ಸಾರಾಂಶ
ಸಂಡೂರು: ಸಾಲುಮರದ ತಿಮ್ಮಕ್ಕನವರು ನೆಟ್ಟು ಬೆಳೆಸಿದ ಪ್ರತಿಯೊಂದು ಮರವೂ ಕೇವಲ ಮರವಷ್ಟೇ ಅಲ್ಲ. ಅದು ಭವಿಷ್ಯದ ಪೀಳಿಗೆಯನ್ನೂ ರಕ್ಷಿಸುವ ಸಂಜೀವಿನಿಯಾಗಿದೆ. ಅವರ ಪ್ರಕೃತಿ ಪ್ರೇಮ ಎಲ್ಲಾರಿಗೂ ಆದರ್ಶವಾಗಿದೆ ಎಂದು ಶಾಸಕಿ ಅನ್ನಪೂರ್ಣ ಈ ತುಕಾರಾಂ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ನುಡಿ ನಮನ ಸಲ್ಲಿಸಿದರು.ಪ್ರಕೃತಿಯನ್ನು ಕಾಪಾಡುವುದು ಪುಣ್ಯ ಹಾಗೂ ಮಾನವತ್ವದ ದೊಡ್ಡ ಕರ್ತವ್ಯವಾಗಿದೆ. ಸಾಲುಮರದ ತಿಮ್ಮಕ್ಕನವರ ಕಾರ್ಯ ಎಲ್ಲಾರಿಗೂ ದಾರಿದೀಪವಾಗಿದೆ. ಪರಿಸರ ಸಂರಕ್ಷಣೆಗೆ ತಮ್ಮ ಸಂಪೂರ್ಣ ಜೀವನವನ್ನೇ ಸಮರ್ಪಿಸಿದ ಸಾಲುಮರದ ತಿಮ್ಮಕ್ಕನವರ ಕಾರ್ಯ ನಮಗೆಲ್ಲ ಜೀವನ ಪಾಠವಾಗಿದೆ. ಅವರ ಆದರ್ಶಗಳನ್ನು ಮುಂದುವರೆಸುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ. ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿ ನಮ್ಮೆಲ್ಲರ ಕರ್ತವ್ಯವಾಗಿದೆ. ಸಾಲುಮರದ ತಿಮ್ಮಕ್ಕನವರು ತೋರಿದ ತ್ಯಾಗ, ಸರಳತೆ ಹಾಗೂ ಪ್ರಕೃತಿ ಪ್ರೇಮ ನಮ್ಮೆಲ್ಲರ ಹೃದಯದಲ್ಲಿ ಸದಾ ನೆಲೆಸಿರಲಿ ಎಂದು ತಿಳಿಸಿದರು.
ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿಯವರು ನುಡಿ ನಮನವನ್ನು ಸಲ್ಲಿಸಿದರು.ಶಾಸಕರು ಕಾರ್ಯಕ್ರಮದ ಅಂಗವಾಗಿ ಗುರುಭವನದ ಆವರಣದಲ್ಲಿ ಗಿಡನೆಟ್ಟು ನೀರೆರೆದರಲ್ಲದೆ, ಎಲ್ಲಾ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳ ಆವರಣದಲ್ಲಿ ಗಿಡ ನೆಡುವ ಮೂಲಕ ಸಾಲುಮರದ ತಿಮ್ಮಕ್ಕನವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಕೆ. ವೆಂಕಟೇಶ್, ಡಾ. ವಲಿಬಾಷ, ವಲಯ ಅರಣ್ಯಾಧಿಕಾರಿ ಬಿ.ಎಸ್. ಮಂಜುನಾಥ್, ಬಿಆರ್‌ಪಿ ಮಂಜುನಾಥ್ ಹಾದಿಮನಿ, ಮುಖಂಡರಾದ ಆಶಾಲತಾ ಸೋಮಪ್ಪ, ಸರ್ಕಾರಿ ಬಾಲಕಿಯರ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.;Resize=(128,128))
;Resize=(128,128))