ಭಾರತ ದೇಶದ ಸನಾತನ ಧರ್ಮವನ್ನು ಉಳಿಸುತ್ತಿರುವುದು ಮಠ-ಮಂದಿರಗಳಾಗಿವೆ. ಚನ್ನಗಿರಿ ಪಟ್ಟಣದಲ್ಲಿರುವ ಹಿರೇಮಠ ಮತ್ತು ವಿರಕ್ತ ಮಠವು ಹಿಂದೂ ಧರ್ಮದ ಎಲ್ಲ ಆಚರಣೆಗಳನ್ನು ಮಾಡುತ್ತಾ ಧರ್ಮ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದ್ದಾರೆ.
- ಹಿರೇಮಠದ ಕಡೆ ಕಾರ್ತಿಕೋತ್ಸವದಲ್ಲಿ ಮಾಜಿ ಶಾಸಕ ವಿರೂಪಾಕ್ಷಪ್ಪ ಅಭಿಮತ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಭಾರತ ದೇಶದ ಸನಾತನ ಧರ್ಮವನ್ನು ಉಳಿಸುತ್ತಿರುವುದು ಮಠ-ಮಂದಿರಗಳಾಗಿವೆ. ಚನ್ನಗಿರಿ ಪಟ್ಟಣದಲ್ಲಿರುವ ಹಿರೇಮಠ ಮತ್ತು ವಿರಕ್ತ ಮಠವು ಹಿಂದೂ ಧರ್ಮದ ಎಲ್ಲ ಆಚರಣೆಗಳನ್ನು ಮಾಡುತ್ತಾ ಧರ್ಮ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು. ಭಾನುವಾರ ಸಂಜೆ ಪಟ್ಟಣದ ಹಿರೇಮಠದ ಆವರಣದಲ್ಲಿ ಕಡೆ ಕಾರ್ತಿಕೋತ್ಸವ ಕಾರ್ಯಕ್ರಮದ ದೀಪಗಳನ್ನು ಬೆಳಗಿಸಿ ಅವರು ಮಾತನಾಡಿದರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಶೈವ ಧರ್ಮವನ್ನು ಪ್ರಚಾರ ಮಾಡಿದ ರೇಣುಕಾರಾಧ್ಯ ಪಂಚಾಚಾರ್ಯರ ಶಿಷ್ಯರಾಗಿದ್ದ ಶಂಕರಾಚಾರ್ಯರು ಶೈವ ಧರ್ಮವನ್ನು ಪ್ರಚಾರ ಮಾಡಿದವರು ಎಂದರು.ರಾಮಾಯಣ, ಮಹಾಭಾರತದ ಕಾಲದಿಂದಲೂ ಶೈವಧರ್ಮ ಆಚರಣೆಯಲ್ಲಿದೆ. 12ನೇ ಶತಮಾನದಲ್ಲಿ ಬ್ರಾಹ್ಮಣರನ್ನು ಬಿಟ್ಟರೆ ಉಳಿದ ಎಲ್ಲರೂ ಶೂದ್ರರಾಗಿದ್ದರು. ದೇವಾಲಯಗಳಿಗೆ ಬ್ರಾಹ್ಮಣರನ್ನು ಬಿಟ್ಟರೆ ಬೇರೆಯವರಿಗೆ ಪ್ರವೇಶವಿರಲಿಲ್ಲ. ಆಗ ಜಗಜ್ಯೋತಿ ಬಸವೇಶ್ವರ ಅವರು ನಮ್ಮ ದೇವರನ್ನು ನಾವೇ ಪೂಜೆ ಮಾಡಬಹುದು ಎಂದು ಅಂಗದ ಮೇಲೆ ಲಿಂಗವನ್ನು ಇಟ್ಟು ಪೂಜೆ ಮಾಡಲು ತಿಳಿಸಿ, ಶೈವ ಧರ್ಮವನ್ನು ಮತ್ತಷ್ಟು ಪ್ರಚುರಪಡಿಸಿದರು ಎಂದರು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವಜಯಚಂದ್ರ ಮಹಾಸ್ವಾಮೀಜಿ ವಹಿಸಿ ಮಾತನಾಡಿ, ಮಠ-ಮಂದಿರಗಳಿಗೆ ಭೇಟಿ ನೀಡುವುದರಿಂದ ಮನುಷ್ಯನ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯಲಿದೆ. ಮನಸ್ಸಿನ ಕತ್ತಲೆಯನ್ನು ಹೊಡೆದೋಡಿಸುವ ತಾಣಗಳು ಮಠ-ಮಂದಿರಗಳಾಗಿವೆ ಎಂದರು.ಮಾಡಾಳು ವಿರೂಪಾಕ್ಷಪ್ಪ ಶಾಸಕರಾಗಿದ್ದ ಸಂದರ್ಭದಲ್ಲಿ ಕ್ಷೇತ್ರದಲ್ಲಿರುವ ಎಲ್ಲ ದೇವಾಲಯ-ಮಠಗಳಿಗೆ ಅನುದಾನ ನೀಡುವ ಜೋತೆಗೆ, ಚನ್ನಗಿರಿ ಪಟ್ಟಣ ಸೇರಿದಂತೆ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಶಾಶ್ವತ ಕುಡಿಯುವ ನೀರು, ಕೆರೆ-ಕಟ್ಟೆಗಳನ್ನು ತುಂಬಿಸುವಂತಹ ಏತನೀರಾವರಿ ಯೋಜನೆಗಳು ಹಾಗೂ ಬಡಜನರು ಶುಭ- ಸಮಾರಂಭಗಳನ್ನು ಮಾಡಿಕೊಳ್ಳಲು ಸುಸಜ್ಜಿತ ಸಮುದಾಯ ಭವನಗಳನ್ನು ನಿರ್ಮಿಸಿದ್ದರಿಂದ ಕ್ಷೇತ್ರದಲ್ಲಿ ಮಾಡಾಳು ವಿರೂಪಾಕ್ಷಪ್ಪನವರ ಹೆಸರು ಶಾಶ್ವತವಾಗಿ ಉಳಿದಿದೆ ಎಂದರು.
