ಫಾಸ್ಟ್‌ಪುಡ್‌ ತಯಾರಿಕೆ ಅಂಗಡಿ ವಿರುದ್ಧ ಸಾರ್ವಜನಿಕರ ದೂರು

| Published : Nov 30 2024, 12:49 AM IST

ಫಾಸ್ಟ್‌ಪುಡ್‌ ತಯಾರಿಕೆ ಅಂಗಡಿ ವಿರುದ್ಧ ಸಾರ್ವಜನಿಕರ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಬಿ.ಎಚ್.ಮರದ ಫಾಸ್ಟ್‌ ಪುಡ್‌ ಅಂಗಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಹಲವು ಬಾರಿ ಕರಿದ ಎಣ್ಣೆಯನ್ನು ಸುರಕ್ಷಣಾಧಿಕಾರಿ ಮಹೇಂದ್ರ ಭೇಟಿ ನೀಡಿ ಕರಿದ ಎಣ್ಣೆಯನ್ನು ಸೀಜ್‌ ಮಾಡಿದ್ದಾರೆ.

- ಆರೋಗ್ಯ ಇಲಾಖೆಯಿಂದ ಪರಿಶೀಲನೆ । ಕಡೂರು ಆರೋಗ್ಯ ಸುರಕ್ಷಣಾಧಿಕಾರಿ ಭೇಟಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಬಿ.ಎಚ್.ಮರದ ಫಾಸ್ಟ್‌ ಪುಡ್‌ ಅಂಗಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಹಲವು ಬಾರಿ ಕರಿದ ಎಣ್ಣೆಯನ್ನು ಸುರಕ್ಷಣಾಧಿಕಾರಿ ಮಹೇಂದ್ರ ಭೇಟಿ ನೀಡಿ ಕರಿದ ಎಣ್ಣೆಯನ್ನು ಸೀಜ್‌ ಮಾಡಿದ್ದಾರೆ.

ಗುರುವಾರ ಗುಡ್ಡೇಹಳ್ಳದ ಸಂದೀಪ ಎನ್ನುವರು ಬಿ.ಎಚ್.ಕೈಮರದ ಅಂಜನ್‌ ಫಾಸ್ಟ್‌ ಪುಡ್ ಅಂಗಡಿಗೆ ಬಂದು ಫಾಸ್ಟ್‌ ಪುಡ್‌ಗಳನ್ನು ಖರೀದಿ ಮಾಡುವಾಗ ಈ ಹಿಂದೆ ಕರಿದ ಎಣ್ಣೆಯಲ್ಲೇ ಮತ್ತೆ ಪುಡ್‌ ತಯಾರಿಸುತ್ತಿರುವುದನ್ನು ಗಮನಿಸಿದ್ದಾರೆ. ನಂತರ ಅವರು ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್‌ ಅವರಿಗೆ ದೂರು ನೀಡಿದ್ದಾರೆ. ಆರೋಗ್ಯಾಧಿಕಾರಿ ಸೂಚನೆಯಂತೆ ಸ್ಥಳಕ್ಕೆ ತಾಲೂಕು ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ದರ್ಶನ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕರಿದ ಎಣ್ಣೆಯಲ್ಲಿ 500 ಎಂಎಲ್‌ ನಷ್ಟು ಎಣ್ಣೆಯನ್ನು ಸಾರ್ವಜನಿಕರ ಎದುರಿನಲ್ಲಿ ಸಂಗ್ರಹಿಸಿ ಸೀಜ್‌ ಮಾಡಿದ್ದಾರೆ.

ಶುಕ್ರವಾರ ಶಾಸಕ ಟಿ.ಡಿ.ರಾಜೇಗೌಡ ಸೂಚನೆಯಂತೆ ಕಡೂರು ಆಹಾರ ಸುರಕ್ಷಣಾಧಿಕಾರಿ ಮಹೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ನಂತರ ಅಂಗಡಿ ಮಾಲೀಕರಾದ ಅಣ್ಣಯ್ಯ ಅ‍ವರನ್ನು ಕರೆಸಿ ಸ್ಥಳ ಮಹಜರು ನಡೆಸಿದರು. ಕರಿದ ಎಣ್ಣೆಯನ್ನು ಪರೀಕ್ಷೆಗಾಗಿ ಮೈಸೂರಿನ ಎಫ್‌ಎಸ್‌ಐಎಲ್‌ ಗೆ ಕಳಿಸಿದರು.

ನಂತರ ಇಲ್ಲಿನ ವಿವಿಧ ಹೋಟೆಲ್‌, ಫಾಸ್ಟ್ ಪುಡ್‌ ಅಂಗಡಿಗಳಿಗೆ ಭೇಟಿ ನೀಡಿ ಪರೀಕ್ಷೆ ನಡೆಸಿ, ಹೋಟೆಲ್‌, ಫಾಸ್ಟ್‌ ಪುಡ್‌ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಿ, ಒಂದು ಬಾರಿ ಎಣ್ಣೆಯಲ್ಲಿ ಪದಾರ್ಥಗಳನ್ನು ಕರಿದ ನಂತರ ಮತ್ತೆ ಅದನ್ನು ಬಳಸ ಬಾರದು.ಇದರಿಂದ ಮಾರಕ ರೋಗ ಬರಲಿದೆ. ಕಲರ್‌, ಟೆಸ್ಟಿಂಗ್‌ ಪುಡಿ, ಬಳಸಬಾರದು.ಇದರಿಂದ ಕ್ಯಾನ್ಸರ್‌ ರೋಗ ಬರುವ ಸಾದ್ಯತೆ ಇದೆ.ಅಡಿಗೆ ತಯಾರಿಸುವವರು ತಲೆಗಳಿಗೆ ಸರಿಯಾದ ಸೇಪ್ಟಿ ಕ್ಯಾಪ್‌ ಧರಿಸಬೇಕು. ಕೈಗಳನ್ನು ತೊಳ್ಳೆದು ಕೊಳ್ಳಬೇಕು.ಉಗುರುಗಳನ್ನು ಕತ್ತರಿಸಬೇಕು. ಆಹಾರವನ್ನು ಮುಚ್ಚಿಡಬೇಕು. ಮಾಂಸಗಳನ್ನು 12 ಗಂಟೆಗಿಂತ ಹೆಚ್ಚಾಗಿ ಬಳಸಬಾರದು. ಗ್ರಾಹಕರಿಗೆ ಶುದ್ಧವಾದ ಬಿಸಿ ನೀರು ನೀಡಬೇಕು. ಇನ್ನು ಮುಂದೆ ಪ್ರತಿ ಗುರುವಾರ ನರಸಿಂಹರಾಜಪುರಕ್ಕೆ ಭೇಟಿ ನೀಡಿ ಎಲ್ಲಾ ಹೋಟೆಲ್‌ಗಳ ಪರಿಶೀಲನೆ ನಡೆಸಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್‌, ಆರ್.ಕೇಶವಮೂರ್ತಿ,ದೂರುದಾರ ಗುಡ್ಡೇಹಳ್ಳ ಸಂದೀಪ್‌, ಅಂಗಡಿ ಮಾಲೀಕ ಅಣ್ಣಯ್ಯ ಮತ್ತಿತರರು ಇದ್ದರು.