ತುಳಿತಕ್ಕೆ ಒಳಗಾದವರ ಸಮಸ್ಯೆಗೆ ಸ್ಪಂದಿಸಿ: ಚಂದ್ರು

| Published : May 24 2025, 12:21 AM IST

ಸಾರಾಂಶ

ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಸಮಸ್ಯೆಗಳಿಗೆ ಸ್ಪಂದಿಸಲು ಕಾರ್ಯಕರ್ತರು ಮುಂದಾಗಬೇಕೆಂದು ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಹೇಳಿದ್ದಾರೆ.

ದಾವಣಗೆರೆ: ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಸಮಸ್ಯೆಗಳಿಗೆ ಸ್ಪಂದಿಸಲು ಕಾರ್ಯಕರ್ತರು ಮುಂದಾಗಬೇಕೆಂದು ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಹೇಳಿದರು.

ನಗರದ ಅಶೋಕ ರಸ್ತೆಯ ಕಾಮ್ರೆಡ್ ಪಂಪಾಪತಿ ಭವನದಲ್ಲಿ ಗುರುವಾರ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಜಿಲ್ಲಾ ಸಮ್ಮೇಳನದ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಳಷ್ಟೇ ಅಲ್ಲದೇ, ಹಿಂದುಳಿದ ವರ್ಗಗಳ ಮತ್ತು ಬಡವರ ಪರ ಧ್ವನಿಯೆತ್ತುವ ಮೂಲಕ ಅವರಿಗೆ ನ್ಯಾಯ ಕೊಡಿಸಲು ಮುಂದಾಗಬೇಕು ಎಂದರು.

ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಜಿಲ್ಲಾ ಸಮ್ಮೇಳನವನ್ನು ಜೂ.8ರಂದು ದಾವಣಗೆರೆ ನಗರದಲ್ಲಿ ನಡೆಸಲು ನಿಮ್ಮೆಲ್ಲರ ಜೊತೆಗೆ ಚರ್ಚಿಸಿದ ನಂತರ ಅಂತಿಮಗೊಳಿಸಲಾಗಿದೆ. ಸಮ್ಮೇಳನಕ್ಕೆ ಈಗಿನಿಂದಲೇ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳೋಣ ಎಂದು ಹೇಳಿದರು.

ಎಐಡಿಆರ್‌ಎಂ ದಲಿತ ಆಂದೋಲನದ ಮುಖಂಡರಾದ ಸಿ.ರಮೇಶ ದಾಸರ, ನರೇಗಾ ರಂಗನಾಥ, ವಿ.ಲಕ್ಷ್ಮಣ, ಎ.ತಿಪ್ಪೇಶ, ರಾಜು ಕೆರನಹಳ್ಳಿ, ನಾಗನೂರು ನಿಂಗಪ್ಪ, ಐರಣಿ ಚಂದ್ರು, ಸರೋಜ, ನಾಗನೂರು ಅಂಜಿನಪ್ಪ, ಆವರಗೆರೆ ಮಂಜುನಾಥ, ಶೇಖರ ನಾಯಕ, ಜಿ.ಯಲ್ಲಪ್ಪ, ಕೆ.ಜಿ.ಶಿವಮೂರ್ತಿ, ರಘು, ಮಲ್ಲೇಶ, ಆನಂದಪ್ಪ ಕಾರಿಗನೂರು, ಹುಣಸೇಕಟ್ಟೆ ಮಂಜುನಾಥ, ಇತರರು ಇದ್ದರು.

- - - (** ಈ ಫೋಟೋ-ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಿ)

-22ಕೆಡಿವಿಜಿ2.ಜೆಪಿಜಿ:

ದಾವಣಗೆರೆಯಲ್ಲಿ ಗುರುವಾರ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಜಿಲ್ಲಾ ಸಮ್ಮೇಳನದ ಸಿದ್ಧತಾ ಸಭೆಯಲ್ಲಿ ಕಾರ್ಮಿಕ ಮುಖಂಡ ಆವರಗೆರೆ ಚಂದ್ರು ಮಾತನಾಡಿದರು. ಮುಖಂಡರಾದ ಸಿ.ರಮೇಶ ದಾಸರ, ನರೇಗಾ ರಂಗನಾಥ, ವಿ.ಲಕ್ಷ್ಮಣ, ಎ.ತಿಪ್ಪೇಶ, ರಾಜು ಕೆರನಹಳ್ಳಿ ಇತರರಿದ್ದರು.