ಸಮಾರಂಭದ ನೇತೃತ್ವವನ್ನು ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.ಮುಖ್ಯ ಅಥಿತಿ, ವೀರಶೈವ ಸಮಾಜ ಪ್ರಮುಖರಾದ ರಾಜಶೇಖರಯ್ಯ, ಸಾಗರದ ಶಿವಲಿಂಗಪ್ಪ, ಎಚ್.ಬಿ.ರುದ್ರಯ್ಯ, ಚಂದ್ರಯ್ಯ, ಎಲ್.ಎಂ. ರೇಣುಕಾ, ಜವಳಿ ಮಹೇಶ್, ಚ.ಮ. ಗುರುಸಿದ್ದಯ್ಯ, ಬೂದಿಸ್ವಾಮಿ, ಕಮಲಾ ಹರೀಶ್, ಜ್ಯೋತಿ ಕೊಟ್ರೇಶ್ ಕೋರಿ, ರೂಪ ಮುರುಡೇಶ್, ನಾಗೇಂದ್ರಯ್ಯ, ವಿಶ್ವಮಾನವ ಹಕ್ಕು ಸೇವಾ ಪ್ರತಿಷ್ಠಾನ ಅಧ್ಯಕ್ಷ ಚಿಕ್ಕೋಲಿಕೆರೆ ನಾಗೇಂದ್ರಪ್ಪ, ಪ್ರವಚನಕಾರ ಮಹಾಂತೇಶ ಶಾಸ್ತ್ರಿ, ಕೆ.ಪಿ.ಎಂ. ಶಿವಲಿಂಗಸ್ವಾಮಿ ಸೇರಿದಂತೆ ಭಕ್ತರು ಭಾಗವಹಿಸಿದ್ದರು.
- - -(ಕೋಟ್) ಚನ್ನಗಿರಿ ಪಟ್ಟಣದಲ್ಲಿರುವ ಹಾಲಸ್ವಾಮಿ ಹಿರೇಮಠ ಮತ್ತು ವಿರಕ್ತ ಮಠಗಳು ಈ ಭಾಗದ ಜನರ ಎರಡು ಕಣ್ಣುಗಳಂತೆ ಇವೆ. ಪ್ರಾಪಂಚಿಕ ಜಂಜಾಟದಲ್ಲಿ ನೊಂದು, ಬೆಂದು ಬಂದ ಜನರ ಮನಸ್ಸಿಗೆ ಶಾಂತಿ ನೀಡುವ ಆಧ್ಯಾತ್ಮಿಕ ಕೇಂದ್ರಗಳಾಗಿವೆ.
- ಮಾಡಾಳು ವಿರೂಪಾಕ್ಷಪ್ಪ, ಮಾಜಿ ಶಾಸಕ.- - -
-8ಕೆಸಿಎನ್‌ಜಿ2.ಜೆಪಿಜಿ:ಚನ್ನಗಿರಿ ಪಟ್ಟಣದ ಹಿರೇಮಠದ ಆವರಣದಲ್ಲಿ ಕಡೇ ಕಾರ್ತಿಕೋತ್ಸವ ಆಚರಣೆಯಲ್ಲಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಹಾಲಸ್ವಾಮಿ ವಿರಕ್ತ ಮಠದ ಶ್ರೀ, ಹಿರೇಮಠದ ಶ್ರೀ ಹಾಗೂ ಭಕ್ತರು ದೀಪಗಳನ್ನು ಬೆಳಗಿಸಿದರು.