ಸಾರಾಂಶ
ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಹಾಗೂ 40 ವರ್ಷಗಳಿಂದ ಕ್ರಿಕೆಟ್ ಕ್ರೀಡೆಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ರೋಲಾಂಡ್ ಪಿಂಟೋ ಅವರಿಗೆ ರೋಟರಿ ಸಂಸ್ಥೆಯ ವಾರ್ಷಿಕ ವೃತ್ತಿಪರ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಿ ಅಭಿನಂದಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ 119ನೇ ವಿಶ್ವ ರೋಟರಿ ದಿನಾಚರಣೆ ನಗರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ಅಂಗವಾಗಿ ನಗರದ ಖ್ಯಾತ ಯೋಗಶಾಸ್ತ್ರ ತಜ್ಞ ಹಾಗೂ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಹಾಗೂ 40 ವರ್ಷಗಳಿಂದ ಕ್ರಿಕೆಟ್ ಕ್ರೀಡೆಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ರೋಲಾಂಡ್ ಪಿಂಟೋ ಅವರಿಗೆ ರೋಟರಿ ಸಂಸ್ಥೆಯ ವಾರ್ಷಿಕ ವೃತ್ತಿಪರ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಿ ಅಭಿನಂದಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಡಾ. ಪ್ರಶಾಂತ್ ರೈ ಅಧ್ಯಕ್ಷತೆ ವಹಿಸಿ, ರೋಟರಿ ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ಮಹತ್ವ ಹಾಗೂ ಉದ್ದೇಶವನ್ನು ವಿವರಿಸಿದರು. ಸಮಾಜಕ್ಕೆ ಉತ್ತಮ ಸೇವೆ ಮಾಡುವ ಮಂದಿಯನ್ನು ಗುರುತಿಸುವ ಕಾರ್ಯವನ್ನು ರೋಟರಿ ಸಂಸ್ಥೆ ಮಾಡುತ್ತಿದೆ ಎಂದರು.ರೋಟರಿ ಸಂಸ್ಥೆಯ ಸ್ಥಾಪನಾ ಅಧ್ಯಕ್ಷ ಡಾ.ರಂಜನ್ ಪ್ರಶಸ್ತಿ ವಿಜೇತರನ್ನು ಪರಿಚಯಿಸಿ ಅವರ ಸಾಧನೆಯ ವಿವರ ನೀಡಿದರು. ವೈಶಾಕ್ ಅವರು ಸಂಸ್ಥೆಗೆ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ವೇದಿಕೆಯಲ್ಲಿ ಡಾ.ಎಸ್.ಆರ್. ನಾಯಕ್ ಹಾಗೂ ವೃತ್ತಿಪರ ಸೇವಾ ಯೋಜನೆಯ ನಿರ್ದೇಶಕ ಸುಮಿತ್ ರಾವ್, ಮಾಜಿ ಅಧ್ಯಕ್ಷ ಬಸವ ಕುಮಾರ್ ಇದ್ದರು. ಕಾರ್ಯದರ್ಶಿ ಗಣೇಶ್ ವಂದಿಸಿದರು.