವ ಮಂಚೆ ಸೋರಿಕೆಯ ಆಗಿದ್ದು, ಕೂಡಲೇ ವಿದ್ಯಾರ್ಥಿಗಳಿಗೆ ನ್ಯಾಯ ನೀಡಿಬೇಕು. ಇಲ್ಲದಿದ್ದರೆ, ವಿದ್ಯಾರ್ಥಿಗಳು ಯುದ್ದಕ್ಕೂ ಸಿದ್ಧ ಹೋರಾಟಕ್ಕೆ ಸಿದ್ಧ, ಮುಂದಿನ ದಿನಗಳಲ್ಲಿ ನಮಗೂ ಇದೆ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ಕಾಂಗ್ರೆಸ್ ಮುಖಂಡ ವಕೀಲರಾದ ಮಹಾಂತೇಶ ಅವಾರಿ, ವಿಜಯ ಗದ್ದನಕೇರಿ ಮಾತನಾಡಿದರು. ಶೇಖರಪ್ಪ ಬಾದವಾಡಗಿ, ಸಂಗಣ್ಣ ಗಂಜೀಹಾಳ, ಶಿವಾನಂದ ಕಂಠಿ, ಅಮರೇಶ ನಾಗೂರ, ಬಸವರಾಜ ಹೊಸಮನಿ, ಶರಣು ಬೆಲ್ಲದ, ಮುತ್ತಣ್ಣ ಗಂಜೀಹಾಳ, ಗಂಗಣ್ಣ ಇಲಕಲ್ಲ, ಸುರೇಶ ಹಳಪೇಟಿ, ಮಲ್ಲಣ ಹೂಗಾರ, ಗ್ಯಾನಪ್ಪ ತಿಮ್ಮಾಪೂರ, ವಿದ್ಯಾರ್ಥಿಗಳಾದ ವಾಹಿದ್ ಕಡಿವಾಳ, ಭರಮೇಶ ವಡ್ಡರ, ಇಸಾಕ ಮುಲ್ಲಾ ಸೇರಿ ಇತರರು ಇದ್ದರು.