ಕಡೂರು ಸರ್ಕಾರಿ ನೌಕರಿಯಿಂದ ನಿವೃತ್ತರಾಗಿ ಸ್ವಾಭಿಮಾನದ ಬದುಕು ಸಾಗಿಸುತ್ತಿರುವ ಪಿಂಚಿಣಿದಾರರ ಸೇವೆ ಯನ್ನು ಸಾರ್ವಜನಿಕ ವಲಯ ಶ್ಲಾಘಿಸುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ರಾಜ್ಯ ಸರ್ಕಾರಿ ನಿವೃತ್ತ ನೌಕರರ ಕಡೂರು ಶಾಖೆಯಿಂದ ನಿವೃತ್ತ ನೌಕರರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ, ಕಡೂರು

ಸರ್ಕಾರಿ ನೌಕರಿಯಿಂದ ನಿವೃತ್ತರಾಗಿ ಸ್ವಾಭಿಮಾನದ ಬದುಕು ಸಾಗಿಸುತ್ತಿರುವ ಪಿಂಚಿಣಿದಾರರ ಸೇವೆ ಯನ್ನು ಸಾರ್ವಜನಿಕ ವಲಯ ಶ್ಲಾಘಿಸುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಕಡೂರು ಶಾಖೆ ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಏರ್ಪಡಿ ಸಿದ್ದ ವಾರ್ಷಿಕ ಮಹಾಸಭೆ ಮತ್ತು 75 ವರ್ಷ ತುಂಬಿದ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ನೀವುಗಳೆ ಪುಣ್ಯವಂತರು. ಸರ್ಕಾರಿ ನೌಕರಿ ಪಡೆದು ನಿವೃತ್ತಿ ಜೀವನ ಸಾಗಿಸಲು ಪಿಂಚಣಿ ಅವಶ್ಯಕ. 2005ರ ನಂತರ ನೌಕರಿ ಪಡೆದವರಿಗೆ ಹೋಲಿಸಿದರೆ ನೀವುಗಳೆ ಪುಣ್ಯವಂತರು ಎಂದರೆ ತಪ್ಪಾಗಲಾರದು ಎಂದರು. ನಿವೃತ್ತಿ ನಂತರ ಕೆಲವರ ಜೀವನ ಸುಖ-ದುಖಗಳೊಂದಿಗೆ ಕೂಡಿರುತ್ತದೆ ಅನೇಕ ಕುಟುಂಬಗಳಲ್ಲಿ ತಂದೆ-ತಾಯಿಗಳನ್ನು ನೋಡಿಕೊಳ್ಳುವುದೇ ಕಷ್ಟ. ಪಿಂಚಣಿಯಿಂದ ನಿಮ್ಮ ಬದುಕು ನಿಮ್ಮ ಕೈಯಲ್ಲಿ ಇದೆ ಎಂದರು. ಸರ್ಕಾರಿ ಸೇವೆಯನ್ನು ನಿಮ್ಮ ಕುಟುಂಬದ ಸೇವೆಯೆಂದು ಪರಿಗಣಿಸಿ ನಿವೃತ್ತಿ ತನಕ ಸೇವೆ ಸಲ್ಲಿಸಿ ಸ್ವಾಭಿಮಾನದ ಬದುಕಿನಲ್ಲಿ ಬದುಕುತ್ತಿರುವ ನಿಮ್ಮ ಸೇವೆ ಇಂದಿನ ಯುವಕರಿಗೆ ಆದರ್ಶವಾಗಿದೆ ಎಂದರು.ನಿವೃತ್ತ ನೌಕರರ ಅನೇಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ ಪುರಸಭೆಗೆ ನಿವೇಶನ ಕೋರಿ ಮನವಿ ಸಲ್ಲಿಸಿದ್ದು ಈಗಿರುವ ಹಳೆ ಕಟ್ಟಡವನ್ನೇ ಖಾತೆ ಮಾಡಿಸಿ ಪತ್ರ ನೀಡುವುದಾಗಿ ಭರವಸೆ ನೀಡಿದರು.ನಿವೃತ್ತ ನೌಕರ 95 ವರ್ಷದ ಪರಮೇಶ್ವರಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ 1994-95 ರಲ್ಲಿ ಸಖ ರಾಯಪಟ್ಟಣದ ದೇವಾಲಯದಲ್ಲಿ ಕಡೂರು ನಿವೃತ್ತ ನೌಕರ ಸಂಘ ಸ್ಥಾಪನೆಗೆ ಸಭೆ ನಡೆದು ನಂತರ ನಿವೃತ್ತ ಶಿಕ್ಷಕ ಕಡೂರು ಬಸಪ್ಪನವರ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾಗಿ ಇಲ್ಲಿವರೆಗೆ ನಡೆದುಕೊಂಡು ಬಂದೆ. ಇದೀಗ 1150 ನಿವೃತ್ತ ನೌಕರ ಸದಸ್ಯರು ಸಂಘದಲ್ಲಿ ಇದ್ದಾರೆ. ಸಂಘ ಸ್ಥಾಪನೆಗೆ ಗಿರಿಯಾಪುರದ ಜಿ.