ಕನ್ನಡಪ್ರಭ ವಾರ್ತೆ ಹನೂರುಮಹಾಲಿಂಗನಕಟ್ಟೆಯಲ್ಲಿ ಮೇಕೆಗಳ ಮೇಲೆ ಚಿರತೆದಾಳಿ- ಎರಡು ಸಾವು, ಮತ್ತೊಂದರ ಸ್ಥಿತಿ ಗಂಭೀರ... ತಾಲೂಕಿನಲ್ಲಿ ಚಿರತೆ ದಾಳಿ ಪ್ರಕರಣ ಮುಂದುವರೆದಿದ್ದು 3 ಮೇಕೆಗಳ ಮೇಲೆ ದಾಳಿ ಮಾಡಿ ಎರಡನ್ನು ಬಲಿ ಪಡೆದ ಘಟನೆ ಹನೂರು ತಾಲೂಕಿನ ಮಹಾಲಿಂಗನಕಟ್ಟೆಯಲ್ಲಿ ನಡೆದಿದೆ.ಮಹಾಲಿಂಗನಕಟ್ಟೆ ಗ್ರಾಮದಸಿದ್ದೆಗೌಡರ ಜಮೀನಿನಲ್ಲಿ ಚಿರತೆ ದಾಳಿ ನಡೆದಿದ್ದು ರೈತರು ಬೆಚ್ಚಿಬಿದ್ದಿದ್ದಾರೆ. ಸಿದ್ದೇಗೌಡರು 8 ಮೇಕೆಗಳನ್ನು ಸಾಕಿದ್ದು ಮೂರು ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿ ಎರಡು ಮೇಕೆಯನ್ನು ಕೊಂದು ಮತ್ತೊಂದನ್ನು ಗಂಭೀರವಾಗಿ ಗಾಯಗೊಳಿಸಿದೆ. ಸೂಕ್ತ ಪರಿಹಾರಕ್ಕೆ ಒತ್ತಾಯ : ಕಾಡು ಕ್ರೂರ ಪ್ರಾಣಿ ಚಿರತೆ ಯಿಂದ ಮೇಕೆ ಕಳೆದುಕೊಂಡ ರೈತನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವ ಮೂಲಕ ಕ್ರಮ ಕೈಗೊಳ್ಳಬೇಕು ಜೊತೆಗೆ ಚಿರತೆ ರೈತರ ಜಮೀನಿಗೆ ಬರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ ಮತ್ತೊಂದಡೆ ಚಿರತೆಗಾಗಿ ಬೋನ್ ಇಡಲಾಗಿದೆ : ಕೊಲೆ ಮಾದೇಶ್ವರ ಬೆಟ್ಟಕ್ಕೆ ತೆರಳುವ ಪಾದಯಾತ್ರೆಗಳ ಮೇಲೆ ಕಳೆದ ತಿಂಗಳು ಚಿರತೆ ಭಕ್ತನೊಬ್ಬನನ್ನು ಕೊಂದು ಮತ್ತೊಂದು ಪ್ರಕರಣದಲ್ಲಿ ಯುವಕನನ್ನು ಗಾಯಗೊಳಿಸಿರುವ ಘಟನೆ ಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆಹಿಡಿಯಲು ಮಲೆ ಮಹದೇಶ್ವರ ಬೆಟ್ಟದ ತಾಳು ಬೆಟ್ಟದಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ತೆರಳುವ ರಸ್ತೆಯಲ್ಲಿ ಸಿಗುವ 7ನೇ ತಿರುವು ಹಾಗೂ ರಂಗಸ್ವಾಮಿ ಒಡ್ಡಿನ ಎರಡು ಕಡೆ ಬೋನ್ ಇಡಲಾಗಿದೆ ಜೊತೆಗೆ ಆಯಾ ಕಟ್ಟಿನ ಸ್ಥಳಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ವರ್ಗ ನೇಮಕ ಮಾಡಲಾಗಿ ಚಿರತೆ ಸೆರಗಾಗಿ ಶೋಧನೆ ನಡೆಸಲಾಗುತ್ತಿದೆ ... ಚಿರತೆ ಸೆರೆಗೆ ಡ್ರೋಣ್ ಬಳಕೆ: ಅರಣ್ಯ ಇಲಾಖೆ ವತಿಯಿಂದ ಚಿರತೆ ಸೆರೆ ಹಿಡಿಯಲು ನೂರಕ್ಕೂ ಹೆಚ್ಚು ಸಿಬ್ಬಂದಿ ವರ್ಗದವರನ್ನು ತಾಳು ಬೆಟ್ಟದಿಂದ ಮಲೆ ಮಾದೇಶ್ವರ ಬೆಟ್ಟದ ವರೆಗೆ . ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ನಡೆಸುವ ಮೂಲಕ ಭಕ್ತರಿಗೆ ಗುಂಪಾಗಿ ತೆರಳುವಂತೆ ಸೂಚನೆ ನೀಡುವುದರ ಮೂಲಕ ಅರಣ್ಯ ಪ್ರದೇಶದ ಒಳಗಡೆ ಹೋಗದಂತೆ ಮಾಹಿತಿಯನ್ನು ಭಕ್ತರಿಗೆ ನೀಡುವ ಮೂಲಕ ಭಕ್ತರಿಗೆ ಅರಿವು ಮೂಡಿಸಿ ಚಿರತೆ ಸೆರೆಗೆ ಕ್ರಮಕ್ಕೆ ಮುಂದಾಗಿದ್ದಾರೆ ... ಇಷ್ಟಾರ್ಥ ಸಿದ್ಧಿಸುವಂತೆ ಮಾದಪ್ಪನಿಗೆ ಹರಕೆ ಹೊತ್ತು ಬರುವ ಪಾದಯಾತ್ರೆ ಭಕ್ತಾದಿಗಳಿಗೆ ಕ್ರೂರ ಪ್ರಾಣಿಗಳ ದಾಳಿಯಿಂದ ಭಕ್ತನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ ನಂತರ ಎರಡನೇ ಪ್ರಕರಣದಲ್ಲಿ ಬಾಲಕನಿಗೆ ಗುಂಪಿನಲ್ಲಿದ್ದಾಗಲೇ ಕಚ್ಚಿ ಗಾಯಗೊಳಿಸಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಮುಂದೆ ಇಂತಹ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಕಲ ರೀತಿಯಲ್ಲಿಯೂ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಅಧಿಕಾರಿಗಳಿಗೆ ಶಾಸಕ ಎಂಆರ್ ಮಂಜುನಾಥ್ ಸೂಚನೆ ನೀಡಿದ್ದಾರೆ ....Hnr, 3news, 2 ಹನೂರು ತಾಲೂಕಿನ ಮಹಾಲಿಂಗನ ಕಟ್ಟೆ ರೈತನ ಜಮೀನಿನಲ್ಲಿ ಚಿರತೆ ದಾಳಿ ನಡೆಸಿ ಮೇಕೆಗಳನ್ನು ಕೊಂದು ಹಾಕಿರುವ ಘಟನೆ ಜರುಗಿದೆ ...Hnr, 4news, 2 ಹನೂರು ಮಲೆ ಮಾದೇಶ್ವರ ಬೆಟ್ಟದ ರಂಗಸ್ವಾಮಿ ಒಡ್ಡು ಹಾಗೂ 7ನೇ ತಿರುವಿನಲ್ಲಿ ಚಿರತೆ ಸೆರೆ ಹಿಡಿಯಲು ಬೋನ್ ಗಳನ್ನು ಅರಣ್ಯ ಅಧಿಕಾರಿಗಳು ಅಳವಡಿಸಿದ್ದಾರೆ | Kannada Prabha
Image Credit: KP
ಚಾಮರಾಜನಗರದಲ್ಲಿ ದಿನೇ ದಿನೇ ಚಿರತೆ ದಾಳಿಗಳ ವರದಿ ಹೆಚ್ಚುತ್ತಿದ್ದು, ಶುಕ್ರವಾರವೂ ಸಹ ಇದೇ ಮುಂದುವರೆದಿದೆ. ಹನೂರು ತಾಲೂಕಿನ ಮಹಾಲಿಂಗನಕಟ್ಟೆಯಲ್ಲಿ ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿದ್ದು, 2 ಮೇಕೆಗಳು ಬಲಿಯಾಗಿವೆ. ಮತ್ತೊಂದರ ಸ್ಥಿತಿ ಚಿಂತಾಜನಲವಾಗಿದೆ.
ಕನ್ನಡಪ್ರಭ ವಾರ್ತೆ ಹನೂರು
ಚಾಮರಾಜನಗರದಲ್ಲಿ ದಿನೇ ದಿನೇ ಚಿರತೆ ದಾಳಿಗಳ ವರದಿ ಹೆಚ್ಚುತ್ತಿದ್ದು, ಶುಕ್ರವಾರವೂ ಸಹ ಇದೇ ಮುಂದುವರೆದಿದೆ. ಹನೂರು ತಾಲೂಕಿನ ಮಹಾಲಿಂಗನಕಟ್ಟೆಯಲ್ಲಿ ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿದ್ದು, 2 ಮೇಕೆಗಳು ಬಲಿಯಾಗಿವೆ. ಮತ್ತೊಂದರ ಸ್ಥಿತಿ ಚಿಂತಾಜನಲವಾಗಿದೆ.
