ಕನ್ನಡಪ್ರಭವಾರ್ತೆ ಪಾವಗಡ ನಗರ ಸ್ವಚ್ಛತೆ, ಸೌಂದರ್ಯ ಸೇರಿದಂತೆ ವಾರ್ಡ್ ಸಮಸ್ಯೆ ನಿವಾರಣೆಗೆ ಹೆಚ್ಚು ಆದ್ಯತೆ ನೀಡಿದ್ದು, ರೊಪ್ಪ ಸೇರಿದಂತೆ ಪಟ್ಟಣದ 1ರಿಂದ 5ನೇ ವಾರ್ಡ್‌ಗಳಿಗೆ ಮೊದಲನೇ ಹಂತವಾಗಿ ಒಟ್ಟು 3.53ಕೋಟಿ ರು. ವೆಚ್ಚದ ಕಾಮಗಾರಿಗಳ ಪ್ರಗತಿಗೆ ಗುದ್ದಲಿ ಪೂಜೆ ನೆರೆವೇರಿಸಲಾಗಿದೆ ಎಂದು ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಹೇಳಿದರು.
ವಿವಿಧ ಯೋಜನೆ ಅಡಿ ಹಂತಹಂತವಾಗಿ ಅಭಿವೃದ್ಧಿ ಪರ ಕೆಲಸ ಮಾಡುತ್ತಿದ್ದು, ನಗರ ಅಭಿವೃದ್ಧಿಗಾಗಿ ತಂದಿರುವ ಮುಖ್ಯಮಂತ್ರಿಗಳ ವಿಶೇಷ ಅನುದಾನ 17 ಕೋಟಿ 50 ಲಕ್ಷ ರು.ಗಳಲ್ಲಿ ಮೊದಲ ಹಂತವಾಗಿ ಇಂದು ಪುರಸಭಾ ವ್ಯಾಪ್ತಿಯ 1 ರಿಂದ 5 ವಾರ್ಡ್ ಗಳಲ್ಲಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ತ್ವರಿತ ಹಾಗೂ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಸಂಬಂಧ ಪಟ್ಟ ಭೂಸೇನಾ ಹಾಗೂ ಪುರಸಭೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಜನಾಶೀರ್ವಾದದ ಮೇರೆಗೆ ಶಾಸಕರಾಗಿದ್ದು, ತಂದೆ ವೆಂಕಟರಮಣಪ್ಪ ಅವರಂತೆ ನಾನು ಸಹ ತಾಲೂಕಿನ ಪ್ರಗತಿಗೆ ಬದ್ಧನಾಗಿದ್ದು, ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇನೆ. 35ಕೋಟಿ ವೆಚ್ಚದಲ್ಲಿ ನಾಗಲಮಡಿಕೆ ಶ್ರೀ ಸುಬ್ರಮಣ್ಯಸ್ವಾಮಿ ದೇವಸ್ಥಾನ ನವೀಕರಣಕ್ಕೆ ಡಿಪಿಆರ್ ಸಿದ್ದತೆ ಕೈಗೊಂಡಿದ್ದು ಅತಿ ಶೀಘ್ರ ದೇಗುಲದ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಗುತ್ತದೆ. ಮುಂದಿನ ವಾರದಲ್ಲಿ ತಲಾ 35ಕೋಟಿ ವೆಚ್ಚದಲ್ಲಿ ಕಾರ್ಮಿಕ ಹಾಗೂ ಅಲ್ಪ ಸಂಖ್ಯಾತರ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರೆವೇರಿಸಲಿದ್ದೇವೆ. ತುಂಗಭದ್ರಾ ಯೋಜನೆ ಪ್ರಗತಿ ರೈಲ್ವೆ ಕಾಮಗಾರಿ ಪ್ರಗತಿ ಸೇರಿದಂತೆ 33ಕೋಟಿ ವೆಚ್ಚದಲ್ಲಿ ಗ್ರಾಮೀಣ ಸಂಪರ್ಕ ಹಾಗೂ ತಾಲೂಕು ವ್ಯಾಪ್ತಿಯ ಪ್ರಧಾನ ರಸ್ತೆಗಳ ಗುಂಡಿ ಮುಚ್ಚಳ ಮತ್ತು ಡಾಂಬರೀಕರಣಕ್ಕೆ ಆದ್ಯತೆ ನೀಡಿ ಕೆಲಸ ಮಾಡಲಾಗುತ್ತಿದೆ ಎಂದರು.ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಸುದೇಶ್ ಬಾಬು,ಶಂಕರರೆಡ್ಡಿ,ಪಿ.ಎಚ್.ರಾಜೇಶ್,ವೇಲುರಾಜು, ರಾಮಾಂಜಿನಪ್ಪ, ,ನಾಗಭೂಷಣ್ ರೆಡ್ಡಿ, ಕಲ್ಪವೃಕ್ಷ ರವಿ, ವೆಂಕಟರಮಣಪ್ಪ,ಆರ್.ಎ.ಹನುಮಂತರಾಯಪ್ಪ,ಐ.ಜಿ.ನಾಗರಾಜ್, ಮೊಹಮ್ಮದ್ ಇಮ್ರಾನ್,ಸಿ.ಎನ್.ರವಿ ಕುಮಾರ್, ಗುಟ್ಟಹಳ್ಳಿ ಅಂಜಪ್ಪ, ನಾಮಿನಿ ಸದಸ್ಯ ಪಿ.ಎನ್.ರಾಮಲಿಂಗಪ್ಪ,ಅತ್ಲುರು ನರೇಶ್,ಲಕ್ಷ್ಮಿ ನರಸಪ್ಪ,ನಾಗಾರ್ಜುನ ರೆಡ್ಡಿ, ಎಸ್.ಎ.ಗಂಗಾಧರ್,ಬಾಲ ಸುಬ್ರಮಣ್ಯ, ಷಾ ಬಾಬು,ಪಾಂಡುರೆಡ್ಡಿ, ರಿಜ್ವಾನ್ ಉಲ್ಲಾ, ರಘುನಂದನ್,ಅನಿಲ್,ಮುಖ್ಯಾಧಿಕಾರಿ ಜಾಫರ್ ಷರೀಫ್, ಎಂಜಿನಿಯರ್ ಗಳಾದ ಮಹದೇವಪ್ಪ,ಯಂಜೇಶ್ ಬಾಬು ಸೇರಿ ಇನ್ನೂ ಅನೇಕ ಮುಖಂಡರು ಇದ್ದರು.