ರಾಷ್ಟ್ರೀಯ ಸ್ವಯಂ ಸೇವಕ ಸಂಘ ೧೦೦ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಸಂಘದಿಂದ ನವೋದಯ ವಿದ್ಯಾಸಂಘದ ಆವರಣದಲ್ಲಿ ಆಯೋಜಿಸಿದ್ದ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಸಮಾಜದ ಎಲ್ಲ ಸ್ತರಗಳನ್ನೂ ತಲುಪುವುದು ಸಂಘದ ಉದ್ದೇಶವಾಗಿದೆ. ಯುವಕರು ಈ ನಿಟ್ಟಿನಲ್ಲಿ ಸಂಘವನ್ನು ಜಾಸ್ತಿಯಾಗಿ ನಮ್ಮ ಪಾಲಿನ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಸಂಯಮಗಳನ್ನು ರೂಢಿಸಿಕೊಳ್ಳಬೇಕು. ವಿಷಯಗಳ ವಿಶ್ಲೇಷಣೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಚನ್ನರಾಯಪಟ್ಟಣ: ಹಿಂದೂ ಎನ್ನುವುದು ನಮ್ಮ ಜೀವನ ಪದ್ಧತಿಯಾಗಿದೆ. ಇದನ್ನು ಅನುಸರಿಸುವ ಮೂಲಕ ರಾಷ್ಟ್ರಪ್ರೇಮ, ಸಂಘಟನೆಯನ್ನು ಬಲಿಷ್ಠಗೊಳಿಸೋಣ ಎಂದು ವಾಗ್ಮಿ ಸಿ.ಎನ್. ಸುಬ್ಬಣ್ಣ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ೧೦೦ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಸಂಘದಿಂದ ನವೋದಯ ವಿದ್ಯಾಸಂಘದ ಆವರಣದಲ್ಲಿ ಆಯೋಜಿಸಿದ್ದ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಸಮಾಜದ ಎಲ್ಲ ಸ್ತರಗಳನ್ನೂ ತಲುಪುವುದು ಸಂಘದ ಉದ್ದೇಶವಾಗಿದೆ. ಯುವಕರು ಈ ನಿಟ್ಟಿನಲ್ಲಿ ಸಂಘವನ್ನು ಜಾಸ್ತಿಯಾಗಿ ನಮ್ಮ ಪಾಲಿನ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಸಂಯಮಗಳನ್ನು ರೂಢಿಸಿಕೊಳ್ಳಬೇಕು. ವಿಷಯಗಳ ವಿಶ್ಲೇಷಣೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಹಾಸನ ವಿಭಾಗ ಬೌದ್ಧಿಕ್ ಪ್ರಮುಖ್ ಭರತ್ ರೆಡ್ಡಿ ಮಾತನಾಡಿ ಸಂಸ್ಕಾರದ ಕೊರತೆಯಿಂದ ಇಂದಿನ ಯುವಶಕ್ತಿ ಸಮಾಜಕ್ಕೆ ಮಾರಕವಾಗುತ್ತಿದೆ. ಒಳ್ಳೆಯ ತನಗಳನ್ನು ರಾಷ್ಟ್ರಕಾರ್ಯಕ್ಕೆ ತೊಡಗಿಸಬೇಕು. ಯಾವುದೇ ರಾಷ್ಟ್ರದ ಪ್ರಗತಿ, ದುರ್ಗತಿಗೆ ಅಲ್ಲಿನ ಯುವಶಕ್ತಿಯ ಕೊಡುಗೆ ಇರುತ್ತದೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯಾವುದೇ ಮಹನೀಯರೂ ರಾಜಕೀಯ ಅಧಿಕಾರದ ಉದ್ದೇಶ ಹೊಂದಿರಲಿಲ್ಲ, ಸಂಘಕ್ಕೆ ನೂರು ವರ್ಷ ಸಂದ ಹಿನ್ನೆಲೆಯಲ್ಲಿ ೭ ಪ್ರಮುಖ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅದರಲ್ಲಿ ಯುವ ಸಮಾವೇಶವೂ ಒಂದಾಗಿದೆ ಎಂದರು. ಸಂಘದ ನಗರ ಸಂಚಾಲಕ ಡಾ.ಸಿ.ಎಸ್.ಶೇಷಶಯನ, ಗ್ರಾಮಾಂತರ ಸಂಚಾಲಕ ಎ.ಎನ್.ಮಂಜೇಗೌಡ ಇದ್ದರು.