ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕಾರ್ಮಿಕರು, ಅಧಿಕಾರಿಗಳು ತಾವು ದುಡಿಯುವ ಸಂಸ್ಥೆಗಳು ಹಾಗೂ ಇಲಾಖೆಗಳಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಆ ಸಂಸ್ಥೆಗಳು ಅಭಿವೃದ್ಧಿಯತ್ತ ಸಾಗಲಿವೆ ಎಂದು ಸೆಸ್ಕ್ ಇಇ ವೈ.ಆರ್.ವಿನುತಾ ಹೇಳಿದರು.ಪಟ್ಟಣದ ಸಪ್ತಪದಿ ಕನ್ವೆನ್ಸನ್ ಹಾಲ್‌ನಲ್ಲಿ ಸೆಸ್ಕ್‌ನಿಂದ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕರ ಸಂರಕ್ಷಣೆಗಾಗಿ ಹಲವು ಯೋಜನೆ ಜಾರಿಗೆ ತಂದರು ಎಂದರು.
ಕಾರ್ಮಿಕ ದಿನಾಚರಣೆ ಅಂಗವಾಗಿಯೇ ಕಾರ್ಮಿಕರ ಕೆಲಸದ ಅವಧಿಯನ್ನು 14 ಗಂಟೆಗಳಿಂದ 8 ಗಂಟೆಗೆ ಇಳಿಕೆ ಮಾಡಿದರು. ಅಲ್ಲದೇ, ಮಹಿಳೆಯರಿಗೆ ಹೆರಿಗೆ ರಜೆ, ಪಿಎಫ್, ಇಎಸ್‌ಐ ಸೇರಿದಂತೆ ಹಲವು ಸೌಲಭ್ಯ ಜಾರಿಗೆ ತಂದು ಅನುಕೂಲ ಮಾಡಿಕೊಟ್ಟರು ಎಂದರು.ಇಲಾಖೆ, ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಹಾಗೂ ಸೇವಾ ಅವಧಿಯಲ್ಲಿ ಅಕಾಲಿಕ ಮರಣ ಹೊಂದಿದ ನೌಕರರ ಕುಟುಂಬಗಳನ್ನು ಗೌರವಿಸುವುದೆ ಕಾರ್ಮಿಕ ದಿನಾಚರಣೆ ಮುಖ್ಯ ಉದ್ದೇಶ. ಆದರೆ, ಅಂತಹ ಕೆಲಸವನ್ನು ನಾವೆಲ್ಲರು ಮರೆತಿದ್ದೇವೆ. ಇಂದಿನಿಂದಲೆ ಎಲ್ಲರೂ ಜತೆಗೂಡಿ ಕಾರ್ಮಿಕರನ್ನು ಗೌರವಿಸುವ ಕೆಲಸ ಮಾಡೋಣ ಎಂದರು.
ಕಾರ್ಮಿಕರಿಗಾಗಿ ಸರ್ಕಾರಗಳು ಹಲವು ಸೌಲಭ್ಯ ಜಾರಿಗೊಳಸಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ಕಾರ್ಮಿಕರು ತಾವು ಕೆಲಸ ಮಾಡುವ ವೇಳೆ ಎಚ್ಚರಿಕೆ ವಹಿಸಿ ಕುಟುಂಬ ಹಾಗೂ ಸಾರ್ವಜನಿಕರ ರಕ್ಷಣೆ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದರು.ಇದೇ ವೇಳೆ ಸೆಸ್ಕ್‌ನಲ್ಲಿ ಸುರಕ್ಷಿತ ಸಾಧನ ಹಾಗೂ ರಕ್ಷಣ ಕಿಟ್‌ಗಳನ್ನು ವಿತರಿಸಲಾಯಿತು. ಜತೆಗೆ ಉತ್ತಮ ಸೇವೆ ಸಲ್ಲಿಸಿದ ಕಾರ್ಮಿಕರನ್ನು ಸನ್ಮಾನಿಸಿ ಅಭಿನಂಸಲಾಯಿತು. ಈ ಸಂದರ್ಭದಲ್ಲಿ ಲೆಕ್ಕಾಧಿಕಾರಿ ಆರ್.ಮಹದೇವಪ್ಪ, ಎಇಇಗಳಾದ ಕೆ.ರವಿಕುಮಾರ್, ಪ್ರಶಾಂತ್‌ಕುಮಾರ್, ಪ್ರಭಾರ ಎಇಇ ಸಂಪತ್‌ಕುಮಾರ್, ಎಇಗಳಾದ ಜಿ.ಸುಷ್ಮಾ, ವಿ.ವರ್ಷಿತಾ, ಎಂ.ಎನ್.ರೂಪಿಣಿ, ಪ್ರದೀಪ್‌ಕುಮಾರ್, ಜೆಇಗಳಾದ ಕೆ.ಆರ್.ರಾಜು, ಜುನೇದ್‌ಪಾಷ, ವೈ.ಕೆ.ಶೀನಾ, ಮುರಳಿ, ನವೀನ್‌ಕುಮಾರ್, ಸಂತೋಷ್, ಪಲ್ಲವಿ, ಶಿಲ್ಪಾ, ಸಿಇಸಿಗಳಾದ ಎ.ಬಿ.ಕಿರಣ್ ಕುಮಾರ್, ಸುರೇಂದ್ರಮೋಹನ್, ಸುರೇಶ್, 466 ಸ್ಥಳೀಯ ಸಮಿತಿ ಅಧ್ಯಕ್ಷ ಟಿ.ರಾಜು, 659 ಸ್ಥಳೀಯ ಸಮಿತಿ ಅಧ್ಯಕ್ಷ ದೇವರಾಜು, ಕಾರ್ಯದರ್ಶಿಗಳಾದ ಸಂತೋಷ್, ಎನ್.ರಘು, ಕೆ.ಸತೀಶ್, ಮೆಕ್ಯಾನಿಕ್-2 ಸುರೇಶ್, ಹನುಮಂತಪ್ಪ, ವಿದ್ಯಾ ಸೇರಿದಂತೆ ಹಲವರು ಹಾಜರಿದ್ದರು.