ಸಾರಾಂಶ
ಸಂಸ್ಕೃತ ಭಾರತೀ ಮಂಗಳೂರು ಇದರ ವತಿಯಿಂದ ನಡೆಸಲಾದ ದಶ ದಿನ ಸಂಸ್ಕೃತ ಸಂಭಾಷಣಾ ಕಾರ್ಯಕ್ರಮ ಭಾನುವಾರ ಸಮಾಪನಗೊಂಡಿತು. ನಗರದ ಥಿಯೋಸಾಫಿಕಲ್ ಸೊಸೈಟಿಯಲ್ಲಿ ನಿರಂತರ 10 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ 30ಕ್ಕೂ ಮಿಕ್ಕಿ ವಿವಿಧ ವಯೋಮಾನದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಸಂಸ್ಕೃತ ಭಾರತೀ ಮಂಗಳೂರು ಇದರ ವತಿಯಿಂದ ನಡೆಸಲಾದ ದಶ ದಿನ ಸಂಸ್ಕೃತ ಸಂಭಾಷಣಾ ಕಾರ್ಯಕ್ರಮ ಭಾನುವಾರ ಸಮಾಪನಗೊಂಡಿತು. ನಗರದ ಥಿಯೋಸಾಫಿಕಲ್ ಸೊಸೈಟಿಯಲ್ಲಿ ನಿರಂತರ 10 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ 30ಕ್ಕೂ ಮಿಕ್ಕಿ ವಿವಿಧ ವಯೋಮಾನದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸಮಾರೋಪ ಸಮಾರಂಭದಲ್ಲಿ ಲೆಕ್ಕ ಪರಿಶೋಧಕ ಎಸ್.ಎಸ್.ನಾಯಕ್ ಮಾತನಾಡಿ, ಸಂಸ್ಕೃತ ಭಾಷೆ ಭಾರತದ ಅಸ್ಮಿತೆ. ವೇದಗಳು, ಪುರಾಣಗಳು, ಉಪನಿಷತ್ತುಗಳು, ರಾಮಾಯಣ ಮಹಾಭಾರತದಂತಹ ಮಹಾ ಗ್ರಂಥಗಳು ಸಂಸ್ಕೃತದಲ್ಲಿ ಇದ್ದು ಅವೇ ನಮ್ಮ ಸಂಪತ್ತು. ಹಲವು ಸುಭಾಷಿತಗಳನ್ನು ನಿರರ್ಗಳವಾಗಿ ಹೇಳಿದ ಅವರು ತಮ್ಮ ಜೀವನದಲ್ಲಿ ಸಂಸ್ಕೃತ ಬಹಳಷ್ಟು ಪರಿಣಾಮ ಬೀರಿದ್ದನ್ನು ವಿವರಿಸಿದರು.
ಮುಖ್ಯ ಭಾಷಣಕಾರರಾಗಿದ್ದ ಸಂಸ್ಕೃತ ವಿದ್ವಾನ್ ಡಾ.ಮಧುಕೇಶ್ವರ ಶಾಸ್ತ್ರಿಯವರು, ಸಂಸ್ಕೃತ ನಮ್ಮ ಮೂಲ ಮಾತೃ ಭಾಷೆ. ಕೇವಲ ಒಂದು ಸುಭಾಷಿತ ಇದ್ದರೆ ನಾವು ಒಂದು ಗಂಟೆ ಉಪನ್ಯಾಸ ಮಾಡಬಹುದು. ಅದು ಸಂಸ್ಕೃತದ ಶಕ್ತಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಥಿಯೋಸಾಫಿಕಲ್ ಸೊಸೈಟಿಯ ಅಧ್ಯಕ್ಷ ನರಸಿಂಹ ಶೆಟ್ಟಿ, ಸಂಸ್ಕೃತ ಭಾಷಾ ಕಲಿಕೆಯ ಮಹತ್ವ ತಿಳಿಸಿ, ವಿದ್ಯಾರ್ಥಿಗಳು ಸಂಭಾಷಣಾ ಶಿಬಿರದಲ್ಲಿ ಭಾಗವಹಿಸಿ ಮುಂದಕ್ಕೆ ಸಂಸ್ಕೃತ ಎಂ.ಎ. ಮಾಡಲು ಸಲಹೆ ನೀಡಿದರು.
ಶಿಬಿರದ ಶಿಕ್ಷಕಿ ಸಂಧ್ಯಾ ಕಾಮತ್ ಪ್ರಸ್ತಾವನೆ ಮಾಡಿ ಸಂಸ್ಕೃತ ಗೀತೆ ಹಾಡಿದರು. ವಿದ್ಯಾರ್ಥಿಗಳು ಸಂಧ್ಯಾ ಕಾಮತ್‌ರವರಿಗೆ ಗೌರವಾರ್ಪಣೆ ಮಾಡಿದರು.ಶಿಬಿರಾರ್ಥಿಗಳು ಸಂಸ್ಕೃತ ಭಾಷೆಯಲ್ಲೆ ಪ್ರಹಸನ, ಹಾಡು ಮತ್ತು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾ ಸ್ವಾಗತಿಸಿದರು. ಸೌಮ್ಯ ವಂದಿಸಿದರು. ರೂಪಾ ನಿರೂಪಿಸಿದರು.