ಸಾರಾಂಶ
ಶಾಸಕ ರಮೇಶ ಜಾರಕಿಹೊಳಿ ದ್ವಿತೀಯ ಸುಪುತ್ರ ಅಮರನಾಥ ಜಾರಕಿಹೊಳಿ ವಿವಾಹ ಮಹೋತ್ಸವವು ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಸೋಮವಾರ ಜರುಗಿತು.
ಕನ್ನಡಪ್ರಭ ವಾರ್ತೆ ಗೋಕಾಕ
ಶಾಸಕ ರಮೇಶ ಜಾರಕಿಹೊಳಿ ದ್ವಿತೀಯ ಸುಪುತ್ರ ಅಮರನಾಥ ಜಾರಕಿಹೊಳಿ ವಿವಾಹ ಮಹೋತ್ಸವವು ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದಲ್ಲಿ ಸೋಮವಾರ ಜರುಗಿತು. ವಿವಾಹ ಸಮಾರಂಭದಲ್ಲಿ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಅಂಕಲಗಿ ಅಡವಿಸಿದ್ಧೇಶ್ವರ ಮಠದ ಅಮರಸಿದ್ಧೇಶ್ವರ ಸ್ವಾಮೀಜಿ, ಅರಬಾವಿ ದುರದುಂಡೇಶ್ವರ ಮಠದ ಗುರುಬಸವಲಿಂಗ ಸ್ವಾಮೀಜಿ, ಸುಣಧೋಳಿಯ ಅಭಿವನಶಿವಾನಂದ ಸ್ವಾಮೀಜಿ ಸೇರಿದಂತೆ ಗೋಕಾಕ ಹಾಗೂ ಮೂಡಲಗಿ ತಾಲೂಕು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿ ವಧು-ವರರಿಗೆ ಶುಭ ಹಾರೈಸಿದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಹಾಗೂ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಸೇರಿದಂತೆ ಜಾರಕಿಹೊಳಿ ಕುಟುಂಬದ ಸಂತೋಷ, ಪ್ರಿಯಾಂಕಾ, ಸನತ, ಸರ್ವೋತ್ತಮ, ರಾಹುಲ, ಆದಿತ್ಯ ಹಾಗೂ ಜಾರಕಿಹೊಳಿ ಮತ್ತು ಪಾಟೀಲ ಕುಟುಂಬ ಮದುವೆ ಸಂಭ್ರಮದಲ್ಲಿ ಭಾಗವಹಿಸಿದ್ದರು.ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಮುರಗೇಶ ನಿರಾಣಿ, ಸಿ.ಪಿ.ಯೋಗೇಶ, ಶಾಸಕರುಗಳಾದ ಬಸವನಗೌಡ ಪಾಟೀಲ ಯತ್ನಾಳ, ದುರ್ಯೋಧನ ಐಹೊಳೆ, ಸಿದ್ದು ಸವದಿ, ಮಾಜಿ ಶಾಸಕರುಗಳಾದ ಮಾಲಿಕಯ್ಯ ಗುತ್ತೇದಾರ, ವಿವೇಕರಾವ ಪಾಟೀಲ, ಕೆ.ಶಿವನಗೌಡ ನಾಯಕ, ಪಿ.ರಾಜೀವ, ಶ್ರೀಮಂತ ಪಾಟೀಲ, ಮಹೇಶ ಕುಮಟಳ್ಳಿ, ಬಸವರಾಜ ದಡೇಗಸೂರ, ಜಗದೀಶ್ ಮೆಟಗುಡ್ಡ, ಪ್ರತಾಪರಾವ ಪಾಟೀಲ, ಸಂಜಯ ಪಾಟೀಲ ಬಿಜೆಪಿ ಮುಖಂಡರುಗಳಾದ ಸುಭಾಸ ಪಾಟೀಲ, ರತ್ನಾ ಮಾಮನಿ, ನಾಗೇಶ ಮುನ್ನೋಳಕರ, ಕಾಂಗ್ರೆಸ್ ಮುಖಂಡರಾದ ಶ್ಯಾಮ ಘಾಟಗೆ, ವಿನಯ ನಾವಲಟ್ಟಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಗಣ್ಯಾತಿಗಣ್ಯರು, ಮೂಡಲಗಿ-ಗೋಕಾಕ ತಾಲೂಕಿನ ಸಾರ್ವಜನಿಕರು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು.
--------26 ಜಿಕೆಕೆ-1
ಜಾರಕಿಹೊಳಿ ಕುಟುಂಬದ ಮದುವೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿ ವಧು-ವರರಿಗೆ ಶುಭ ಹಾರೈಸಿದರು.