ಸರಗೂರು ಜೈ ಭುವನೇಶ್ವರಿ ಆಟೋ ಚಾಲಕರ, ಮಾಲೀಕರ ಸಂಘದಿಂದ ಡಾ. ಅಂಬೇಡ್ಕರ್‌ ಜಯಂತಿ

| Published : Apr 16 2025, 01:51 AM IST

ಸರಗೂರು ಜೈ ಭುವನೇಶ್ವರಿ ಆಟೋ ಚಾಲಕರ, ಮಾಲೀಕರ ಸಂಘದಿಂದ ಡಾ. ಅಂಬೇಡ್ಕರ್‌ ಜಯಂತಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬೇಡ್ಕರ್ ಅವರ ರಾಜಕೀಯ ಮತ್ತು ಸಾಮಾಜಿಕ ಚಿಂತನೆಗಳನ್ನ ಮೈಗೂಡಿಸಿಕೊಂಡು ಸಾಕಾರಗೊಳಿಸಲು ಪ್ರತಿಯೊಬ್ಬ ಜನಪ್ರತಿನಿಧಿಯೂ ಅವರ ಮಾರ್ಗದರ್ಶನಗಳನ್ನು ಪಾಲಿಸಬೇಕು

ಕನ್ನಡಪ್ರಭ ವಾರ್ತೆ ಸರಗೂರು

ಪಟ್ಟಣದ ಜೈ ಭುವನೇಶ್ವರಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಿದರು.

ಸಂಘದ ಸದಸ್ಯರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಎಸ್‌ಐ ಅಶೋಕ್ ಮಾತನಾಡಿ, ಅಂಬೇಡ್ಕರ್ ಅವರ ರಾಜಕೀಯ ಮತ್ತು ಸಾಮಾಜಿಕ ಚಿಂತನೆಗಳನ್ನ ಮೈಗೂಡಿಸಿಕೊಂಡು ಸಾಕಾರಗೊಳಿಸಲು ಪ್ರತಿಯೊಬ್ಬ ಜನಪ್ರತಿನಿಧಿಯೂ ಅವರ ಮಾರ್ಗದರ್ಶನಗಳನ್ನು ಪಾಲಿಸಬೇಕು ಎಂದರು. ಕೃಷಿ ಉತ್ಪನ್ನ ಮಾರುಕಟ್ಟೆ ಮಾಜಿ ಅಧ್ಯಕ್ಷ ಸಿದ್ದರಾಜು, ಮಹೇಶ್ ಮಾತನಾಡಿದರು. ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಸಂಘದ ಅಧ್ಯಕ್ಷ ಮೂರ್ತಿ, ಉಪಾಧ್ಯಕ್ಷ ಸತೀಶ್, ಕಾರ್ಯದರ್ಶಿ ಪ್ರಸಾದ್, ಖಜಾಂಚಿ ಶಿವಮೂರ್ತಿ, ಚಾಲಕರ ಸಂಘದ ಪದಾಧಿಕಾರಿಗಳು, ಸದಸ್ಯರು, ಪಪಂ ಸದಸ್ಯರಾದ ಶ್ರೀನಿವಾಸ್, ನೂರಾಳಸ್ವಾಮಿ, ಚಂದ್ರಕಲಾ, ಸಣ್ಣತಾಯಮ್ಮ, ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಮಾದೇವ, ದಸಂಸ ಮುಖಂಡ ಸಣ್ಣಸ್ವಾಮಿ, ಲಕ್ಷ್ಮಣ್, ಮಾಜಿ ಸದಸ್ಯ ರಮೇಶ, ನವೀನ್, ವರುಣ್, ಯೋಗೀಶ್, ಸೋಮಣ್ಣ, ಶ್ರೀಕಂಠಪ್ಪ, ಇದ್ದರು.