ಸಾರಾಂಶ
ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಪ್ರತಿ ಕ್ವಿಂಟಲ್‌ಗೆ ₹5,650 ನಂತೆ ಪ್ರತಿ ಎಕರೆಗೆ 4 ಕ್ವಿಂಟಲ್ ಮತ್ತು ಗರಿಷ್ಠ ಪ್ರತಿ ರೈತರಿಂದ 20 ಕ್ವಿಂಟಲ್ ಕಡಲೆ ಉತ್ಪನ್ನ ಖರೀದಿ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಕಡಲೆಕಾಳು ಪ್ರತಿ ಕ್ವಿಂಟಲ್‌ಗೆ ₹5,650 ನಂತೆ ಪ್ರತಿ ಎಕರೆಗೆ 4 ಕ್ವಿಂಟಲ್ ಮತ್ತು ಗರಿಷ್ಠ ಪ್ರತಿ ರೈತರಿಂದ 20 ಕ್ವಿಂಟಲ್ ಕಡಲೆ ಉತ್ಪನ್ನ ಖರೀದಿಸಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕಫೋರ್ಸ್ ಸಮಿತಿ ಅಧ್ಯಕ್ಷರಾದ ಜಾನಕಿ ಕೆ.ಎಂ ಹೇಳಿದ್ದಾರೆ.ರೈತರ ನೋಂದಣಿ ಕಾರ್ಯವನ್ನು 80 ದಿನಗಳವರೆಗೆ ಮತ್ತು ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಗಿದೆ. ಖರೀದಿ ಕೇಂದ್ರಗಳಲ್ಲಿ ರೈತರ ಹೆಸರು ನೋಂದಾಯಿಸಿಕೊಳ್ಳಲು ಆಧಾರ್ ಕಾರ್ಡ್ ಪ್ರತಿ, ಎಫ್ಐಡಿ ಸಂಖ್ಯೆ ಹಾಗೂ ಪಹಣಿ ಸಲ್ಲಿಸಿ ನೋಂದಾಯಿಸಿಕೊಳ್ಳತಕ್ಕದ್ದು. ಕಡಲೆ ಉತ್ಪನ್ನ ಖರೀದಿಸುವ ಪೂರ್ವದಲ್ಲಿ ರೈತರು ನೀಡಿರುವ ವಿವರವನ್ನು ಎನ್‌ಸಿಸಿಎಫ್ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಇ-ಸಂಯುಕ್ತಿ ತಂತ್ರಾಂಶದೊಂದಿಗೆ ಭೂಮಿ ಯುಡಿಐಡಿಎಐ ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ಪರಿಶೀಲಿಸಿ ನಂತರವೆ ನೋಂದಾಯಿಸಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದು ವೇಳೆ ಬೆಳೆ ದರ್ಶಕದಲ್ಲಿ ಬೆಳೆ ಬೆಳೆಯದೆ ಇರುವುದು ಕಂಡು ಬಂದಲ್ಲಿ ಅಂತಹ ರೈತರು ಹತ್ತಿರದ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಸಂಪರ್ಕಿಸಿ ಆಕ್ಷೇಪಣೆ ಸಲ್ಲಿಸಿ ಬೆಳೆ ದರ್ಶಕದಲ್ಲಿ ಬೆಳೆ ನಮೂದಿಸಿಕೊಂಡ ನಂತರ ಖರೀದಿ ಕೇಂದ್ರದಲ್ಲಿ ನೋಂದಾಯಿಸಕೊಳ್ಳತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಖರೀದಿ ಕೇಂದ್ರಗಳ ಅಧಿಕಾರಿಗಳನ್ನು ಹಾಗೂ ಶಾಖಾ ವ್ಯವಸ್ಥಾಪಕರನ್ನು (9449864458) ಸಂಪರ್ಕಿಸುವಂತೆ ತಿಳಿಸಿದ್ದಾರೆ.ಖರೀದಿ ಕೇಂದ್ರಗಳ ವಿವರ:
ಬಾಗಲಕೋಟೆ ಬೆನಕಟ್ಟಿ: 9741066862ಹಳ್ಳೂರು: 9901325201
ಬಾದಾಮಿ: 9611358837, 9008116746ಕೆರೂರು: 9972301729
ಹುನಗುಂದ, ಇಳಕಲ್ಲ: 9480262655ನಂದವಾಡಗಿ: 9902377067
ಹಿರೇಅದಾಪೂರ: 8497876996ಬೂದಿಹಾಳ: 7019825319
ಸುಳೇಬಾವಿ: 9449762433, 9008215922ಮುಗನೂರು: 8310324070
ಕೂಡಲಸಂಗಮ: 9449357061ಮುಧೋಳ: 9242783318
ಲೋಕಾಪೂರ: 9880927310ಸರ್ವಬಂದು: 9844474344
ಜಮಖಂಡಿ: 7019445935ತೊದಲಬಾಗಿ: 9741998771
ಬೀಳಗಿ: 7019682890ಬೀಳಗಿ ಕ್ರಾಸ್: 9880376768