ಮುಧೋಳ ತಾಲೂಕಿಗೆ ಸಂಜನಾ ಪಾಟೀಲ ಪ್ರಥಮ

| Published : May 04 2025, 01:36 AM IST

ಸಾರಾಂಶ

ನಾಗರಬೆಟ್ಟದ ಆಕ್ಸ್ಫಷರ್ಡ್ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮುಧೋಳ ತಾಲೂಕಿನ ಪೆಟ್ಲೂರ ಗ್ರಾಮದ ಸಂಜನಾ ಗೌಡಪ್ಪಗೌಡ ಪಾಟೀಲ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.98.72ರಷ್ಟು ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.

ಕನ್ನಡಪ್ರಭ ವಾರ್ತೆ ಮುಧೋಳ

ನಾಗರಬೆಟ್ಟದ ಆಕ್ಸ್ಫಷರ್ಡ್ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮುಧೋಳ ತಾಲೂಕಿನ ಪೆಟ್ಲೂರ ಗ್ರಾಮದ ಸಂಜನಾ ಗೌಡಪ್ಪಗೌಡ ಪಾಟೀಲ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.98.72ರಷ್ಟು ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.

ರೈತಾಪಿ ಕುಟುಂಬದ ಹಿನ್ನೆಲೆ ಹೊಂದಿರುವ ಸಂಜನಾ ಪಾಟೀಲಳ ಸಾಧನೆಗೆ ಕುಟುಂಬದ ಸದಸ್ಯರು ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು. ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದ್ದಾರೆ. ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯ-125, ಇಂಗ್ಲಿಷ್ ವಿಷಯ-99, ಹಿಂದಿ ವಿಷಯ-100, ಗಣಿತ ವಿಷಯ- 96, ವಿಜ್ಞಾನ ವಿಷಯ-97, ಸಮಾಜ ವಿಜ್ಞಾನ ವಿಷಯದಲ್ಲಿ 100 ಒಟ್ಟು 617 ಅಂಕಗಳಿಸಿ ಕುಟುಂಬಕ್ಕೆ ಮತ್ತು ಪೆಟ್ಲೂರ ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.

ಕೃಷಿ ಕೆಲಸ ಮಾಡಿ ಜೀವನ ನಡೆಸುವ ತಂದೆ ಗೌಡಪ್ಪಗೌಡ, ತಾಯಿ ರುಕ್ಮೀಣಿ ಮತ್ತು ಕುಟುಂಬಸ್ಥರು ಸಂಜನಾಳ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಶಿಕ್ಷಕರು ಮತ್ತು ಪಾಲಕರು ಹಾಗೂ ಸಹಪಾಠಿಗಳು ನೀಡಿದ ಪ್ರೋತ್ಸಾಹವೇ ನನ್ನ ಈ ಸಾಧನೆಗೆ ಕಾರಣ. ನನ್ನ ನಿರೀಕ್ಷೆಯಂತೆ ಫಲಿತಾಂಶ ಬಂದಿದೆ, ಮುಂದೆ ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡುತ್ತ ಐಎಎಸ್ ಆಗುವ ಗುರಿ ಹೊಂದಿದ್ದೇನೆ, ಈಗಿನಿಂದಲೇ ಪರಿಶ್ರಮದಿಂದ ಇನ್ನಷ್ಟು ಓದುತ್ತೇನೆ.

- ಸಂಜನಾ ಗೌಡಪ್ಪಗೌಡ ಪಾಟೀಲ, ಎಸ್ಎಸ್ಎಲ್ಸಿ ಸಾಧಕ ವಿದ್ಯಾರ್ಥಿನಿ