ಸಿ. ಸಿದ್ದಪ್ಪ ಮುಂತಾದವರನ್ನು ಸ್ಮರಿಸಬೇಕು. ಇಂದಿನ ಪ್ರಭಾರ ಅಧ್ಯಕ್ಷ ಈಶ್ವರಪ್ಪ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ ಮಾತನಾಡಿ, ನಿವೃತ್ತರು ಅನೇಕ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಅಪಾರ ಜ್ಞಾನ ಹೊಂದಿದ್ದಾರೆ. ತಮ್ಮ ಅನುಭವ ಇಂದಿನ ಯುವ ನೌಕರರಿಗೆ ಮಾರ್ಗದರ್ಶನ ನೀಡಬೇಕು ಅವರ ಅಪಾರ ಜ್ಞಾನ ನೌಕರರಿಗೆ ಅಲ್ಲದೆ ಕುಟುಂಬಕ್ಕೂ ಸಹ ಮೀಸಲಾಗಿರುತ್ತದೆ ಎಂದರು. ನಿವೃತ್ತ ನೌಕರ ಸಂಘದ ಕೆ.ಎ.ಗೋಪಾಲಕೃಷ್ಣ ಮಾತನಾಡಿ ನಿವೃತ್ತ ನೌಕರರು ಅನೇಕ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ತಮ್ಮ ವೃತ್ತಿ ಮೂಲಕ ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದರು.ಜಿಲ್ಲಾ ಖಜಾನೆ ಸಹಾಯಕ ನಿರ್ದೇಶಕ ಆಸಂದಿ ಓಂಕಾರಪ್ಪ ಮಾತನಾಡಿ ಹಿರಿಯರು ಸಂತೋಷದಿಂದ ಇದ್ದರೆ ಕುಟುಂಬ ಸಂತೋಷವಾಗಿರುತ್ತದೆ. ಇದೇ ಡಿ.26 ರಂದು ಪಿಂಚಣಿ ಅದಾಲತ್‌ನ್ನು ಮಹಾ ಲೇಖ ಪಾಲರ ತಂಡ ಚಿಕ್ಕಮಗಳೂರಿಗೆ ಬರಲಿದ್ದು, ಪಿಂಚಣಿದಾರರು ಯಾವುದೇ ತಮ್ಮ ಪಿಂಚಣಿ ಬಗ್ಗೆ ಸಮಸ್ಯೆ ಗಳಿದ್ದರೆ ನೇರವಾಗಿ ಸಂಪರ್ಕಿಸಿ ಬಗೆಹರಿಸಿಕೊಳ್ಳುವ ಅವಕಾಶ ಬಳಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.ಪ್ರಾಸ್ತಾವಿಕವಾಗಿ ಡಿ.ಭಾರ್ಗೇಶಪ್ಪ ಮಾತನಾಡಿ ಸಂಘಟನೆ ಮತ್ತು ವಾರ್ಷಿಕ ಸಭೆ ಬಗ್ಗೆ ಕುಬೇಂದ್ರಚಾರ್ ಲೆಕ್ಕ ಪತ್ರ ಹಾಗೂ ಹಿಂದಿನ ಅಧ್ಯಕ್ಷರ ನಡೆ ಕುರಿತು ಮಾತನಾಡಿದರು.ಇದೇ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ,75 ವರ್ಷ ತುಂಬಿದ ನಿವೃತ್ತ ಜನರನ್ನು ಸನ್ಮಾನಿಸಿ ಗೌರವಿಸಿದ್ದು ವಿಶೇಷ ಎಂದರು.ಸಂಘದ ಪ್ರಭಾರ ಅಧ್ಯಕ್ಷ ಬಿ.ಎಂ.ಈಶ್ವರಪ್ಪ ಅಧ್ಯಕ್ಷತೆ ವಹಿಸಿ ನೌಕರರ ಕುರಿತು ಸಂಘಟನೆ ಬಗ್ಗೆ ಮಾತನಾಡಿದರು. ಹಿರಿಯರಾದ ವೈ.ಕೆ.ರಂಗಪ್ಪ ಎನ್.ಎಚ್.ಚಂದ್ರಪ್ಪ, ಪಿ.ನಂಜುಂಡಾರಾದ್ಯ, ಡಾ. ರಾಮಚಂದ್ರಪ್ಪ, ಡಾ.ಚಂದ್ರಪ್ಪ ಸೇರಿದಂತೆ ಅನೇಕರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಗುರುರಾಜ್ ಹಾಲ್ಮತ್ ನಿರೂಪಿಸಿದರು.22ಕೆಕೆಡಿಯು2.

ಕಡೂರು ತಾಲೂಕು ಸರ್ಕಾರಿ ನಿವೃತ್ತ ನೌಕರ ಸಂಘದ ವಾರ್ಷಿಕ ಮಹಾಸಭೆಯನ್ನು ಪುರಸಭಾಧ್ಯಕ್ಷ ಭಂಡಾರಿಶ್ರೀನಿವಾಸ್ ಉದ್ಘಾಟಿಸಿದರು.ಅಧ್ಯಕ್ಷ ಈಶ್ವರಪ್ಪ ಮತ್ತಿತರರು ಇದ್ದರು.