ಸಾರಾಂಶ
ರಾಜ್ಯದಲ್ಲಿ ಮೊದಲು ತುಂಬುವ ಜಲಾಶಯ ಎಂದೇ ಹೆಸರುವಾಸಿಯಾದ ಕಬಿನಿ ಜಲಾಶಯ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಕೆಆರ್ಎಸ್ ಜೊತೆಗೆ ಕಬಿನಿ ಜಲಾಶಯಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.27 ರಂದೇ ಬಾಗಿನ ಅರ್ಪಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಕೆ.ಆರ್.ಎಸ್ ಮಾದರಿಯಲ್ಲಿ ಕಬಿನಿ ಜಲಾಶಯದ ಮುಂಭಾಗದಲ್ಲೂ ಉದ್ಯಾನವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವರು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದ್ದಾರೆ.
ತಾಲೂಕಿನ ಕಬಿನಿ ಜಲಾಶಯಕ್ಕೆ ಭೇಟಿ ನೀಡಿ ಜಲಾಶಯ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಮೊದಲು ತುಂಬುವ ಜಲಾಶಯ ಎಂದೇ ಹೆಸರುವಾಸಿಯಾದ ಕಬಿನಿ ಜಲಾಶಯ, ಜುಲೈ ಮೊದಲ ವಾರದಲ್ಲಿ ತುಂಬಿದೆ. ತಮಿಳುನಾಡಿಗೆ ಕಾವೇರಿ ಜಲಾನಯನ ಪ್ರದೇಶದಿಂದ ಜುಲೈ ತಿಂಗಳಲ್ಲಿ ನೀಡಬೇಕಾಗಿದ್ದ ನೀರಿನ ಪೈಕಿ ಕಬಿನಿ ಜಲಾಶಯ ಒಂದರಲ್ಲೇ 25 ಟಿಎಂಸಿ ನೀರನ್ನು ಬಿಡುವ ಮೂಲಕ ರಾಜ್ಯದ ಗೌರವವನ್ನು ಕಾಪಾಡಲಾಗಿದೆ ಎಂದರು. ಜಲಾಶಯದ ಮುಳುಗಡೆ ಆಗಿ ನಿರಾಶ್ರಿತರಾದ 47 ಕುಟುಂಬಗಳಿಗೆ ನಿವೇಶನ ನೀಡಲಾಗಿದೆ. ಮನೆ ಕಟ್ಟಿಕೊಡಲು ಕ್ರಮ ವಹಿಸಲಾಗುತ್ತದೆ ಎಂದು ಅವರು ತಿಳಿಸಿದರು.ತಹಸೀಲ್ದಾರ್ ಶ್ರೀನಿವಾಸ್, ಕಬಿನಿ ಇಇ ಚಂದ್ರಶೇಖರ್, ಎಇಇ ಗಣೇಶ್, ಎಇ ರಮೇಶ್ ಬಾಬು, ವಿಶ್ವನಾಥ್ ಮೊದಲಾದವರು ಇದ್ದರು.