ಮಹಾಲಿಂಗನಕಟ್ಟೆ ಗ್ರಾಮದ ಸಿದ್ದೆಗೌಡರ ಜಮೀನಿನಲ್ಲಿ ಚಿರತೆ ದಾಳಿ ನಡೆದಿದ್ದು ರೈತರು ಬೆಚ್ಚಿಬಿದ್ದಿದ್ದಾರೆ. ಸಿದ್ದೇಗೌಡರು 8 ಮೇಕೆಗಳನ್ನು ಸಾಕಿದ್ದರು. ಅದರಲ್ಲಿ ಮೂರು ಬಲಿಯಾಗಿ ಒಂದರ ಸ್ಥಿತಿ ಗಂಭೀರವಾಗಿದೆ.
ಸೂಕ್ತ ಪರಿಹಾರಕ್ಕೆ ಒತ್ತಾಯ: ‘ಚಿರತೆಯಿಂದ ಮೇಕೆ ಕಳೆದುಕೊಂಡ ರೈತನಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವ ಮೂಲಕ ಕ್ರಮ ಕೈಗೊಳ್ಳಬೇಕು. ಜೊತೆಗೆ ಚಿರತೆ ರೈತರ ಜಮೀನಿಗೆ ಬರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕ್ರಮ ಕೈಗೊಳ್ಳಬೇಕು’ ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಮಾದಪ್ಪನ ಬೆಟ್ಟದಲ್ಲಿ ಚಿರತೆ ಸೆರೆಗೆ ಸೈರನ್ ಬೋನ್...
ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ ತಿಂಗಳು ಮಂಡ್ಯ ಜಿಲ್ಲೆಯ ವ್ಯಕ್ತಿಯನ್ನು ಚಿರತೆ ಬಲಿ ಘಟನೆ ಬಳಿಕ ಎಚ್ಚೆತ್ತಿರುವ ಅರಣ್ಯ ಇಲಾಖೆಯು ಚಿರತೆ ಸೆರೆಗೆ ಸೈರನ್ ಬೋನ್ ಇರಿಸಿದೆ. ಬೆಟ್ಟಕ್ಕೆ ಹೋಗುವಾಗ ಸಿಗುವ 7ನೇ ತಿರುವು ಮತ್ತು ರಂಗಸ್ವಾಮಿ ಒಡ್ಡಿನ ಎರಡು ಕಡೆಗಳಲ್ಲಿ ಬೋನ್ ಇಡಲಾಗಿದೆ. ಜೊತೆಗೆ ಆಯಕಟ್ಟಿನ ಸ್ಥಳಗಳಲ್ಲಿ ಅರಣ್ಯ, ಪೊಲೀಸ್ ಮತ್ತು ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಸಿಬ್ಬಂದಿ ನಿಯೋಜಿಸಲಾಗಿದೆ.
ಚಿರತೆ ಸೆರೆಗೆ ಡ್ರೋನ್ ಬಳಕೆ:
ಮತ್ತೊಂದೆಡೆ ಚಿರತೆ ಮೇಲೆ ನಿಗಾ ಇರಿಸಲು ಅರಣ್ಯ ಇಲಾಖೆ ಡ್ರೋನ್‌ಗಳ ಮೊರೆ ಹೋಗಿದೆ. ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ತಿರುಗುತ್ತಿದ್ದು, ಡ್ರೋನ್ ಸಹ ಬಳಸುತ್ತಿದ್ದಾರೆ.
ಭದ್ರತೆ ಶಾಸಕ ಮಂಜುನಾಥ್ ಸೂಚನೆ:
ಮತ್ತೊಂದೆಡೆ ಶಾಸಕ ಎ.ಆರ್.ಮಂಜುನಾಥ್ ಅವರು ಚಿರತೆಗಳ ಸೆರೆಹಿಡಿಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಓರ್ವ ಭಕ್ತ ಮೃತಪಟ್ಟಿದ್ದು, ಮತ್ತೋರ್ವ ಬಾಲಕ ಗಾಯಗೊಂಡಿದ್ದಾನೆ. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸಬಾರದೆಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.