ಕಪಿಲಾ ನದಿ ತೀರದಲ್ಲಿ ಜ.26 ರಿಂದ ಸುತ್ತೂರು ಜಾತ್ರೆ: ಪಿ.ಬಿ.ಮಂಜುನಾಥ್

| Published : Jan 08 2025, 12:15 AM IST

ಕಪಿಲಾ ನದಿ ತೀರದಲ್ಲಿ ಜ.26 ರಿಂದ ಸುತ್ತೂರು ಜಾತ್ರೆ: ಪಿ.ಬಿ.ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಜಾತ್ರಾ ಮಹೋತ್ಸವಕ್ಕೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾಡಿನ ಪೂಜ್ಯ ಮಠಾಧೀಶರುಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸಚಿವರು, ಕಲಾವಿದರು, ಪ್ರಗತಿಪರ ರೈತರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರು ಆಗಮಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಪಿಲಾ ನದಿ ತೀರದಲ್ಲಿ ಶ್ರೀಸುತ್ತೂರು ಕ್ಷೇತ್ರದಲ್ಲಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಜ.26 ರಿಂದ 31ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ವೀರಶೈವ ಮುಖಂಡ ಹಾಗೂ ವಕೀಲ ಪಿ.ಬಿ.ಮಂಜುನಾಥ್ ತಿಳಿಸಿದರು.

ಪಟ್ಟಣದ ಶ್ರೀಚನ್ನಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸುತ್ತೂರು ಜಾತ್ರಾ ಮಹೋತ್ಸವದ ಜಾಗೃತಿ ರಥವನ್ನು ಬರಮಾಡಿಕೊಂಡು ಮಾತನಾಡಿ, ಸುತ್ತೂರು ಜಾತ್ರೆಯಲ್ಲಿ ನಾಡಿನ ವಿವಿಧ ಭಾಗಗಳಿಂದ ಸಾರ್ವಜನಿಕರು ಹಾಗೂ ಸುತ್ತೂರು ಶ್ರೀಕ್ಷೇತ್ರದ ಭಕ್ತರು ಸೇರಿದಂತೆ ಲಕ್ಷಾಂತರ ಮಂದಿ ಆಗಮಿಸುತ್ತಾರೆ ಎಂದರು.

ಜಾತ್ರಾ ಮಹೋತ್ಸವಕ್ಕೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾಡಿನ ಪೂಜ್ಯ ಮಠಾಧೀಶರುಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸಚಿವರು, ಕಲಾವಿದರು, ಪ್ರಗತಿಪರ ರೈತರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರು ಆಗಮಿಸಲಿದ್ದಾರೆ ಎಂದರು.

ಜಾತ್ರಾ ಮಹೋತ್ಸವದಲ್ಲಿ ವರ್ಣರಂಜಿತ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕಗಳು ನಡೆಯಲಿವೆ. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಇರುತ್ತದೆ. ಭಕ್ತರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಈ ವೇಳೆ ತಾಲೂಕು ವೀರಶೈವ ಮಹಾಸಭಾದ ಉಪಾಧ್ಯಕ್ಷ ಚೋಕನಹಳ್ಳಿ ಸಿ.ಎನ್. ಪ್ರಕಾಶ್, ಜಗದಾಂಭ, ಪ್ರಧಾನ ಕಾರ್ಯದರ್ಶಿ ಅಪ್ಪಾಜಿ, ನಿರ್ದೇಶಕರಾದ ಲಿಂಗಾಪುರ ಎಲ್‌ಐಸಿ ಶಿವಪ್ಪ, ವಡ್ಡರಹಳ್ಳಿ ಶಿವಕುಮಾರ್, ಉಮಾ ವಕೀಲ ಗಂಜಿಗೆರೆ ನಂದೀಶ್, ಉಪಾಆನಂದ್, ಪೂರ್ಣಿಮ, ಅಪ್ಪನಹಳ್ಳಿ ನವೀನ್, ಯಗಚಗುಪ್ಪೆ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.

ನಿರ್ದೇಶಕರಾಗಿ ಕೆ.ಎಸ್.ಶಿವರಾಮಯ್ಯ ಅವಿರೋಧ ಆಯ್ಕೆ

ಕಿಕ್ಕೇರಿ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲಗಾರರಲ್ಲದ ಕ್ಷೇತ್ರಕ್ಕೆ ಕೆ.ಎಸ್.ಶಿವರಾಮಯ್ಯ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 12 ಸ್ಥಾನಗಳ ಪೈಕಿ 1 ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದು, ಜ.12 ರಂದು ಉಳಿದ ಸಾಲಗಾರರ ಕ್ಷೇತ್ರದ 11 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇದ್ದಕ್ಕಾಗಿ 23 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಸಾಲಗಾರರಲ್ಲದ ಕ್ಷೇತ್ರದ ಒಂದು ಸ್ಥಾನಕ್ಕೆ 3 ಕೆ.ಎಸ್.ಶಿವರಾಮಯ್ಯ, ಗಜೇಂದ್ರ, ಮಂಜೇಗೌಡ ನಾಮಪತ್ರ ಸಲ್ಲಿಸಿದ್ದರು. ಗಜೇಂದ್ರ, ಮಂಜೇಗೌಡ ನಾಮಪತ್ರ ವಾಪಸ್ ಪಡೆದ ಕಾರಣ ಕೆ.ಎಸ್.ಶಿವರಾಮಯ್ಯ ಅವಿರೋಧವಾಗಿ ಆಯ್ಕೆಯಾದರು. ಸಾಲಗಾರ ಕ್ಷೇತ್ರದಲ್ಲಿ 3182 ಮತದಾರರಿದ್ದು, ಜ.12ರಂದು ಚುನಾವಣೆ ನಡೆಯಬೇಕಿದೆ. ಚುನಾವಣಾಧಿಕಾರಿಯಾಗಿ ಕೆ.ಆರ್. ಪೇಟೆ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಚ್.ಬಿ.ಭರತಕುಮಾರ್, ಸಹಾಯಕ ಚುನಾವಣಾಧಿಕಾರಿಯಾಗಿ ಸಿಇಒ ಕೆ.ಆರ್. ಪುಟ್ಟರಾಜು ಇದ್ದರು.