ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಮೀಣ ಭಾಗದ ಕಬ್ಬು ಬೇಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಿಡಕಲ್ ಡ್ಯಾಂ ವಲಯದಲ್ಲಿ ಷೇರು ಸಂಗ್ರಹ ಕಾರ್ಯ ಪ್ರಾರಂಭಿಸಿ ಅಂದಿನಿಂದ ಇಂದಿನವರೆಗೂ ಹಲವಾರು ಏರುಪೇರುಗಳ ನಡುವೆಯೂ ಕಾರ್ಖಾನೆ ಆರಂಭಿಸಿ ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡಿಕೊಂಡು ಸಂಗಮ ಸಕ್ಕರೆ ಕಾರ್ಖಾನೆ ಮುನ್ನಡೆದಿದೆ ಎಂದು ಶ್ರೀ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ಹೇಳಿದರು.ಸಮೀಪದ ಹಿಡಕಲ್ ಡ್ಯಾಂ ವಲಯದಲ್ಲಿನ ಶ್ರೀ ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಈ ವರ್ಷ ಉತ್ತಮ ಮಳೆಯಾಗಿದ್ದರಿಂದ 2024-2025ನೇ ಸಾಲಿನ ಹಂಗಾಮಿಗೆ 3.50 ಲಕ್ಷ ಮೆ.ಟನ್ ಕಬ್ಬ ನುರಿಸುವ ಗುರಿ ಹೊಂದಲಾಗಿದೆ. ರೈತರು ಪೂರ್ಣ ಪ್ರಮಾಣದದಲ್ಲಿ ನಮ್ಮ ಕಾರ್ಖಾನೆಗೆ ಕಬ್ಬು ಕುಳಹಿಸಿ ಗುರಿ ಸಾಧಿಸಲು ಸಹಕರಿಸಬೇಕು. ಕಾರ್ಖಾನೆ 2023-24ನೇ ಹಂಗಾಮಿಗೆ ಕೇಂದ್ರ ಸರ್ಕಾರ ಟನ್ ಕಬ್ಬಿಗೆ ಸಾಗಾಣಿಗೆ, ಕಟಾವು ವೆಚ್ಚ ಸೇರಿ ₹3589 ದರ ಎಫ್‌ಆರ್ ಪಿ ದರ ನಿಗದಿಪಡಿಸಿದೆ. ನಮ್ಮ ಕಾರ್ಖಾನೆ ಟನ್ ಗೆ ₹3795.21 ಪಾವತಿಸಿದೆ. ಕೇಂದ್ರ ಸರ್ಕಾರ ನಿಗಿದಪಡಿಸಿದ ದರಕ್ಕಿಂತಲೂ ₹206.21. ರೈತರಿಗೆ ಹೆಚ್ಚಿಗೆ ದರ ಪಾವತಿಸಲಾಗಿದೆ ಎಂದು ಹೇಳಿದರು.
ಆಡಳಿತ ಮಂಡಳಿಯವರು, ನಿರ್ದೇಶಕರು ತಮ್ಮ ಆಸ್ತಿಗಳನ್ನು ಅಡಮಾನ ಇಟ್ಟು ಬ್ಯಾಂಕುಗಳಲ್ಲಿ ಸಾಲ ಪಡೆದು ಕಾರ್ಖಾನೆ ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಮಾದರಿಯಾಗಬೇಕೆಂಬ ಮಹಾದಾಸೆ ಇಟ್ಟಿಕೊಂಡಿದ್ದು. ಕಾರ್ಖಾನೆಯ ಆರ್ಥಿಕವಾಗಿ ಅಭಿವೃದ್ಧಿಗೆ ರೈತರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಕಾರ್ಖಾನೆ ಆರ್ಥಿಕವಾಗಿ ಸದೃಢವಾಗುವುದಕ್ಕೆ ಪ್ರಥಮ ಹಂತದಲ್ಲಿ 8. ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುವ ಘಟಕ ಹೊಂದಿದ್ದು, 2023-24ನೇ ಸಾಲಿನ ಹಂಗಾಮಿನಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭಿಸಲಾಗಿದೆ. ಈ ಹಂಗಾಮಿನಲ್ಲಿ 1.86.84.145 ಯುನಿಟ್ ವಿದ್ಯುತ್ ಉತ್ಪಾದಿಸಲಾಗಿದ್ದು, ಅದರಲ್ಲಿ ಕಾರ್ಖಾನೆಗೆ ಬೇಕಾದಷ್ಟು ಉಪಯೋಗಿಸಿಕೊಂಡು 1.01.83.500 ಯುನಿಟ್‌ಗಳಷ್ಟು ರಾಜ್ಯ ಸರ್ಕಾರ ನಿರ್ದೇಶನದಂತೆ ಹೆಸ್ಕಾಂಗಳಿಗೆ ಪ್ರತಿ ಯುನಿಟಗೆ ₹4.86 ದರದಂತೆ ಮಾರಾಟ ಮಾಡಲಾಗಿದೆ. ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ಉತ್ಪಾದಿಸಲಾದ ಹೆಚ್ಚುವರಿ ವಿದ್ಯುತ್ ಸರ್ಕಾರ ಖರೀದಿಸದಿದ್ದಲ್ಲಿ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ಟೆಂಡರ್ ಕರೆಯಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಹೇಳಿದರು.
