ಸಾರಾಂಶ
ಹೆಬ್ರಿಯ ಕ್ರೀಡಾ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ‘ಶ್ರೀ ಅನಂತಪದ್ಮನಾಭ ಫ್ರೆಂಡ್ಸ್’ ಸಂಸ್ಥೆಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಈ ಸಾಧನೆಯನ್ನು ಹೆಬ್ರಿಯ ಜನತೆ ಸಂಭ್ರಮದಿಂದ ಆಚರಿಸಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ಹೆಬ್ರಿಯ ಕ್ರೀಡಾ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ‘ಶ್ರೀ ಅನಂತಪದ್ಮನಾಭ ಫ್ರೆಂಡ್ಸ್’ ಸಂಸ್ಥೆಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಈ ಸಾಧನೆಯನ್ನು ಹೆಬ್ರಿಯ ಜನತೆ ಸಂಭ್ರಮದಿಂದ ಆಚರಿಸಿದರು.ಬಂಟರ ಸಂಘದಿಂದ ಪ್ರಾರಂಭವಾದ ಭವ್ಯ ಮೆರವಣಿಗೆ, ಶ್ರೀ ಅನಂತಪದ್ಮನಾಭ ದೇವಾಲಯದ ವರೆಗೆ ಸಾಗಿದ್ದು, ಧ್ವಜ, ನೃತ್ಯ, ಘೋಷಣೆಗಳು ಹಾಗೂ ಬಣ್ಣಬಣ್ಣದ ವಾದ್ಯಗಳೊಂದಿಗೆ ಸಡಗರ ತುಂಬಿತು. ಧಾರ್ಮಿಕ ಮುಂದಾಳು ಭಾಸ್ಕರ ಜೋಯಿಸ್ ಮೆರವಣಿಗೆಗೆ ಚಾಲನೆ ನೀಡಿದರು.ದೇವಾಲಯ ಸನ್ನಿಧಿಯಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ ಸಂಭ್ರಮಾಚರಣೆ ಹಾಗೂ ಕೃತಜ್ಞತಾ ಸಮಾರಂಭದಲ್ಲಿ ಸಂಸ್ಥೆಯ ಸ್ಥಾಪಕ ಹಾಗೂ ರುವಾರಿ ಶೇಖರ್ ಹೆಬ್ರಿ ಅವರ ಸೇವೆಯನ್ನು ಗಣ್ಯರು ಶ್ಲಾಘಿಸಿದರು. ಜೊತೆಗೆ ಸಂಸ್ಥೆಗೆ ಬೆಂಬಲ ನೀಡಿದ ಮುನಿಯಾಲು ಗೋಪಿನಾಥ ಭಟ್, ಬೈಕಾಡಿ ಮಂಜುನಾಥ ರಾವ್ ಶಿವಪುರ, ಮುದ್ರಾಡಿ ಮಂಜುನಾಥ ಪೂಜಾರಿ ಮೊದಲಾದವರಿಗೂ ಗೌರವ ಸಲ್ಲಿಸಲಾಯಿತು.
ಮೋಕ್ತೇಸರ ತಾರಾನಾಥ ಬಲ್ಲಾಳ್, ರಾಜ್ಯೋತ್ಸವ ಪುರಸ್ಕೃತ ಭಾಸ್ಕರ ಜೋಯಿಸ್, ಎಚ್.ಪ್ರವೀಣ್ ಬಲ್ಲಾಳ್, ಟಿ.ಜಿ.ಆಚಾರ್ಯ, ನಾರಾಯಣ ಕೆ., ವಿಠಲ ಶೆಟ್ಟಿ ಸೀತಾನದಿ, ಹರ್ಷ ಶೆಟ್ಟಿ ಹೆಬ್ರಿ, ಎಚ್.ಜನಾರ್ಧನ್, ಕರುಣಾಕರ ಶೇರಿಗಾರ್, ಸುಧಾಕರ ಹೆಗ್ಡೆ, ರಿಕ್ಷಾ ಯೂನಿಯನ್ ಅಧ್ಯಕ್ಷ ಪ್ರಭಾಕರ ಪೂಜಾರಿ, ದೈಹಿಕ ಶಿಕ್ಷಣ ಪರೀವೀಕ್ಷಕ ನಿತ್ಯಾನಂದ ಶೆಟ್ಟಿ , ಹೆಬ್ರಿ ಶಂಕರ ಶೇರಿಗಾರ್ (ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ) ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಸಂಸ್ಥೆಯ ಅಧ್ಯಕ್ಷೆ ಸ್ಮೀತಾ ಶೇಖರ್, ಸದಸ್ಯ ಅವಿನಾಶ ಜೋಗಿ ಹಾಗೂ ಅನೇಕ ಫ್ರೆಂಡ್ಸ್ ಸದಸ್ಯರು, ಪದಾಧಿಕಾರಿಗಳು, ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಶಶಿಧರ ಶೆಟ್ಟಿ ನಿರೂಪಿಸಿ ಸ್ವಾಗತಿಸಿದರು.
;Resize=(128,128))
;Resize=(128,128))
;Resize=(128,128))