ಕೂರುಳಿ ಸುಭಾಷ್ ನಗರದಲ್ಲಿ ನಾಗ ಸನ್ನಿಧಾನದ ಪುನಃ ಪ್ರತಿಷ್ಠಾಪನೆ
Author : KannadaprabhaNewsNetwork
Published : Mar 09 2026, 03:00 AM IST
6-ಎನ್ ಪಿ ಕೆ-2.ಕೂರುಳಿಸುಭಾಷ್ ನಗರದಲ್ಲಿ ನಾಗ ಸನ್ನಿಧಾನದ ಪ್ರನಃ ಪ್ರತಿಷ್ಠಾಪನೆ. | Kannada Prabha
Image Credit: KP
ಕೂರುಳಿ ಸುಭಾಷ್ ನಗರದಲ್ಲಿ ನಾಗ ಸನ್ನಿಧಾನದ ಪುನಃ ಪ್ರತಿಷ್ಠಾಪನೆಯ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಕೂರುಳಿ ಸುಭಾಷ್ ನಗರದಲ್ಲಿ ನಾಗ ಸನ್ನಿಧಾನದ ಪುನಃ ಪ್ರತಿಷ್ಠಾಪನೆಯ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನೆರವೇರಿತು.
13 ವರ್ಷಗಳಿಂದ ಆರಾಧಿಸುತ್ತಾ ಬಂದಿರುವ ನಾಗ ಸನ್ನಿಧಾನದ ಪುನಃ ಪ್ರತಿಷ್ಠಾಪನೆಯ ಪ್ರಯುಕ್ತ ಪೂಜಾ ಕಾರ್ಯಗಳನ್ನು ಸಾಂಪ್ರದಾಯಿಕವಾಗಿ
ನಡೆಸಲಾಯಿತು. ಇದರಲ್ಲಿ ಪಂಚಗವ್ಯ ಪುಣ್ಯಾಹ , ಸಪ್ತಶುದ್ಧಿ ವಾಸ್ತು ಬಲಿ, ಬಿಂಭಶುದ್ಧಿ ಪೂಜೆಗಳು ಹಾಗೂ ಗಣಹೋಮ ಪ್ರತಿಷ್ಠಾಪನಾ ಹೋಮಗಳು ಆಶ್ಲೇಷ ಬಲಿ ಹಾಗೂ
ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನೆರವೇರಿತು. ಪೂಜಾ ವಿಧಿ ವಿಧಾನವನ್ನು ನಾಪೋಕ್ಲು ಶ್ರೀ ಭಗವತಿ ದೇವಾಲಯದ ಮುಖ್ಯ ಅರ್ಚಕ ಹರೀಶ್ ಅವರು ನೆರವೇರಿಸಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.