ನಾಳೆ, ನಾಡಿದ್ದು ಕನಗನಮರಡಿಯಲ್ಲಿ ಶ್ರೀಅಂಕನಾಥೇಶ್ವರ ದೇವಾಲಯ ಲೋಕಾರ್ಪಣೆ

| Published : Jan 31 2025, 12:45 AM IST

ನಾಳೆ, ನಾಡಿದ್ದು ಕನಗನಮರಡಿಯಲ್ಲಿ ಶ್ರೀಅಂಕನಾಥೇಶ್ವರ ದೇವಾಲಯ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಅಂಕನಾಥೇಶ್ವರ ದೇವಸ್ಥಾನವು ಬಹಳ ಪುರಾತನ, ಇತಿಹಾಸ ಹೊಂದಿದೆ. ಗ್ರಾಮದ ಎಲ್ಲಾ ಭಕ್ತಾದಿಗಳು, ಗ್ರಾಮದ ಮುಖಂಡರು ಸಹಕಾರದಿಂದ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪರಿಶ್ರಮದಿಂದ 3 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಗ್ರಾಮಸ್ಥರು ಹಾಗೂ ಭಕ್ತಾದಿಗಳಿಂದ 2 ಕೋಟಿ ಹಾಗೂ ಮಾಜಿ ಸಚಿವ ಸಿ.ಎಸ್,ಪುಟ್ಟರಾಜು 1 ಕೋಟಿ ರು. ಸಹಾಯದಿಂದ ದೇವಸ್ಥಾನ ನಿರ್ಮಾಣಗೊಂಡಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಕನಗನಮರಡಿ ಗ್ರಾಮದಲ್ಲಿ ಫೆ.1 ಮತ್ತು 2 ರಂದು ಪ್ರಸಿದ್ಧ ಶ್ರೀಅಂಕನಾಥೇಶ್ವರ ದೇವಾಲಯ ಲೋಕಾರ್ಪಣೆಯಾಗಲಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯರು ತಿಳಿಸಿದ್ದಾರೆ.

ದೇವಸ್ಥಾನವು ಬಹಳ ಪುರಾತನ, ಇತಿಹಾಸ ಹೊಂದಿದೆ. ಗ್ರಾಮದ ಎಲ್ಲಾ ಭಕ್ತಾದಿಗಳು, ಗ್ರಾಮದ ಮುಖಂಡರು ಸಹಕಾರದಿಂದ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪರಿಶ್ರಮದಿಂದ 3 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಗ್ರಾಮಸ್ಥರು ಹಾಗೂ ಭಕ್ತಾದಿಗಳಿಂದ 2 ಕೋಟಿ ಹಾಗೂ ಮಾಜಿ ಸಚಿವ ಸಿ.ಎಸ್,ಪುಟ್ಟರಾಜು 1 ಕೋಟಿ ರು. ಸಹಾಯದಿಂದ ದೇವಸ್ಥಾನ ನಿರ್ಮಾಣಗೊಂಡಿದೆ.

ಪುನರ್ ನಿರ್ಮಿತ ದೇವಸ್ಥಾನವನ್ನು ದೊಡ್ಡದಾಗಿ ಕಟ್ಟಬೇಕು ಎಂದು ಗ್ರಾಮಸ್ಥರೆಲ್ಲ ತೀರ್ಮಾನ ಮಾಡಿ 2019ರಲ್ಲಿ ದೇವಸ್ಥಾನಕ್ಕೆ ಚಾಲನೆ ನೀಡಲಾಗಿತ್ತು. ಈಗ ಫೆ.1 ಮತ್ತು 2 ರಂದು ಲೋಕಾರ್ಪಣೆಯಾಗಲಿದೆ. ಊರ ಹೊರಗಿನಿಂದ ದೇವಸ್ಥಾನದ ವರೆಗೆ ರಸ್ತೆ ಅಭಿವೃದ್ಧಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಒತ್ತು ನೀಡಿದ್ದಾರೆ.

ಜ.31ರಂದು ಹೋಮ, ಫೆ.1ರ ಬೆಳಗ್ಗೆ ದೇವತಾಕಾರ್ಯ, ಗಂಗೆಪೂಜೆ ಗೋಪೂಜೆ ಗ್ರಾಮದ ಪ್ರದಕ್ಷಿಣೆಯೊಂದಿಗೆ ಹಾಲರವಿ ಚಪ್ಪರದ ಪೂಜೆ, ಗೋಪುರಕ್ಕೆ ಕಲಶಸ್ಥಾಪನೆ ನಡೆಯಲಿದೆ. ಫೆ.2ರಂದು ಬೆಳಗ್ಗೆ ಗಣಪತಿ ಪೂಜೆ, ಕಳಸಪೂಜೆ, ದೇವರಿಗೆ ಪಂಚಾಮೃತ ಅಭಿಷೇಕ ಪುಪ್ಷ ಅಲಂಕಾರ ಮಹಾಮಂಗಳಾರತಿ ಅಶೀರ್ವಾದ ತೀರ್ಥಪ್ರಸಾದ ವಿನಿಯೋಗದ ನಂತರ ಮಧ್ಯಾಹ್ನ 12.30ಕ್ಕೆ ಅನ್ನಸಂತಪಣೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಮಹಾಸ್ವಾಮಿಗಳು, ಸುತ್ತೂರು ಮಹಾಸಂಸ್ಥಾನ ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಮಂಡ್ಯ ಸಾತನೂರು ಮಠದ ಪುರುಷೋತ್ತಮನಂದನಾಥ ಮಹಾಸ್ವಾಮಿಗಳು ವಹಿಸಲಿದ್ದಾರೆ.

ದೇವಸ್ಥಾನವನ್ನು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸುವರು. ಗರ್ಭಗುಡಿಯನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಉದ್ಘಾಟಿಸುವರು. ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭಾಗವಹಿಸಲಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು.

ಪ್ರಸ್ತಾವಿಕ ಭಾಷಣವನ್ನು ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ ಮಾಡಲಿದ್ದಾರೆ. ಚಂಡಿಕೇಶ್ವರಸ್ವಾಮಿ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಗರುಡಗಂಭದ ಉದ್ಘಾಟನೆಯನ್ನು ಶಾಸಕ ರಮೇಶ ಬಂಡಿಸಿದೇಗೌಡ ನೆರವೇರಿಸಲಿದ್ದಾರೆ.

ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರು, ವಿವಿಧ ಪಕ್ಷದ ಮುಖಂಡರು, ಸಂಘಸಂಸ್ಥೆ ಅಧ್ಯಕ್ಷರುಗಳು, ಅಕ್ಕ ಪಕ್ಕ ಗ್ರಾಮಸ್ಥರು ದೇವಸ್ಥಾನದ ಸೇವಾಸಮಿತಿ ಪದಾಧಿಕಾರಿಗಳು, ಯಜಮಾನರುಗಳು ಭಾಗವಹಿಸಲಿದ್ದಾರೆ.

ಫೆ.1 ರಂದು ಶಿವಾರ್ ಉಮೇಶ ಭಾವಗೀತೆ ಮತ್ತು ಜಾನಪದ ಕಾರ್ಯಕ್ರಮ, ಫೆ. ನೀಗಲಿಂಗೇಗೌಡ ಮತ್ತು ತಂಡದಿಂದ ಭಕ್ತಿಗೀತೆಗಳ ಕಾರ್ಯಕ್ರಮ ಜರುಗಲಿದೆ.