ಕಾರ್ಖಾನೆಗೆ ₹50 ಕೋಟಿ+₹177 ಕೊಟಿಯಷ್ಟು ಸಾಲದ ಅಗತ್ಯವಿದೆ. ಇದಕ್ಕಾಗಿ ಅ ವರ್ಗದ ₹5000 ಷೇರಿನ ಮುಖಬೆಲೆಯನ್ನು₹10 ಸಾವಿರಕ್ಕೆ ಹೆಚ್ಚಿಸಿ ಸರ್ಕಾರದಿಂದ ಮಂಜೂರಾತಿ ಪಡೆಯಲಾಗಿದೆ. ಬ ವರ್ಗ ಸದಸ್ಯರ ಷೇರು ಬೆಲೆ ₹2000 ಸಾವಿರದಿಂದ ₹ 3000ಕ್ಕೆ ಹೆಚ್ಚಿಸಲಾಗಿದ್ದು ಸಹಕರಿಸಬೇಕೆಂದರು,ವ್ಯವಸ್ಥಾಪಕ ನಿರ್ದೇಶಕ ರವಿಂದ್ರ ಪಾಟೀಲ, ವರದಿ ಮಂಡಿಸಿ ಮಾತನಾಡಿ, 26898 ಸದಸ್ಯರ ಮತ್ತು ಸಹಕಾರ ಸಂಘಗಳಿಂದ ಸಂಗ್ರಹಿಸಿದ ₹7.88.08.200 ಕೊಟಿ, ರಾಜ್ಯ ಸರ್ಕಾರದಿಂದ 15 ಕೊಟಿ. ಒಟ್ಟು ₹22.88.08.200 ಷೇರು ಬಂಡವಾಳ ಹೊಂದಿದೆ. ಎಂದರು.
ನಿರ್ದೇಶಕರಾದ ಶಶಿಕಾಂತ ನಾಯಿಕ, ಅಣ್ಣಾಸಾಹೇಬ ಪರ್ವತರಾವ, ಅರ್ಜುನನಾಯ್ಕ ಪಾಟೀಲ, ಸುಭಾಸ ಪಾಟಿಲ, ಸಂಗೀತಾ ಕರಗುಪ್ಪಿ, ರಾಜಶ್ರೀ ಕವಟಗಿಮಠ, ಬಸಗೌಡ ಪಾಟೀಲ, ಜಿ.ಎಂ.ಪಾಟೀಲ, ಶ್ರೀಮಂತ ಸನ್ನಾಯಿಕ,ಅಮರನಾಥ ಮಹಾಜನಶೆಟ್ಟಿ, ಶಿವಪ್ಪಾ ಘಸ್ತಿ, ರವೀಂದ್ರ ಪಾಟೀಲ, ಲಗಮಣ್ಣಾಕೆಂಪಮಲಕಾರಿ, ಸಂಪತ ಬಾಂಧುರ್ಗೆ,ಗಿರೀಶ ಮೀಶ್ರಕೋಟಿ ಮತ್ತು ವಿವಿಧ ಸಂಘ ಸಂಸ್ಥೆಗಳ ಜನಪ್ರತಿನಿಧಿಗಳು, ನಿರ್ದೇಶಕ ಬಿ.ಬಿ.ಪಾಟೀಲ ಸ್ವಾಗತಿಸಿ ಅಣ್ಣಪ್ಪಾ ಅಕ್ಕತಂಗೇರಹಾಳ ನಿರೂಪಿಸಿ ದುರದುಂಡಿ ಭರಮಗೌಡರ ವಂದಿಸಿದರು.